Connect with us


      
ಕ್ರೀಡೆ

“ನೀವಿಲ್ಲದಿದ್ದರೆ…” ಗುರು ನೆನೆದು ಭಾವುಕರಾದ ಸಚಿನ್ ತೆಂಡೂಲ್ಕರ್

Iranna Anchatageri

Published

on

ಮುಂಬೈ : ಜನವರಿ 2 (ಯು.ಎನ್.ಐ.) ಸಚಿನ್ ತೆಂಡೂಲ್ಕರ್ ವಿಶ್ವ ಕಂಡ ಶ್ರೇಷ್ಠ ಆಟಗಾರ. ಈ ಕ್ರಿಕೆಟ್ ಮಾಂತ್ರಿಕನನ್ನು ವಿಶ್ವ ಕ್ರಿಕೆಟ್ ಗೆ ಕೊಡುಗೆಯಾಗಿ ನೀಡಿದ್ದು ಕೋಚ್ ರಮಾಕಾಂತ್ ಅಚ್ರೇಕರ್. 3 ವರ್ಷಗಳ ಹಿಂದೆ 2 ಜನವರಿ 2019ರಂದು ಮುಂಬೈನಲ್ಲಿ ಕ್ರಿಕೆಟಿಗ ರಮಾಕಾಂತ್ ಅಚ್ರೇಕರ್ ಅವರು ನಿಧನರಾದರು. ಇಂದು ಅವರ ಪುಣ್ಯಸ್ಮರಣೆ ಅಂಗವಾಗಿ ಗುರುವನ್ನು ನೆನೆದು ಭಾವುಕರಾಗಿ ಸಚಿನ್ ತೆಂಡೂಲ್ಕರ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

 “ಅವರಿಲ್ಲದಿದ್ದರೆ ನಾನು ಜೀವನದಲ್ಲಿ ಅನೇಕ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅಚ್ರೇಕರ್ ಅವರಿಗೆ ನಾನು ಚಿರ ಋಣಿ. ಅವರು ನಮಗೆ ಕಲಿಸಿದದನ್ನು ವಿವರಿಸಲು ಅಸಾಧ್ಯ. ಅವರನ್ನು ಕಳೆದುಕೊಂಡ ನೋವು ಎಂದೂ ಮಾಸುವುದಿಲ್ಲ. ಸರ್ ಇಂದು ನಮ್ಮೆಲ್ಲರನ್ನೂ ಸ್ವರ್ಗದಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ.” ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್ ಮುಂಬೈನ ಶಾರದಾಶ್ರಮ ಶಾಲೆಯಲ್ಲಿ ಅಚ್ರೇಕರ್ ಮಾರ್ಗದರ್ಶನದಲ್ಲಿ ಕ್ರಿಕೆಟ್ ಪಾಠಗಳನ್ನು ಹಂತ ಹಂತವಾಗಿ ಕಲಿತುಕೊಂಡರು. ಸಚಿನ್ ಜೊತೆಗೆ ವಿನೋದ್ ಕಾಂಬ್ಳಿ, ಪ್ರವೀಣ್ ಆಮ್ರೆ, ಸಂಜಯ್ ಬಂಗಾರ್, ಬಲ್ವಿಂದ್ ಸಿಂಗ್ ಸಂಧು, ಚಂದ್ರಕಾಂತ್ ಪಂಡಿತ್, ಲಾಲಚಂದ್ ರಜಪೂತ್, ಸಮೀರ್ ದಿಘೆ, ಅಜಿತ್ ಅಗರ್ಕರ್ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅಚ್ರೇಕರ್ ಅವರ ವಿದ್ಯಾರ್ಥಿಗಳಾಗಿದ್ದರು.

Share