Connect with us


      




ವಿದೇಶ

ರಷ್ಯಾ ಬಿಲಿಯನೇರ್‌ಗಳ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವಂತೆ ಝೆಲೆನ್ಸ್ಕಿ ಮನವಿ

Iranna Anchatageri

Published

on

ಕೈವ್: ಮಾರ್ಚ್ 20 (ಯು.ಎನ್.ಐ.) ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ಮಾಸ್ಕೋದೊಂದಿಗೆ ಸಮಗ್ರ ಶಾಂತಿ ಮಾತುಕತೆಗೆ ಕರೆ ನೀಡಿದ್ದಾರೆ. ಈ ಮಧ್ಯೆ, ರಷ್ಯಾದ ಎಲ್ಲಾ ಪ್ರಭಾವಿ ಕೈಗಾರಿಕೋದ್ಯಮಿಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಸ್ವಿಸ್ ಸರ್ಕಾರವನ್ನು ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ.

ಸ್ವಿಸ್‌ನ ಬರ್ನ್‌ನಲ್ಲಿ ಶನಿವಾರ ಲೈವ್‌ಸ್ಟ್ರೀಮ್ ಮೂಲಕ ಝೆಲೆನ್ಸ್‌ಕಿ ಸಾವಿರಾರು ಯುದ್ಧ-ವಿರೋಧಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ಸ್ವಿಟ್ಜರ್ಲೆಂಡ್‌ನ ಸರಕಾರಿ ಪ್ರಸಾರಕ ಎಸ್ಆರ್‌ಎಫ್ ವರದಿ ಮಾಡಿದೆ. “ನಿಮ್ಮ ಬ್ಯಾಂಕ್‌ಗಳಲ್ಲಿ ಈ ಯುದ್ಧ ಮಾಡಿದ ಜನರ ಹಣವಿದೆ. ಅವರ ಹಣದ ಮೇಲೆ ಹಿಡಿತ ಸಾಧಿಸುವ ಮೂಲಕ ಈ ಯುದ್ಧವನ್ನು ಹೋರಾಡಲು ನಮಗೆ ಸಹಾಯ ಮಾಡಿ, ಜೊತೆಗೆ ಅವರಿಂದ ಸವಲತ್ತುಗಳನ್ನು ಕಸಿದುಕೊಳ್ಳುವುದು ಒಳ್ಳೆಯದು” ಎಂದು ಹೇಳಿದರು.

ರಷ್ಯಾದ ಆಕ್ರಮಣದಿಂದಾಗಿ ಝೆಲೆನ್ಸ್ಕಿ, ತನ್ನ ದೇಶಕ್ಕೆ ಸಹಾಯ ಮಾಡಲು ವಿದೇಶಿ ಪ್ರಜೆಗಳಿಗೆ ಪದೇ ಪದೇ ಮನವಿ ಮಾಡುತ್ತಿದ್ದಾರೆ. ಬರ್ನ್‌ನಲ್ಲಿ ನಡೆದ ಯುದ್ಧ-ವಿರೋಧಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ, ಸ್ವಿಸ್ ಬ್ಯಾಂಕ್‌ಗಳು “ಈ ಯುದ್ಧವನ್ನು ನಡೆಸಿದ ಜನರ ಹಣವನ್ನು” ಹಿಡಿದಿಟ್ಟುಕೊಂಡು, ಅವರ ಖಾತೆಗಳನ್ನು ಫ್ರೀಜ್ ಮಾಡುವ ಮೂಲಕ ಯುದ್ಧವನ್ನು ಹೋರಾಡಲು ನಮಗೆ ಸಹಾಯ ಮಾಡಬೇಕೆಂದು ಒತ್ತಾಯಿಸಿದರು.

“ಸಂಪತ್ತು ಕೂಡಿಟ್ಟು ಯುರೋಪಿಯನ್ ಸುಂದರವಾದ ಸ್ವಿಸ್ ನಗರಗಳಲ್ಲಿ ಕುಳಿತುಕೊಂಡು ಉಕ್ರೇನ್ ನಗರಗಳನ್ನು ನಾಶ ಮಾಡುವಂತೆ ಆಜ್ಞೆ ಮಾಡಿ ಆನಂದಪಡುತ್ತಿದ್ದಾರೆ. ಇಂಥವರ ಹಣವನ್ನು ಸ್ಥಗಿತಗೊಳಿಸುವುದು ಒಳ್ಳೆಯದು” ಎಂದು ಅವರು ಹೇಳಿದರು.

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸ್ವಿಟ್ಜರ್ಲೆಂಡ್ ತಟಸ್ಥವಾಗಿ ಉಳಿದಿದೆ. ಅಲ್ಲದೆ ಸ್ವಿಸ್ ಯುರೋಪಿಯನ್ ಒಕ್ಕೂಟದ ಸದಸ್ಯನಲ್ಲ. ಆದರೆ ಸ್ವಿಸ್ ಬ್ಯಾಂಕ್‌ಗಳಲ್ಲಿ ರಷ್ಯಾದ ಶ್ರೀಮಂತ ನಾಗರಿಕರ ಸಂಪತ್ತನ್ನು ಫ್ರೀಜ್ ಮಾಡುವ ಆದೇಶಗಳನ್ನು ಒಳಗೊಂಡಂತೆ ರಷ್ಯಾದ ವ್ಯಕ್ತಿಗಳು ಮತ್ತು ಘಟಕಗಳ ವಿರುದ್ಧ ಯುರೋಪಿಯನ್ ಒಕ್ಕೂಟ ನಿರ್ಬಂಧಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಿದೆ.

Share