Connect with us


      
ಸಿನೆಮಾ

ಒಂದೇ ದಿನ 200 ಕೋಟಿ ಕಲೆಹಾಕಿತಾ ಆರ್ ಆರ್ ಆರ್ ಸಿನಿಮಾ?

Vanitha Jain

Published

on

ಹೈದರಾಬಾದ್: ಮಾರ್ಚ್ 26 (ಯು.ಎನ್.ಐ.) ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ಅಭಿನಯದ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಅಂತಿಮವಾಗಿ ಬಿಡುಗಡೆಯಾಗಿದ್ದು, ಕೊನೆಗೂ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಭರ್ಜರಿ ಪ್ರದರ್ಶನ ಕಾಣುತ್ತಿರುವ ಅರ್ ಆರ್ ಆರ್ ಸಿನಿಮಾದ ಟಿಕೆಟ್ ಗಳು ಕೆಲವೆಡೆ ಸೋಲ್ಡ್ ಔಟ್ ಆಗಿವೆ.

ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರತಿಕ್ರಿಯೆಗೆ ತೆರೆದುಕೊಂಡಿದೆ. ಭಾರತದಲ್ಲಿ ಮೊದಲ ದಿನವೇ 18 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ಯುಎಸ್‌ನಲ್ಲಿ ಆರ್‌ಆರ್‌ಆರ್ ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಆರ್‌ಆರ್‌ಆರ್ ಬಾಕ್ಸ್ ಆಫೀಸ್ ಕಲೆಕ್ಷನ್ ಡೇ 1

ಆರ್‌ಆರ್‌ಆರ್ ಬಾಕ್ಸ್ ಆಫೀಸ್‌ನಲ್ಲಿ ಘರ್ಜಿಸುತ್ತಿದೆ. ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಪ್ರಕಾರ, ಆರ್ ಆರ್ ಆರ್ ಚಿತ್ರದ ಹಿಂದಿ ಆವೃತ್ತಿಯು ಮೊದಲ ದಿನವೇ 18 ಕೋಟಿ ರೂ. ಗಳಿಸಿದೆ. ತೆಲುಗು ರಾಜ್ಯಗಳಲ್ಲಿ ಈ ಚಿತ್ರ ಎಲ್ಲಾ ದಾಖಲೆಗಳನ್ನು ಮುರಿದು 100 ಕೋಟಿ ರೂ. ಗಡಿ ದಾಟಿದೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲೂ ಚಿತ್ರ ಭರ್ಜರಿಯಾಗಿ ಮುನ್ನುಗ್ಗುತ್ತಿದ್ದು, ಯುಕೆಯಲ್ಲಿ ಈ ಚಿತ್ರ 2.40 ಕೋಟಿ ಗಳಿಸಿದೆ. ವರದಿ ಪ್ರಕಾರ ಚಿತ್ರ ಈಗಾಗಲೇ ಒಂದೇ ದಿನಕ್ಕೆ 200 ಕೋಟಿ ರೂ. ಕಲೆಹಾಕಿದೆ.

ಆರ್ ಆರ್ ಆರ್ ಸಿನಿಮಾ

ಆರ್ ಆರ್ ಆರ್ ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಮತ್ತು ಜೂನಿಯರ್ ಎನ್‌ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್‌ಆರ್‌ಆರ್ ಅನ್ನು ಡಿವಿವಿ ದಾನಯ್ಯ ಅವರು 450 ಕೋಟಿ ರೂಪಾಯಿಗಳ ಬೃಹತ್ ಬಜೆಟ್ ನಲ್ಲಿ ನಿರ್ಮಿಸಿದ್ದಾರೆ. ಆಲಿಯಾ ಭಟ್, ಸಮುದ್ರಕನಿ, ಅಜಯ್ ದೇವಗನ್, ರೇ ಸ್ಟೀವನ್ಸನ್, ಅಲಿಸನ್ ಡೂಡಿ ಮತ್ತು ಒಲಿವಿಯಾ ಮಾರಿಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Share