Connect with us


      




ಸಿನೆಮಾ

ರಾಧೆಶ್ಯಾಮ್ ಚಿತ್ರ ಬಿಡುಗಡೆ ಮುಂದೂಡಿಕೆ; ಊಹಾಪೋಹಗಳಿಗೆ ತೆರೆ

UNI Kannada

Published

on

ಜನವರಿ: 01 (ಯು.ಎನ್.ಐ.) ತೆಲುಗಿನ ಬಾರಿ ಬಜೆಟ್ ಆರ್ ಆರ್ ಆರ್, ರಾಧೆಶ್ಯಾಮ್, ಸಿನಿಮಾಗಳು ಈಗಾಗಲೇ ಜನವರಿಯಲ್ಲಿ ತೆರೆಕಾಣಲಿವೆ ಎಂದು ಹೇಳಿಕೆ ನೀಡಲಾಗಿತ್ತು.  ಆದರೆ ಕೋವಿಡ್ ರೂಪಾಂತರಿ ಒಮೈಕ್ರಾನ್ ದೇಶವ್ಯಾಪ್ತಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಚಿತ್ರಗಳ ಬಿಡುಗಡೆಯ ದಿನಾಂಕ ಮುಂದೂಡಬಹುದು ಎಂಬ ಹೇಳಲಾಗುತ್ತಿದೆ.

ಈ ರೀತಿಯ ಹೇಳಿಕೆಗಳು ಕೇಳಿಬರುತ್ತಿರುವ ಬೆನ್ನಲ್ಲೇ ರಾಧೆಶ್ಯಾಮ್ ಸಿನಿಮಾ ತಂಡ ಇಂದು ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದೆ. ಇದರಲ್ಲಿ ಸಿನಿಮಾ ಬಿಡುಗಡೆಯ ದಿನಾಂಕ ಜನವರಿ 14 ಎಂದು ಪ್ರಕಟಿಸುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ.

ರಾಧೆಶ್ಯಾಮ್ ಬಹುಭಾಷ ಚಿತ್ರವಾಗಿದ್ದೂ ಪ್ರಭಾಸ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ನಾಯಕಿಯಾಗಿ ಪೂಜಾ ಹೆಗ್ಡೆ ತೆರೆ ಹಂಚಿಕೊಳ್ಳಲಿದ್ದಾರೆ.

Share