Connect with us


      
ದೇಶ

‘ಆರ್​ಆರ್​ಆರ್’​ ಸಿನಿಮಾದ ನಾಚೋ ನಾಚೋ ಹಾಡು ಬಿಡುಗಡೆ

Bindushree Hosuru

Published

on

ಚೆನ್ನೈ: ನ. 10 (ಯುಎನ್ಐ) ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​​ ಸಿನಿಮಾದ ನಾಚೋ ನಾಚೋ ಹಾಡು ನವೆಂಬರ್ 10 ರಂದು ಬಿಡುಗಡೆಯಾಗಿದೆ.

ಈ ಹಾಡಿನಲ್ಲಿ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಡ್ಯಾನ್ಸ್​ ಮಾಡುತ್ತಿದ್ದಾರೆ. ಎಸ್​.ಎಸ್​​. ರಾಜಮೌಳಿ ನಿರ್ದೇಶನದ ಈ ಚಿತ್ರ ಜನವರಿ 7, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

450 ಕೋಟಿ ರೂ. ಬಜೆಟ್‌ನಲ್ಲಿ ಆರ್‌ಆರ್‌ಆರ್ ಸಿನಿಮಾ ನಿರ್ಮಿಸಲಾಗುತ್ತಿದೆ. ಬಾಹುಬಲಿ ಸಿನಿಮಾದ ನಂತರ, ನಿರ್ದೇಶಕ ರಾಜಮೌಳಿ ಅವರ ಮುಂಬರುವ ಚಿತ್ರವಾದ ಆರ್​ಆರ್​ಆರ್​ನನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

 

ಇದೀಗ, ಈ ಸಿನಿಮಾದ ನಾಚೋ ನಾಚೋ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಚಿತ್ರದ ತಂಡದೊಂದಿಗೆ ಸಂವಾದ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ. ಈ ಹಾಡನ್ನು ವಿಶಾಲ್ ಮಿಶ್ರಾ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿದ್ದಾರೆ. ಇದು ಆಕರ್ಷಕ ಬೀಟ್‌ಗಳನ್ನು ಸಹ ಒಳಗೊಂಡಿದೆ.

ಟ್ವಿಟರ್‌ನಲ್ಲಿ ನಾಚೋ ನಾಚೋ ಹಾಡಿನ ಯೂಟ್ಯೂಬ್​​ ಲಿಂಕ್​ನನ್ನು ರಾಮ್ ಚರಣ್ ಹಂಚಿಕೊಂಡಿದ್ದಾರೆ. ಮಾಸ್ ಬೀಟ್‌ಗಳನ್ನು ಹೊಂದಿರುವ ಈ ಹಾಡಿಗೆ ನನ್ನ ಸಹೋದರನ ಜೊತೆ ನೃತ್ಯ ಮಾಡುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಬರೆದಿದ್ದಾರೆ.

 

ಆರ್​ಆರ್​ಆರ್​ ಸಿನಿಮಾ 1920 ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಒಳಗೊಂಡಿದೆ. ಇದರಲ್ಲಿ ಜೂನಿಯರ್ ಎನ್​​ಟಿಆರ್ ಮತ್ತು ರಾಮ್ ಚರಣ್ ಅವರು ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಅವರ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅಲಿಯಾ ಭಟ್, ಅಜಯ್ ದೇವಗನ್, ಒಲಿವಿಯಾ ಮೋರಿಸ್, ರೇ ಸ್ಟೀವನ್ಸನ್ ಮತ್ತು ಅಲಿಸನ್ ಡೂಡಿ ಸೇರಿದಂತೆ ದೊಡ್ಡ ತಾರಾಗಣವಿದೆ. ಈ ಸಿನಿಮಾವನ್ನು ಡಿವಿವಿ ದಾನಯ್ಯ ನಿರ್ಮಿಸಿದ್ದಾರೆ.

Share