Connect with us


      
ಕರ್ನಾಟಕ

ಮಾರ್ಚ್ 15ರಂದು ಪಂಚಮಸಾಲಿ ಹೋರಾಟಗಾರರ ದುಂಡುಮೇಜಿನ ಸಭೆ

Iranna Anchatageri

Published

on

ಬೆಂಗಳೂರು: ಮಾರ್ಚ್ 11 (ಯು.ಎನ್.ಐ.) ಪಂಚಮಸಾಲಿ 2ಎ ಮೀಸಲಾತಿಗಾಗಿ ಮಾರ್ಚ್ 15ರ ಅಧಿವೇಶನದಲ್ಲಿ ಸರ್ಕಾರ ಕೊಟ್ಟ ಭರವಸೆಗೆ ಒಂದು ವರ್ಷ ಪೂರ್ಣಗೊಂಡಿದ್ದರಿಂದ 2022 ಮಾರ್ಚ್ 15ರಂದು ಬೆಂಗಳೂರಿನಲ್ಲಿ ಪಂಚಮಸಾಲಿ ಹೋರಾಟಗಾರರ ದುಂಡುಮೇಜಿನ ಸಭೆ ಕರೆಯಲಾಗಿದೆ.

ಕೃಷಿ ಆಧಾರಿತ ಲಿಂಗಾಯತ ಪಂಚಮಸಾಲಿ ಸಮಾಜ ಲಿಂಗಾಯತಗೌಡ, ಮಲೇಗೌಡ ಹಾಗೂ ದೀಕ್ಷ ಲಿಂಗಾಯತ ಪಂಚಮಸಾಲಿಗಳಿಗೆ 2ಎ ಮೀಸಲಾತಿಗೆ ಹಕ್ಕೊತ್ತಾಯಿಸಲಾಗುತ್ತಿದೆ. ಬೇಡಿಕೆ ಈಡೇರಿಕೆಗಾಗಿ ಕೂಡಲಸಂಗಮದಿಂದ ವಿಧಾನಸೌಧದವರೆಗೆ ಪಾದಯಾತ್ರೆ, ಸ್ವಾತಂತ್ರ್ಯ ಉದ್ಯಾನವನದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಕೈಗೊಳ್ಳಾಗಿತ್ತು. ಇನ್ನೊಂದೆಡೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿರಂತರ ಅಧಿವೇಶನದ ಒಳಗಡೆ ಹೋರಾಟ ಮಾಡಿದ ಪರಿಣಾಮ 2021 ಮಾರ್ಚ್ 15ರಂದು  ಅಧಿವೇಶನದಲ್ಲಿ  ಸೆಪ್ಟೆಂಬರ್ 15 ರೊಳಗೆ ಈಡೇರಿಸುತ್ತೇವೆ ಎಂಬುದಾಗಿ ಹೇಳಿತ್ತು.

ಬೆಳಗಾವಿಯಲ್ಲಿ ನಡೆದ ಶಾಸಕರ ಸಭೆಯಲ್ಲಿ ಬಸನಗೌಡ ಅವರ ಮನವಿ ಮೇರೆಗೆ ಬಸವನಗೌಡ ಪಾಟೀಲ್ ಯತ್ನಾಳ್‌ ಸಚಿವರುಗಳಾದ ಸಿ.ಸಿ.ಪಾಟೀಲ್ , ಶಂಕರಗೌಡ ಪಾಟೀಲ್ ಮುನೇನಕೊಪ್ಪ, ಅರವಿಂದ ಬೆಲ್ಲದ್, ಸಿದ್ದು ಸವದಿ ಹಾಗೂ ಇನ್ನಿತರ ಹಾಲಿ ಮಾಜಿ ಶಾಸಕರುಗಳಿಗೆ ಬಜೆಟ್‌ ಅಧಿವೇಶನದೊಳಗಾಗಿ ಮೀಸಲಾತಿ ಘೋಷಿಸುತ್ತೇವೆ ಎಂದು ಮಾತು ಕೊಟ್ಟಿದ್ದಾರೆ. ಆದರೆ ಇದುವರೆಗೂ ಅಂದಿನ ಸರ್ಕಾರ ಹಾಗೂ ಇಂದಿನ ಸರ್ಕಾರ ಕೊಟ್ಟ ಮಾತುಗಳು ಒಂದು ವರ್ಷವಾದರೂ ಈಡೇರದ ಇರುವುದು. ನಾಡಿನ ಲಿಂಗಾಯತ ಪಂಚಮಸಾಲಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಆದ್ದರಿಂದ ಮಾರ್ಚ್ 15ಕ್ಕೆ ಸರ್ಕಾರ ಕೊಟ್ಟ ಮಾತಿನ ಅವಧಿ ಮುಗಿಯುತ್ತಿರುವುದರಿಂದ 2022 ಮಾರ್ಚ್ 15 ರ ಮಂಗಳವಾರ ಬೆಂಗಳೂರಿನಲ್ಲಿ ಪಂಚಮಸಾಲಿ ಹೋರಾಟಗಾರರ ದುಂಡುಮೇಜಿನ ಸಭೆ ಕರೆಯಲಾಗಿದೆ.

Share