ಲಂಡನ್, ಜ 11(ಯುಎನ್ ಐ) ಐಷಾರಾಮಿ ಕಾರುಗಳ ಬ್ರ್ಯಾಂಡ್ ರೋಲ್ಸ್ ರಾಯ್ಸ್ ಇತಿಹಾಸ ನಿರ್ಮಿಸಿದೆ. ಕೊರೊನಾ ಅವಧಿಯಲ್ಲಿ 117 ವರ್ಷಗಳ ಹಳೆಯ ದಾಖಲೆ ಮುರಿದಿದೆ. 2021 ರಲ್ಲಿ ದಾಖಲೆಯ ಪ್ರಮಾಣದ ಮಾರಾಟದೊಂದಿಗೆ ಸಂಚಲನ ಸೃಷ್ಟಿಸಿದೆ ಎಂದು ಸೋಮವಾರ ಹೇಳಿಕೆ ಬಿಡುಗಡೆಮಾಡಿದೆ.
ಬ್ರಿಟನ್ ಗೆ ಸೇರಿದ ಕಾಸ್ಟಲಿ ಬ್ರ್ಯಾಂಡ್ ‘ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್’ ತನ್ನ ಮಾರಾಟವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಅಮೆರಿಕಾ ಖಂಡಗಳು, ಏಷ್ಯಾ-ಪೆಸಿಫಿಕ್, ಗ್ರೇಟರ್ ಚೀನಾ ಪ್ರದೇಶಗಳ ಜೊತೆ ಇತರ ದೇಶಗಳು ಸೇರಿ ಒಟ್ಟು 5,586 ಕಾರುಗಳು ಮಾರಾಟವಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಹೆಚ್ಚಳ ಶೇಕಡಾ 50 ರಷ್ಟು ದಾಖಲಾಗಿದೆ. ರೋಲ್ಸ್ ರಾಯ್ಸ್ ನ 117 ವರ್ಷಗಳ ಇತಿಹಾಸದಲ್ಲಿ ಈ ಶ್ರೇಣಿಯಲ್ಲಿ ಕಾರುಗಳು ಮಾರಾಟವಾಗುತ್ತಿರುವುದು ಇದೇ ಮೊದಲು.
ಎಲ್ಲಾ ವಾಹನ ತಯಾರಕರು ಕಳೆದ ಒಂದು ವರ್ಷದಿಂದ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿವೆ. ಆದರೆ, ಕೊರೊನಾ.. ಹಾಗಾಗಿ ಸೆಮಿಕಂಡಕ್ಟರ್ ಕೊರತೆ’ ಮುಂದುವರಿದಿರುವ ಸಮಯದಲ್ಲಿ ರೋಲ್ಸ್ ರಾಯ್ಸ್ ದಾಖಲೆಯ ಮಾರಾಟ ಅಚ್ಚರಿಯ ವಿಷಯವಾಗಿದೆ!. 2020 ಕ್ಕೆ ಹೋಲಿಸಿದರೆ .. 2021 ಮಾರಾಟದಲ್ಲಿ ಶೇಕಡಾ 48 ರಷ್ಟು ಬೆಳವಣಿಗೆ ಮತ್ತೊಂದು ದಾಖಲೆಯಾಗಿದೆ. ರೋಲ್ಸ್ ರಾಯ್ಸ್ ‘ಘೋಸ್ಟ್’ , ಕುಲ್ಲಿನಾನ್ ಎಸ್ಯುವಿ ಮಾರಾಟಕ್ಕೆ ಹೆಚ್ಚಿದ ಬೇಡಿಕೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ವಿಶ್ಲೇಷಕರ ಅಭಿಮತವಾಗಿದೆ.
ಬ್ರಿಟನ್ ಈ ದುಬಾರಿ ಬ್ರ್ಯಾಂಡ್ ‘ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್’ ತನ್ನ ಮಾರಾಟವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ ಅಮೆರಿಕಾ, ಏಷ್ಯಾ-ಪೆಸಿಫಿಕ್, ಗ್ರೇಟರ್ ಚೀನಾ ಹಾಗೂ ಇತರ ದೇಶಗಳಲ್ಲಿ ಒಟ್ಟು 5,586 ಕಾರುಗಳು ಮಾರಾಟವಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಹೆಚ್ಚಳ ಶೇಕಡಾ 50 ರಷ್ಟು ದಾಖಲಾಗಿದೆ. ರೋಲ್ಸ್ ರಾಯ್ಸ್ ನ 117 ವರ್ಷಗಳ ಇತಿಹಾಸದಲ್ಲಿ ಈ ಶ್ರೇಣಿಯಲ್ಲಿ ಕಾರುಗಳು ಮಾರಾಟವಾಗುತ್ತಿರುವುದು ಇದೇ ಮೊದಲು.
ಹನ್ನೆರಡು ವರ್ಷಗಳ ಹಿಂದೆ ರೋಲ್ಸ್ ರಾಯ್ಸ್ ಕಾರು ಮಾಲೀಕರ ಸರಾಸರಿ ವಯಸ್ಸು 54 ವರ್ಷಗಳಿತ್ತು…ಈಗ ವಯಸ್ಸು 43 ವರ್ಷಗಳಾಗಿರುವುದು ವಿಶೇಷ
ಏತನ್ಮಧ್ಯೆ, ರೋಲ್ಸ್ ರಾಯ್ಸ್ ಮೊದಲ E V ಕಾರು ಸ್ಪೆಕ್ಟರ್ ತಯಾರಿಸುವಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದೆ. ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್ ಎಂಬುದು B M W ಗ್ರೂಪ್ (ಜರ್ಮನ್ ಆಟೋ ದೈತ್ಯ) ಅಂಗಸಂಸ್ಥೆಯಾಗಿದೆ. 1998 ರಿಂದ ಮುಂದುವರಿದಿದೆ.