Connect with us


      




ಕರ್ನಾಟಕ

ಎಸ್. ಎಂ. ಕೃಷ್ಣ, ನಾರಾಯಣ ಮೂರ್ತಿ, ಪ್ರಕಾಶ್ ಪಡುಕೋಣೆಗೆ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ

Lakshmi Vijaya

Published

on

ಬೆಂಗಳೂರು: ಜೂನ್ 25 (ಯು.ಎನ್.ಐ.) ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದಿಂದ ನೀಡುತ್ತಿರುವ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಯನ್ನ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ಇನ್ಫೋಸಿಸ್ ನಾರಾಯಣ ಮೂರ್ತಿ, ಕ್ರೀಡಾಪಟು ಪ್ರಕಾಶ್ ಪಡುಕೋಣೆ ಅವರಿಗೆ ನೀಡಲಾಗುತ್ತಿದೆ.

 ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಎಸ್.ಎಂ ಕೃಷ್ಣಾರನ್ನು ಭೇಟಿ ಮಾಡಿದ ಸಚಿವ ಡಾ. ಅಶ್ವತ್ಥನಾರಾಯಣ ಈ ಬಗ್ಗೆ ಮಾಹಿತಿ ನೀಡಿದರು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು  ಪ್ರತಿಮೆ ಕಾಮಗಾರಿ ಬಹುತೇಕ ಮುಗಿದಿದೆ.ಲ್ಯಾಂಡ್ ಸ್ಕೇಪಿಂಗ್ ಆಗಬೇಕಿದೆ, ಅದೂ ಕೂಡ ಶೀಘ್ರವೇ ಪೂರ್ಣವಾಗಲಿದೆ.ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಉದ್ಘಾಟನೆ ಆಗಲಿದೆ.ಕೆಂಪೇಗೌಡ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದಿಂದ ಎಲ್ಲ ರೀತಿಯ ವ್ಯವಸ್ಥೆ ಆಗುತ್ತಿದೆ.ಎಲ್ಲ ನಾಯಕರು, ಮಾಜಿ ಪ್ರಧಾ‌ನಿ ಎಚ್ ಡಿ ದೇವೇಗೌಡ, ಪ್ರತಿಪಕ್ಷ ನಾಯಕರ ಸಹಕಾರ, ಡಿಕೆ ಶಿವಕುಮಾರ್, ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರ ಸಹಕಾರದಿಂದ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡುತ್ತೇವೆ.ಕೆಂಪೇಗೌಡ ಹುಟ್ಟಿದ ಕೆಂಪಾಪುರ ಅಭಿವೃದ್ಧಿ ಕೂಡ ಮಾಡಲಾಗ್ತಿದೆ.ಮಾಗಡಿ ಕೋಟೆಯನ್ನೂ ಕೂಡ ಅಭಿವೃದ್ಧಿ ಮಾಡಲಾಗುತ್ತಿದೆ.ನಮ್ಮ ನಾಡಿನ ಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳ ಸಹಕಾರ ಕೂಡ ಪಡೆದಿದ್ದೇವೆ.ಶೀಘ್ರವೇ ಕೆಂಪೇಗೌಡರಿಗೆ ಸಂಬಂಧಿಸಿದ ಎಲ್ಲಾ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಲಿದ್ದೇವೆ‌ ಎಂದರು.

ಬಿಬಿಎಂಪಿ ವಾರ್ಡ್ ವಿಂಗಡಣೆ ಸರಿ ಇಲ್ಲ ಎಂಬ ಆರೋಪಕ್ಕೆ ವೈಜ್ಞಾನಿಕವಾಗಿ ವಾರ್ಡ್ ವಿಂಗಡಣೆ ಆಗಿದೆ.ಆಕ್ಷೇಪಣೆ ಇದ್ದಲ್ಲಿ 15 ದಿನದಲ್ಲಿ ಆಕ್ಷೇಪಣೆ ಸಲ್ಲಿಕೆ ಮಾಡಬಹುದು.ಕೋರ್ಟ್ ಮೋರೆ ಹೋಗೋದೇನು ಬೇಡ. ಕಾನೂನು ಹೋರಾಟ ಮಾಡೋ‌ ಅವಶ್ಯಕತೆ ಇಲ್ಲ. ಏನೇ ಇದ್ದರೂ ಇಲ್ಲಿಯೇ ಮಾಡಲಿ.ಕಾನೂನಾತ್ಮಕವಾಗಿ ಸರಿಪಡಿಸೋಣ ಎಂದರು.

ಕಾಂಗ್ರೆಸ್ ಇರೋಕಡೆ ಕಡಿಮೆ ಆಗಿದೆ, ಬಿಜೆಪಿ ಇರೋಕಡೆ ಹೆಚ್ಚು ವಾರ್ಡ್ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ.

Share