Connect with us


      




ವಿದೇಶ

‘ಪರಮಾಣು ಅಸ್ತ್ರ ಬಳಸಲು ಹಿಂಜರಿಯುವುದಿಲ್ಲ’ – ರಷ್ಯಾ

Iranna Anchatageri

Published

on

ಮಾಸ್ಕೋ: ಮಾರ್ಚ್ 23 (ಯು.ಎನ್.ಐ.) ಉಕ್ರೇನ್ ಮೇಲೆ ಪರಮಾಣು ಅಸ್ತ್ರವನ್ನು ಬಳಸಲು ಹಿಂಜರಿಯುವುದಿಲ್ಲ ಎಂದು ರಷ್ಯಾ ಹೇಳಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಖ್ಯ ವಕ್ತಾರ ಡೆಮಿಟ್ರಿ ಪೆಸ್ಕೋವ್ ಅವರು ಉಕ್ರೇನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆಯನ್ನು ತಳ್ಳಿಹಾಕಲು ನಿರಾಕರಿಸಿದ್ದಾರೆ.

ಮಂಗಳವಾರ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ, ಮಾಸ್ಕೋ “ಅಸ್ತಿತ್ವದ ಬೆದರಿಕೆ”ಯ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ರಷ್ಯಾ ಪರಿಗಣಿಸುತ್ತದೆ. ಇದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಪೆಸ್ಕೋವ್ ಪದೇ ಪದೇ ಹೇಳಿದರು.

ಉಕ್ರೇನ್‌ನಲ್ಲಿ ಪುಟಿನ್ ಇಲ್ಲಿಯವರೆಗೆ ಏನೂ ಸಾಧಿಸಿದ್ದಾರೆಂಬ ಪ್ರಶ್ನೆಗೆ ಪೆಸ್ಕೋವ್ “ಅವರು ಇನ್ನೂ ಸಾಧಿಸಿಲ್ಲ. ಉಕ್ರೇನ್ ನಲ್ಲಿನ ವಿಶೇಷ ಮಿಲಿಟರಿ ಕಾರ್ಯಾಚರಣೆಗಳ ಯೋಜನೆಗಳು ಮತ್ತು ಉದ್ದೇಶಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ನಡೆಯುತ್ತಿದೆ” ಎಂದು ಹೇಳಿದರು.

ಪುಟಿನ್ ಅವರ ಬೇಡಿಕೆಗಳನ್ನು ಪುನರುಚ್ಚರಿಸಿದ ಪೆಸ್ಕೋವ್, “ಕಾರ್ಯಾಚರಣೆಯ ಮುಖ್ಯ ಗುರಿ ಉಕ್ರೇನ್‌ನ ಮಿಲಿಟರಿ ಸಾಮರ್ಥ್ಯವನ್ನು ತೊಡೆದುಹಾಕುವುದು, ಉಕ್ರೇನ್ “ತಟಸ್ಥ ದೇಶ” ಎಂದು ಖಚಿತಪಡಿಸಿಕೊಳ್ಳಲು, 2014ರಲ್ಲಿ ರಷ್ಯಾದಿಂದ ಸ್ವಾಧೀನಪಡಿಸಿಕೊಂಡ ಕ್ರೈಮಿಯಾ ರಷ್ಯಾದ ಭಾಗವಾಗಿದೆ ಮತ್ತು ಲುಹಾನ್ಸ್ಕ್ ಮತ್ತು ಡೊನೆಟ್ಸ್ಕ್ನ ಈಗಾಗಲೇ ಸ್ವತಂತ್ರ ರಾಜ್ಯಗಳಾಗಿವೆ ಎಂದು ಉಕ್ರೇನ್ ಒಪ್ಪಿಕೊಳ್ಳಬೇಕು” ಎಂದು ತಿಳಿಸಿದರು.

ರಷ್ಯಾ ಪಡೆಗಳು ಉಕ್ರೇನ್ ನಲ್ಲಿ ಮಿಲಿಟರಿ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಮಾತ್ರ ದಾಳಿ ನಡೆಸುತ್ತಿದೆ ಎಂದು ತಿಳಿಸಿದರು.

Share