Published
6 months agoon
By
UNI Kannadaಹೈದರಾಬಾದ್, ಜ 6 (ಯುಎನ್ ಐ) ಭಾರತೀಯತೆ ಪರಿಕಲ್ಪನೆ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಯ ಇರಬೇಕು ಎಂಬುದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಪರಿಶೀಲಿಸಲಿದೆ. ಆದೇ ರೀತಿ ದೇಶಾದ್ಯಂತ ಉದ್ಯೋಗ ಸೃಷ್ಟಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ. ಆರ್ಎಸ್ಎಸ್ ಅಖಿಲ ಭಾರತ ಸಮನ್ವಯ ಸಭೆಗಳು ಇದಕ್ಕೆ ವೇದಿಕೆಯಾಗಲಿವೆ. ಸಭೆಯಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಆರ್ಎಸ್ಎಸ್ ಸಹ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರೊಂದಿಗೆ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಮೂರು ದಿನಗಳ ಕಾಲ ನಡೆಯಲಿರುಯವ ರಾಷ್ಟ್ರೀಯ ಸಮನ್ವಯ ಸಭೆಗಳು ಹೈದರಾಬಾದ್ನ ಅಣ್ಣೋಜಿಗುಡಾದ ಆರ್ವಿಕೆಯಲ್ಲಿ ಬುಧವಾರ ಪ್ರಾರಂಭಗೊಂಡಿವೆ. ಈ ಸಮಾವೇಶದಲ್ಲಿ ಬಿಜೆಪಿ ಸೇರಿದಂತೆ 36 ಅಂಗ ಸಂಸ್ಥೆಗಳ 216 ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದು ಆರ್ ಎಸ್ ಎಸ್ ಅಖಿಲ ಭಾರತ ಪ್ರಚಾರ ಮುಖ್ಯಸ್ಥ ಸುನಿಲ್ ಅಂಬೇಕರ್ ಹೇಳಿದ್ದಾರೆ. ಸಮಾವೇಶ ಪಾಲ್ಗೊಳ್ಳುವವರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದು, ಕೋವಿಡ್ ನಿಯಮಗಳಿಗೆ ಅನುಸಾರ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಉದ್ಯೋಗ ಸೃಷ್ಟಿ ದೇಶದ ಮುಂದಿರುವ ಸವಾಲಾಗಿದ್ದು, ಗುಜರಾತ್ನಲ್ಲಿ ನಡೆದ ಕಳೆದ ಸಭೆಯಲ್ಲಿ ಈ ಸಂಬಂಧ ಅಧ್ಯಯನ ನಡೆಸಲಾಗಿದೆ. ಹೊಸ ಉದ್ಯೋಗ ಸೃಷ್ಟಿ ಕುರಿತು ಸಮಾಜದ ನಾನಾ ವರ್ಗಗಳ ಅಭಿಪ್ರಾಯ ಪಡೆದಿದ್ದು, ಶೀಘ್ರದಲ್ಲಿಯೇ ಚರ್ಚೆ ನಡೆಸಲಾಗುವುದು ಎಂದು ವಿವರಿಸಿದರು. ಈ ಸಭೆಗಳಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಅಭಿಪ್ರಾಯಗಳ ಅಭಿವ್ಯಕ್ತಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅಂಬೇಕರ್ ಹೇಳಿದ್ದಾರೆ.
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಜುಬೇರ್ ಬಂಧನ; ಜರ್ಮನಿ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ಕೇಂದ್ರ
ಚೀನಾದ ಕಂಪನಿಗಳು ಭಾರತದ ಕಾನೂನು ಪಾಲಿಸಬೇಕು: ವಿದೇಶಾಂಗ ಸಚಿವಾಲಯ
ಶೀಘ್ರದಲ್ಲೇ ವಾಣಿಜ್ಯ ಹಾರಾಟ ನಡೆಸಲಿದೆ ‘ಆಕಾಶ ಏರ್’
ಫೋನ್ ಹಿಂತಿರುಗಿಸಲು ನಿರಾಕರಿಸಿದ್ದಕ್ಕೆ ಸ್ನೇಹಿತನ ಕೊಂದ ಪಾಪಿ
ಹಿಂದೂ ವ್ಯಕ್ತಿಯ ಅಂತಿಮ ವಿಧಿವಿಧಾನ ನೆರವೇರಿಸಿದ ಮುಸ್ಲಿಂ ಕುಟುಂಬ
41ನೇ ವಸಂತಕ್ಕೆ ಕಾಲಿಟ್ಟ ಎಂ.ಎಸ್ ಧೋನಿ