Connect with us


      




ಶಿಕ್ಷಣ

ಆರ್ ಟಿ ಇ ಕಾಯ್ದೆ-ನಾಳೆ ದಾವಣಗೆರೆಯಲ್ಲಿ ದುಂಡುಮೇಜಿನ ಸಭೆ

Kumara Raitha

Published

on

ದಾವಣಗೆರೆ, ನ ೧೪(ಯುಎನ್ ಐ) ರಾಜ್ಯದಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ -ಆರ್‌ಟಿಇ ಕಾಯ್ದೆ ಅನುಷ್ಠಾನ ಕುರಿತಂತೆ ನಾಳೆ ದಾವಣಗೆರೆಯಲ್ಲಿ ರಾಜ್ಯಮಟ್ಟದ ದುಂಡು ಮೇಜಿನ ಸಭೆ ನಡೆಯಲಿದೆ.

ರಾಜ್ಯದ ೨೫ ಶೈಕ್ಷಣಿಕ ಜಿಲ್ಲೆಗಳ ೫೦ ಮಂದಿ ಸಂಪನ್ಮೂಲ ವ್ಯಕ್ತಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆರ್ ಟಿ ಇ ಸೌಲಭ್ಯವನ್ನು ೧೦ ನೇ ತರಗತಿವರೆಗೆ ವಿಸ್ತರಣೆ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ತಡೆ, ಆರ್ ಟಿ ಇ ಮರು ಚಾಲನೆ  ಕುರಿತ ಸುಪ್ರೀಂಕೋರ್ಟ್ ಪ್ರಕರಣ ಪರಾಮರ್ಶೆ ಮತ್ತಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಆಡಳಿತ ಮಂಡಳಿಗಳ ಪ್ರತಿನಿಧಿಗಳು, ಶಿಕ್ಷಕರು, ಪೋಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಸಂಗ್ರಹಿಸಿ ತೆಗೆದುಕೊಂಡ ನಿರ್ಣಯಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಆರ್‌ಟಿಇ ಶಾಲೆಗಳ ಪೋಷಕರ ಸಂಘದ ಜಿಲ್ಲಾಧ್ಯಕ್ಷ ಅಣಬೇರು ಶಿವಮೂರ್ತಿ ತಿಳಿಸಿದ್ದಾರೆ.

Share