Connect with us


      
ವಿದೇಶ

ರಷ್ಯಾ ಅಧ್ಯಕ್ಷ ಪುಟಿನ್‌ ಬೆಳಗ್ಗೆ ಎದ್ದು ಮಧ್ಯ ರಾತ್ರಿಯವರೆಗೆ ಏನುಮಾಡುತ್ತಾರೆ ಗೊತ್ತಾ…?

UNI Kannada

Published

on

ಮಾಸ್ಕೋ, ಜ 16 (ಯುಎನ್‌ ಐ) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಳೆದ ತಿಂಗಳು ಭಾರತಕ್ಕೆ ಆಗಮಿಸಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ವ್ಲಾಡಿಮಿರ್ ಪುಟಿನ್ ಅವರ ನಿರ್ಧಾರಗಳಂತೆ ಅವರ ದಿನಚರಿ ಆಸಕ್ತಿಯುತವಾಗಿ ಸಾಗುತ್ತದೆ. ಪುಟಿನ್ ಅವರ ದಿನಚರಿ ಹೇಗಿರುತ್ತದೆ ಎಂದು ತಿಳಿದುಕೊಳ್ಳೋಣ. ರಾತ್ರಿ ತಡವಾಗಿ ಮಲಗುವ ಪುಟಿನ್ ತಮ್ಮ ದಿನಚರಿಯನ್ನು ತಡವಾಗಿ ಆರಂಭಿಸುತ್ತಾರೆ. ಪುಟಿನ್ ತಮ್ಮ ಉಪಹಾರದಲ್ಲಿ ಬೇಯಿಸಿದ ಮೊಟ್ಟೆ, ಆಮ್ಲೆಟ್ ಸೇವಿಸುತ್ತಾರೆ. ಈ ಮೊಟ್ಟೆಗಳು ಕಿರಿಲ್ ಫಾರ್ಮ್‌ಲ್ಯಾಂಡ್ ಎಂಬ ವಿಶೇಷ ಫಾರ್ಮ್‌ಹೌಸ್‌ನಿಂದ ಬರುತ್ತವೆ. ಪ್ರೋಟೀನ್, ಉತ್ತಮ ಕೊಬ್ಬಿಗಾಗಿ ಕಾಟೇಜ್ ಚೀಸ್ ಅನ್ನು ಉಪಾಹಾರದಲ್ಲಿ ಬಳಸುತ್ತಾರೆ. ನಂತರ ಹಣ್ಣಿನ ರಸ ಸೇವಿಸುತ್ತಾರೆ. ಬೆಳಗಿನ ಉಪಾಹಾರದ ನಂತರ ಪುಟಿನ್ ಕಾಫಿ ಕುಡಿಯಲು ಇಷ್ಟಪಡುತ್ತಾರೆ . ಪುಟಿನ್ ಈಜು ಕೊಳದಲ್ಲಿ ಸಮಯ ಕಳೆಯಲು ಬಹಳ ಹೆಚ್ಚು ಇಷ್ಟಪಡುತ್ತಾರೆ, ದಿನಕ್ಕೆ 2 ಗಂಟೆಗಳ ಕಾಲ ಈಜುತ್ತಾರೆ. ನಂತರ ವ್ಯಾಯಾಮ ಮಾಡುತ್ತಾರೆ. ಪುಟಿನ್ ಧರಿಸಿರುವ ಜಿಮ್ ಡ್ರೆಸ್ ಬೆಲೆ ರೂ. 2.5 ಲಕ್ಷ . ಪುಟಿನ್… ಜಿಮ್‌ನಲ್ಲಿ ಕಾರ್ಡಿಯೋ, ವೇಟ್‌ಲಿಫ್ಟಿಂಗ್ ಮಾಡಲು ಇಷ್ಟಪಡುತ್ತಾರೆ.

ಪುಟಿನ್ ದಿನನಿತ್ಯ ವ್ಯಾಯಾಮದ ಪರಿಣಾಮ ಅವರ ದೇಹದ ಆಕಾರದಲ್ಲಿ ಕಾಣಿಸುತ್ತದೆ. ರಷ್ಯಾದ ಮಾಧ್ಯಮ ವರದಿಗಳ ಪ್ರಕಾರ, ಪುಟಿನ್ ಬೆಳಿಗ್ಗೆ ತಾಲೀಮು ನಂತರ ಸಭೆಗಳ ಮೇಲೆ ಕೇಂದ್ರೀಕರಿಸುತ್ತಾರೆ. ಸಭೆಗಳಿಗೆ ಹಾಜರಾಗುವಾಗ ವಿಶೇಷ ಬ್ರಾಂಡ್ ಉಡುಪುಗಳನ್ನು ಧರಿಸುತ್ತಾರೆ. ಪುಟಿನ್ ಅವರ ಬಟ್ಟೆಗಳನ್ನು ಇಟಾಲಿಯನ್ ಕಂಪನಿ ಕಿಟನ್ ಬ್ರಿಯೊನಿ ಸಿದ್ದಪಡಿಸುತ್ತದೆ. ಸಿಬ್ಬಂದಿ ನೀಡುವ ಮಾಹಿತಿ ಆಧಾರದ ಮೇಲೆ ಪುಟಿನ್ ಅವರ ಸಭೆಗಳು ಮುಂದುವರಿಯುತ್ತವೆ. ಈ ಸಂಕ್ಷಿಪ್ತ ಸಂದೇಶಗಳಲ್ಲಿ ಗುಪ್ತಚರ ಮಾಹಿತಿಗಳನ್ನ ಸಹ ಒಳಗೊಂಡಿರುತ್ತದೆ. ಪುಟಿನ್.. ತಂತ್ರಜ್ಞಾನದಿಂದ ದೂರ ಉಳಿದಿದ್ದಾರೆ . ಕಂಪ್ಯೂಟರ್ , ಸ್ಮಾರ್ಟ್‌ಫೋನ್‌ಗಳನ್ನು ಅತ್ಯಂತ ಕಡಿಮೆ ಬಳಸುತ್ತಾರೆ. ರಷ್ಯಾ ಸರ್ಕಾರದ ಕ್ರೆಮ್ಲಿನ್ ಪ್ರಧಾನ ಕಛೇರಿಯ ಪುಟಿನ್ ಅವರ ನಿವಾಸದಿಂದ ಸುಮಾರು 25 ನಿಮಿಷಗಳ ದೂರದಲ್ಲಿದೆ. ಪುಟಿನ್ ಸಂಜೆ ತನ್ನ ಸಾಕುಪ್ರಾಣಿಗಳಾದ ಕೋನಿ, ಬಫಿಯೊಂದಿಗೆ ಕಾಲ ಕಳೆಯುತ್ತಾರೆ. ಆದೇ ರೀತಿ ಕಪ್ಪು ಸಮುದ್ರದ ತೀರದಲ್ಲಿ ನಿರ್ಮಿಸಲಾದ ನೊವೊ-ಒಗರಿಯೋವಾ ಎಸ್ಟೇಟ್ ಕಾಂಪ್ಲೆಕ್ಸ್‌ನಲ್ಲಿ ಸಮಯ ಕಳೆಯುವುದನ್ನು ಅವರು ಆನಂದಿಸುತ್ತಾರೆ. ಪುಟಿನ್ ಅವರಿಗೆ ರಾತ್ರಿ ತಡವಾಗಿ ಮಲಗುವ, ಪುಸ್ತಕ ಓದುವ ಅಭ್ಯಾಸವಿದೆ. ಅದರಲ್ಲೂ ರಾತ್ರಿ ಊಟದ ನಂತರ ಪಿಸ್ತಾ ರುಚಿಯ ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಾರೆ. ಪುಟಿನ್ ಸಾಮಾನ್ಯವಾಗಿ ಮದ್ಯಪಾನ ಇಷ್ಟಪಡುವುದಿಲ್ಲ, ವಿಶೇಷ ಕಾರ್ಯಕ್ರಮಗಳಲ್ಲಿ ಮಾತ್ರ ಮಧ್ಯ ಸೇವಿಸುತ್ತಾರೆ.

Share