Connect with us


      
ದೇಶ

ಹಿಂದೂಗಳು ನಾಲ್ಕು ಮಕ್ಕಳು ಪಡೆಯಿರಿ; ಅದರಲ್ಲಿ ಎರಡನ್ನು ದೇಶಕ್ಕೆ ಸಮರ್ಪಿಸಿ: ಸಾಧ್ವಿ ರಿತಂಬರ

Vanitha Jain

Published

on

ಕಾನ್ಪುರ್/ಲಖನೌ: ಏಪ್ರಿಲ್ 18 (ಯು.ಎನ್.ಐ.) ಪ್ರತಿ ಹಿಂದೂ ದಂಪತಿಗಳು ನಾಲ್ಕು ಮಕ್ಕಳಿಗೆ ಜನ್ಮ ನೀಡಬೇಕು ಮತ್ತು ಅವರಲ್ಲಿ ಇಬ್ಬರನ್ನು ದೇಶಕ್ಕೆ ಅರ್ಪಿಸಬೇಕು. ಆಗ ಭಾರತವು ಶೀಘ್ರದಲ್ಲೇ ಹಿಂದೂ ರಾಷ್ಟ್ರ ಆಗಲಿದೆ ಎಂದು ಹಿಂದುತ್ವದ ನಾಯಕಿ, ವಿಶ್ವ ಹಿಂದೂ ಪರಿಷತ್ತಿನ ಮಹಿಳಾ ವಿಭಾಗ ದುರ್ಗಾ ವಾಹಿನಿಯ ಸಂಸ್ಥಾಪಕಿ ಸಾಧ್ವಿ ರಿತಂಬರ ಹೇಳಿದ್ದಾರೆ.

ಭಾನುವಾರ ಇಲ್ಲಿನ ನಿರಾಲಾ ನಗರದಲ್ಲಿ ರಾಮ ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಮಹಿಳೆಯರು “ಹಮ್ ದೋ, ಹಮಾರೆ ದೋ” (ಎರಡು ಮಕ್ಕಳನ್ನು ಹೊಂದುವುದು) ಎಂಬ ತತ್ವವನ್ನು ಅನುಸರಿಸುತ್ತಾರೆ. ನಾನು ಎಲ್ಲಾ ಹಿಂದೂ ದಂಪತಿಗಳು ತಲಾ ನಾಲ್ಕು ಮಕ್ಕಳನ್ನು ಹೊಂದಬೇಕು. ಇವರಲ್ಲಿ ಇಬ್ಬರನ್ನು ದೇಶಕ್ಕೆ, ಉಳಿದ ಇಬ್ಬರನ್ನು ಕುಟುಂಬಕ್ಕಾಗಿ ಸಮರ್ಪಿಸಬೇಕು. ಶೀಘ್ರದಲ್ಲೇ ಭಾರತವು ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳಿದರು ಎಂದು ಹೇಳಿದರು.

ಅಲ್ಲದೇ ಜನಸಂಖ್ಯೆಯ ಅಸಮತೋಲನವಾಗದಂತೆ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು. ದೇಶದಲ್ಲಿ ಜನಸಂಖ್ಯಾ ಅಸಮತೋಲನ ಉಂಟಾದರೆ ದೇಶದ ಭವಿಷ್ಯ ಉತ್ತಮವಾಗಿರುವುದಿಲ್ಲ ಎಂದರು.

ದೆಹಲಿಯ ಜಹಾಂಗೀರಪುರಿಯಲ್ಲಿ ಶನಿವಾರ ನಡೆದ ಕೋಮು ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, ಹನುಮ ಜಯಂತಿ ಶೋಭಾ ಯಾತ್ರೆ (ಮೆರವಣಿಗೆ) ಮೇಲೆ ದಾಳಿ ಮಾಡಿದವರು ದೇಶದ ಪ್ರಗತಿಯ ಬಗ್ಗೆ ಅಸೂಯೆ ಹೊಂದಿದವರು. ರಾಜಕೀಯ ಭಯೋತ್ಪಾದನೆಯ ಮೂಲಕ ಹಿಂದೂ ಸಮಾಜವನ್ನು ಒಡೆಯಲು ಯತ್ನಿಸುತ್ತಿರುವವರನ್ನು ಮಣ್ಣು ಮುಕ್ಕಿಸಲಾಗುತ್ತದೆ ಎಂದು ಅವರು ಹೇಳಿದರು.

Share