Connect with us


      




ವಿದೇಶ

ರಷ್ಯಾ ಉಕ್ರೇನ್ ಯುದ್ದ ಹಿನ್ನೆಲೆ ಸಾಮಾಜಿಕ ಜಾಲತಾಣಗಳು ಬ್ಯಾನ್ 

UNI Kannada

Published

on

ಉಕ್ರೇನ್ : ಮಾರ್ಚ್ 05 (ಯು.ಎನ್.ಐ.) ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣವು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ರಾಜಧಾನಿ ಕೀವ್ ಮತ್ತು ಖಾರ್ಕಿವ್ ಪ್ರದೇಶಗಳು ರಷ್ಯಾದ ದಾಳಿಗೆ ತುತ್ತಾಗುತ್ತಿವೆ. ಕೀವ್‌ನಲ್ಲಿ ಕನಿಷ್ಠ 10 ನಿಮಿಷಗಳಿಗೊಮ್ಮೆ ಸ್ಫೋಟ ಸಂಭವಿಸುತ್ತಿದೆ ಎಂದು ವರದಿಯಾಗಿದೆ. ಕ್ಷಿಪಣಿ ದಾಳಿಗಳು, ಯುದ್ದ ಟ್ಯಾಂಕ್ ಗಳ  ದಾಳಿ ಭೀಕರವಾಗಿದೆ ಎಂದು ಉಕ್ರೇನ್ ಹೇಳುತ್ತಿದೆ.

ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾದ ಮೇಲಿನ ನಿರ್ಬಂಧಗಳು ಮುಂದುವರಿಯುತ್ತವೆ. ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಷ್ಯಾಕ್ಕೆ ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಚಿಪ್‌ಗಳ ಪೂರೈಕೆಯನ್ನು ಕಡಿತಗೊಳಿಸುವುದಾಗಿ ಸ್ಯಾಮ್‌ಸಂಗ್ ಘೋಷಿಸಿದೆ. ಸ್ಯಾಮ್‌ಸಂಗ್ ತನ್ನ ಉದ್ಯೋಗಿಗಳಿಂದ ಸ್ವಯಂಪ್ರೇರಿತ ದೇಣಿಗೆಯೊಂದಿಗೆ ಉಕ್ರೇನ್‌ಗೆ $ 6 ಮಿಲಿಯನ್ ಆರ್ಥಿಕ ಸಹಾಯವನ್ನು ನೀಡುತ್ತಿದೆ ಎಂದು ಹೇಳಿಕೊಂಡಿದೆ. ಕಂಪನಿಯು $ 1 ಮಿಲಿಯನ್ ಸಹಾಯವನ್ನು ಸಹ ನೀಡುತ್ತಿದೆ ಎಂದು ಸ್ಯಾಮ್‌ಸಂಗ್ ಬಹಿರಂಗಪಡಿಸಿದೆ.

ಉಕ್ರೇನ್ ಮೇಲಿನ ಯುದ್ಧದ ಸಮಯದಲ್ಲಿ ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ. ಟ್ವಿಟರ್, ಫೇಸ್‌ಬುಕ್, ಬಿಬಿಸಿ, ಆಪ್ ಸ್ಟೋರ್ ಸೇವೆಗಳನ್ನು ರಷ್ಯಾ ಸ್ಥಗಿತಗೊಳಿಸಿದೆ ಈ ಮದ್ಯೆ ರಷ್ಯಾ ಸ್ಟೇಟ್ ಮೀಡಿಯಾ ಮೇಲೆ ಮೆಟಾ, ಗೂಗಲ್ ಮತ್ತು ಯೂಟ್ಯೂಬ್ ಸಾಮಾಜಿ ಜಾಲತಾಣಗಳು ಬಳಸುವುದನ್ನು ನಿಷೇಧಿಸಿದ ಹೇರಿವೆ.

Share