Connect with us


      




ದೇಶ

ಯುಪಿ: ರಾತ್ರಿ ವೈದ್ಯರು ಅಲಭ್ಯರಿದ್ದರೆ ಸಂಬಳ ಕಡಿತ! ಶೋಕಾಸ್ ನೋಟಿಸ್

Iranna Anchatageri

Published

on

ಡಿಯೋರಿಯಾ: ಮೇ 15 (ಯು.ಎನ್‌.ಐ.) ಪೋಸ್ಟಿಂಗ್ ಸ್ಥಳದಲ್ಲಿ ರಾತ್ರಿ ಸೇವೆಗೆ ಅಲಭ್ಯರಾದ ವೈದ್ಯರಿಗೆ ಒಂದು ದಿನದ ಸಂಬಳ ಕಡಿತ ಮತ್ತು ಶೋಕಾಸ್ ನೋಟಿಸ್ ನೀಡುವ ಕ್ರಮವನ್ನು ಜಾರಿಗೆ ತರಲಾಗಿದೆ. ಇಲ್ಲಿನ ಡಿಯೋರಿಯಾ ಜಿಲ್ಲೆಯಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸಲು, ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿತೇಂದ್ರ ಪ್ರತಾಪ್ ಸಿಂಗ್ ಅವರ ಸೂಚನೆಯ ಮೇರೆಗೆ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾತ್ರಿ ವೇಳೆ ತುರ್ತು ವೈದ್ಯಕೀಯ ಸೇವೆಗಳ ಸಮಯದಲ್ಲಿ ವೈದ್ಯರು ಗೈರಾಗಿದ್ದರೆ ವೇತನ ಕಡಿತ ಮಾಡಲು ನಿರ್ಧರಿಸಲಾಗಿದೆ.

ತುರ್ತು ನಿಯೋಜನೆ ಹಾಗೂ ರಾತ್ರಿ ವೇಳೆ ಪೋಸ್ಟಿಂಗ್ ಸ್ಥಳದಲ್ಲಿ ನಿಯೋಜನೆಗೊಂಡಿರುವ ವೈದ್ಯರ ಸತ್ಯಾಸತ್ಯತೆ ಅರಿಯಲು ನಡೆಸಿದ ತಪಾಸಣೆ ವೇಳೆ ಗೈರು ಹಾಜರಾದ ವೈದ್ಯರಿಗೆ ಒಂದು ದಿನದ ವೇತನ ಕಡಿತಗೊಳಿಸಿ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಎಲ್ಲಾ ಅಧಿಕಾರಿಗಳು ತಮ್ಮ ಪೋಸ್ಟಿಂಗ್ ಸ್ಥಳದಲ್ಲಿ ರಾತ್ರಿ ವಿಶ್ರಾಂತಿ ಪಡೆಯಬೇಕೆಂದು ರಾಜ್ಯ ಸರ್ಕಾರ ನಿರ್ದೇಶಿಸಿದೆ ಎಂದು ಸಿಂಗ್ ಇಂದು ತಿಳಿಸಿದರು. ಇದರಿಂದ ಎಲ್ಲ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಹುದು. ಈ ಅನುಕ್ರಮದಲ್ಲಿ ಎಲ್ಲ ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತುರ್ತು ನಿಯೋಜನೆಗೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಈ ಆದೇಶ ಪಾಲನೆ ಕುರಿತು ಸತ್ಯಾಸತ್ಯತೆ ಅರಿಯಲು ದಿಢೀರ್‌ ತಪಾಸಣಾ ಅಭಿಯಾನ ನಡೆಸಲಾಯಿತು. ಇದಕ್ಕಾಗಿ ಎಲ್ಲಾ ತಹಸಿಲ್‌ಗಳ ಎಸ್‌ಡಿಎಂಗಳು ಮತ್ತು 16 ಬ್ಲಾಕ್‌ಗಳ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡಗಳನ್ನು ಕಳುಹಿಸಲಾಗಿತ್ತು.

ತಪಾಸಣೆಯ ಸಮಯದಲ್ಲಿ ಹತ್ತಕ್ಕೂ ಹೆಚ್ಚು ವೈದ್ಯರು ಸಮುದಾಯ ಆರೋಗ್ಯ ಕೇಂದ್ರದ ಪೋಸ್ಟಿಂಗ್ ಸೈಟ್‌ನಲ್ಲಿ ರಾತ್ರಿಯಿಡೀ ತಂಗಿರುವುದು ಕಂಡುಬಂದಿಲ್ಲ ಎಂದು ಅವರು ಹೇಳಿದರು. ಅಲ್ಲದೆ, ಜಿಲ್ಲೆಯ ಮಜಗವಾನ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲ ಸಿಬ್ಬಂದಿ ಗೈರು ಹಾಜರಾಗಿರುವುದು. ಮದನಪುರದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ರಾತ್ರಿ 9.30ಕ್ಕೆ ಮುಚ್ಚಿರುವುದು ತಪಾಸಣೆ ವೇಳೆ ಕಂಡು ಬಂದಿದೆ ಎಂದರು. ಈ ಎಲ್ಲ ಕೇಂದ್ರಗಳ ವೈದ್ಯರಿಗೆ ಒಂದು ದಿನದ ವೇತನ ತಡೆ ಹಾಗೂ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

Share