Connect with us


      




ಸಿನೆಮಾ

ಮಾಡೆಲಿಂಗ್ ಮಾಯಾಲೋಕಕ್ಕೆ ಮೊದಲ ಹೆಜ್ಜೆ ಇಟ್ಟ ಸಾರಾ ತೆಂಡೂಲ್ಕರ್

Vanitha Jain

Published

on

ಮುಂಬೈ, ಡಿಸೆಂಬರ್ 7 (ಯು.ಎನ್.ಐ): ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಒಂದಿಲ್ಲೊಂದು ವಿಚಾರಗಳನ್ನು ಹಂಚಿಕೊಳ್ಳುವ ಸಾರಾ ಇದೀಗ ತಮ್ಮ ಜೀವನದ ಮುಖ್ಯ ಘಟ್ಟದ ಬಗ್ಗೆಯೂ ಹಂಚಿಕೊಂಡು ಅಭಿಮಾನಿಗಳು ಖುಷಿ ನೀಡಿದ್ದಾರೆ.

ಹೌದು ಸಾರಾ ತೆಂಡೂಲ್ಕರ್ ಇದೀಗ ಮಾಡೆಲಿಂಗ್ ಮಾಯಾಲೋಕಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ಬಗ್ಗೆ ಖುದ್ದಾಗಿ ಸಾರಾ ಅವರೇ ತಮ್ಮ ಇನ್‍ಸ್ಟಾಗ್ರಾಮ್ ಪುಟದಲ್ಲಿ ಆಜಿಯೋಲುಕ್ಸೆನ ಒಂದು ಪ್ರೋಮೋ ವಿಡಿಯೋ ಹಂಚಿಕೊಳ್ಳುವ ಮೂಲಕ ಮಾಡೆಲಿಂಗ್ ಲೋಕಕ್ಕೆ ಅಂಬೆಗಾಲಿಟ್ಟಿರುವ ಬಗ್ಗೆ ಹೇಳಿದ್ದಾರೆ.

 

View this post on Instagram

 

A post shared by Sara Tendulkar (@saratendulkar)

ಇವರ ವಸ್ತ್ರ ವಿನ್ಯಾಸದ ಪ್ರೋಮೋದಲ್ಲಿ ನಟಿ ಬನಿತಾ ಸಂಧು ಮತ್ತು ತಾನಿಯಾ ಶ್ರಫ್ ಕೂಡ ಕಾಣಿಸಿಕೊಂಡಿದ್ದಾರೆ. ಇದೀಗ ಸಾರಾ ಅವರ ವಿಡಿಯೋ ವೈರಲ್ ಆಗಿದ್ದು, ಸಾರಾ ಅವರ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದು, ಶುಭಾಶಯ ತಿಳಿಸಿದ್ದಾರೆ. ಇನ್ನು ಈ ಹಿಂದೆ ಜಿಮ್ ಬಟ್ಟೆಯ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿದ್ದರು.

Share