Connect with us


      




ನ್ಯಾಯಾಲಯ

ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ವಜಾ

Published

on

ಮುಂಬೈ, ಜ 15(ಯುಎನ್‌ ಐ) ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಮುಂಬೈ ಸಿಟಿ ಸಿವಿಲ್ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಮುಂಬೈನ ಪನ್ವೇಲ್ ಪ್ರದೇಶದಲ್ಲಿ ಸಲ್ಮಾನ್ ಖಾನ್ ಫಾರ್ಮ್‌ಹೌಸ್ ಪಕ್ಕದ ಸ್ಥಳದಲ್ಲಿ ಖೇತನ್ ಕಕ್ಕಡ್ ಎಂಬ ವ್ಯಕ್ತಿಯಿಂದ ಜಮೀನು ಖರೀದಿಸಿದ್ದಾರೆ.

ಆದರೆ, ಖೇತನ್ ಕಕ್ಕಡ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬಗ್ಗೆ ಹಾಗೂ ಫಾರ್ಮ್‌ಹೌಸ್ ಕುರಿತು ನೀಡಿರುವ ವಿವಾದಾಸ್ಪದ ಹೇಳಿಕೆಗಳು ತಮ್ಮ ಮಾನ ಹಾನಿಯಾಗುವ ರೀತಿಯಲ್ಲಿವೆ, ಭವಿಷ್ಯದಲ್ಲಿ ತಮ್ಮ ವಿರುದ್ದ ಅಂತಹ ಹೇಳಿಕೆ ನೀಡದಂತೆ ಮಧ್ಯಂತರ ತಡೆಯಾಜ್ಞೆ ನೀಡಬೇಕು, ಸಂದರ್ಶನದಿಂದ ಆ ಭಾಗವನ್ನು ತೊಲಗಿಸಬೇಕು ಎಂದು ಕೋರಿ ಮುಂಬೈ ಸಿಟಿ ಸಿವಿಲ್‌ ಕೋರ್ಟ್‌ ನಲ್ಲಿ ಮಾನಹಾನಿ ಮೊಕದ್ದಮೆ ಹೊಡಿದ್ದರು.

ಆದರೆ ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಳ್ಳದೆ, ವಜಾಗೊಳಿಸಿದೆ. ಖೇತನ್ ಕಕ್ಕಡ್ ವಿರುದ್ಧ ಆರೋಪದ ಕುರಿತು ವಿವರಣೆ ನೀಡಬೇಕು ಎಂದು ಸೂಚಿಸಿ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಿ ನ್ಯಾಯಾಧೀಶ ಅನಿಲ್ ಎಚ್ ಲಡ್ಡಾಡ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ನ್ಯಾಯಾಲಯ

ಮೇಕೆದಾಟು: ಕೋವಿಡ್ ಮಾರ್ಗಸೂಚಿ ಜಾರಿಗೆ ಹೈಕೋರ್ಟ್ ಆದೇಶ

Published

on

ಬೆಂಗಳೂರು: ಜನೆವರಿ ೧೪ (ಯು.ಎನ್.ಐ.) ಮೇಕೆದಾಟು ಯೋಜನೆ ಜಾರಿಗಾಗಿ ಕೈಗೊಂಡಿದ್ದ ಪಾದಯಾತ್ರೆ ನಿಲ್ಲಿಸಿರುವುದಾಗಿ ಕಾಂಗ್ರೆಸ್ ಹೇಳಿದ್ದು, ಪಾದಯಾತ್ರೆ ನಿಷೇಧಿಸಲಾಗಿದೆ ಎಂಬ ರಾಜ್ಯ ಸರ್ಕಾರದ ವಾದವನ್ನು ದಾಖಲಿಸಿಕೊಂಡಿರುವ ಕರ್ನಾಟಕ ಹೈಕೋರ್ಟ್ ಶುಕ್ರವಾರ ಸಂಬಂಧಿತ ಮನವಿಗಳನ್ನು ವಿಲೇವಾರಿ ಮಾಡಿದೆ.
ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಎ ವಿ ನಾಗೇಂದ್ರ ಪ್ರಸಾದ್ ಮತ್ತಿತರರು ಸಲ್ಲಿಸಿದ್ದ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಜನವರಿ 4ರಂದು ಹೊರಡಿಸಿರುವ ಎಸ್ಒಪಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಎಸ್ಒಪಿ ಜಾರಿಯಲ್ಲಿರುವವರೆಗೆ ಯಾವುದೇ ಪ್ರತಿಭಟನೆ ಅಥವಾ ರಾಜಕೀಯ ಸಮಾವೇಶಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು” ಎಂದು ಪೀಠವು ಕಟ್ಟುನಿಟ್ಟಿನ ಆದೇಶ ಮಾಡಿದೆ.
“ರಾಜ್ಯ ಸರ್ಕಾರವು ಜನವರಿ 12ರಂದು ವಿಪತ್ತು ನಿರ್ವಹಣೆ ಕಾಯಿದೆ 2005ರ ಸೆಕ್ಷನ್ 24 (ಎಬಿ) ಅನ್ವಯ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ನಮ್ಮ ನೀರು, ನಮ್ಮ ಹಕ್ಕು ಪಾದಯಾತ್ರೆಯನ್ನು ನಿಷೇಧಿಸಿದೆ. ಕಾಂಗ್ರೆಸ್ ಸ್ವಯಂಪ್ರೇರಿತವಾಗಿ ಪಾದಯಾತ್ರೆ ರದ್ದುಪಡಿಸುವುದಾಗಿ ತಿಳಿಸಿದೆ. ಹೀಗಾಗಿ, ಮನವಿಯನ್ನು ಬಾಕಿ ಉಳಿಸಿಕೊಳ್ಳುವ ಅಗತ್ಯವಿಲ್ಲ” ಎಂದು ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿದೆ.
ಕಾಂಗ್ರೆಸ್ ಪ್ರತಿನಿಧಿಸಿದ್ದ ವಕೀಲರು “ಎರಡು ದಿನಗಳ ಹಿಂದೆ ನ್ಯಾಯಾಲಯ ವ್ಯಕ್ತಪಡಿಸಿದ ಅಭಿಪ್ರಾಯ ಮತ್ತು ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಾವು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ರಾಜ್ಯ ಸರ್ಕಾರವು ಎಸ್ಒಪಿ ಜಾರಿಯಲ್ಲಿ ತಾರತಮ್ಯದ ನೀತಿ ಅನುಸರಿಸುತ್ತಿದೆ. ಎಲ್ಲೆಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬುದನ್ನು ನಮ್ಮ ಆಕ್ಷೇಪಣೆಯಲ್ಲಿ ವಿವರಿಸಿದ್ದೇವೆ. ಇತರೆ ರಾಜಕೀಯ ಪಕ್ಷಳು ಸಭೆ, ಸಮಾರಂಭ ನಡೆಸಿವೆ. ನಮ್ಮ ಪಾದಯಾತ್ರೆಯನ್ನು ಮಾತ್ರ ನಿಷೇಧಿಸಿದ್ದಾರೆ. ಉಳಿದ ಉಲ್ಲಂಘನೆಗಳ ಬಗ್ಗೆ ಚಕಾರವೆತ್ತಿಲ್ಲ. ಜನವರಿ 4ರಂದು ಎಸ್ಒಪಿ ಜಾರಿಗೆ ಬಂದ ಬಳಿಕ ಸರ್ಕಾರದ ಆದೇಶ ಉಲ್ಲಂಘಿಸಿದ ಎಲ್ಲರ ವಿರುದ್ಧವೂ ಕ್ರಮಕೈಗೊಳ್ಳಬೇಕು” ಎಂದು ಪೀಠಕ್ಕೆ ಕೋರಿದರು.

Continue Reading

ನ್ಯಾಯಾಲಯ

ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆ: ರಾಜ್ಯ ಸರ್ಕಾರಕ್ಕೆ ನೋಟಿಸ್

Published

on

ಬೆಂಗಳೂರು: ಜನೆವರಿ ೧೩ (ಯು.ಎನ್.ಐ.) ವೈದ್ಯಕೀಯ ಕೋರ್ಸ್ ಕಾಯಿದೆ ಅಡಿ ಶಿಕ್ಷಣ ಪೂರೈಸಿರುವ ಸ್ನಾತಕೋತ್ತರ ಪದವೀಧರರು ಒಂದು ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಮಾಡುವುದನ್ನು ಕಡ್ಡಾಯಗೊಳಿಸಿರುವ ಕರ್ನಾಟಕ ಕಡ್ಡಾಯ ಸೇವೆ ತರಬೇತಿಯ ಸೆಕ್ಷನ್ 4 ಅನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬುಧವಾರ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಡಾ. ಕೀರ್ತಿ ಕರ್ನೂಲ್ ಮತ್ತು ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. “ಸದರಿ ವಿಚಾರಕ್ಕೆ ಸಂಬಂಧಿಸಿದ ಬಾಕಿ ಇರುವ ಪ್ರಕರಣಗಳ ಜೊತೆ ಈ ಪ್ರಕರಣವನ್ನು ಸೇರಿಸಬೇಕು. ರಾಜ್ಯ ಸರ್ಕಾರವು ಸೂಚನೆ ಪಡೆದು ಆಕ್ಷೇಪಣೆ ಸಲ್ಲಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದ್ದು, ವಿಚಾರಣೆಯನ್ನು ಫೆಬ್ರವರಿ 22ಕ್ಕೆ ಮುಂದೂಡಿದೆ.
“ಅರ್ಜಿದಾರರು ಸ್ನಾತಕೋತ್ತರ ಪದವೀಧರ ವೈದ್ಯರಾಗಿದ್ದು ಅವರು 2018-19 ಮತ್ತು 2019-20ರಲ್ಲಿ ಪ್ರತಿವಾದಿ ಕಾಲೇಜುಗಳಲ್ಲಿ ಶಿಕ್ಷಣ ಪೂರೈಸಿದ್ದಾರೆ. ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ಮಾಹಿತಿ ಪಟ್ಟಿಯಲ್ಲಿ ಕೆಸಿಎಸ್ ಕಾಯಿದೆ ಅಡಿ ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸಬೇಕು ಎಂದು ಉಲ್ಲೇಖಿಸಿರಲಿಲ್ಲ. ಹೀಗಾಗಿ, ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡಬೇಕು ಎಂಬುದರಿಂದ ತಮಗೆ ವಿನಾಯಿತಿ ನೀಡಬೇಕು” ಎಂದು ಅರ್ಜಿದಾರರ ಪರ ವಕೀಲರು ಕೋರಿದರು.
“2021ರ ಆಗಸ್ಟ್ 21ರಂದು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದ್ದು, ಡೀಮ್ಡ್ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಸೇವೆ ಮಾಡಬೇಕು ಎಂದು ಕೆಸಿಎಸ್ ಕಾಯಿದೆಯಲ್ಲಿ ಹೇಳಿದೆ. ಆದರೆ, ಈ ಕುರಿತು ಎಂಸಿಸಿ ಅಥವಾ ರಾಜ್ಯ ಸರ್ಕಾರವು ಪ್ರವೇಶ ಪಡೆಯುವುದಕ್ಕೂ ಮುನ್ನ ಈ ಕುರಿತು ಮಾಹಿತಿ ನೀಡಿಲ್ಲ. ಹೀಗಾಗಿ, ತಮಗೆ ಗ್ರಾಮೀಣ ಸೇವೆ ಕಡ್ಡಾಯ ಮಾಡಿರುವುದರಿಂದ ವಿನಾಯಿತಿ ನೀಡಬೇಕು” ಎಂದು ಮನವಿಯಲ್ಲಿ ಕೋರಿದ್ದಾರೆ.

Continue Reading

ನ್ಯಾಯಾಲಯ

ಹರಿದ್ವಾರ ದ್ವೇಷ ಭಾಷಣ ಪ್ರಕರಣ: 10 ದಿನದೊಳಗೆ ಉತ್ತರಿಸಲು ಉತ್ತರಾಖಂಡ್ ಸರ್ಕಾರಕ್ಕೆ ಸುಪ್ರೀಂ ಆದೇಶ

Published

on

ನವದೆಹಲಿ: ಜನೆವರಿ 12 (ಯು.ಎನ್.ಐ.) ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಅಥವಾ ಧಾರ್ಮಿಕ ಸಭೆಯಲ್ಲಿನ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗೆ 10 ದಿನಗಳಲ್ಲಿ ಉತ್ತರ ನೀಡುವಂತೆ ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಪಾಟ್ನಾ ಹೈಕೋರ್ಟ್‍ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಅಂಜನಾ ಪ್ರಕಾಶ್ ಮತ್ತು ಪತ್ರಕರ್ತ ಕುರ್ಬಾನ್ ಅಲಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

ಧರ್ಮ ಸಂಸದ್‍ನಲ್ಲಿ, ಉತ್ತರಾಖಂಡದ ಹರಿದ್ವಾರದಲ್ಲಿ ಹಿಂದೂ ಧಾರ್ಮಿಕ ಮುಖಂಡರು ಮುಸ್ಲಿಮರ ವಿರುದ್ಧ ನರಮೇಧ ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿ ನಂತರ ಅವರು ನಮ್ಮ ಪರವಾಗಿರುತ್ತಾರೆ ಎಂದು ಮುಕ್ತವಾಗಿ ಕರೆ ನೀಡಿದ್ದರು.

ಜನವರಿ 23 ರಂದು ಯುಪಿಯ ಅಲಿಗಢದಲ್ಲಿ ನಡೆಯಲಿರುವ ಮತ್ತೊಂದು ಧರ್ಮ ಸಂಸದ್ ಅನ್ನು ನಿಲ್ಲಿಸುವಂತೆ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಲು ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಡಿಸೆಂಬರ್ 17 ರಿಂದ 20 ರವರೆಗೆ ನಡೆದ ಹರಿದ್ವಾರದ ಸಮಾರಂಭದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು ಮತ್ತು ಮಾಜಿ ಮಿಲಿಟರಿ ಮುಖ್ಯಸ್ಥರು, ಕಾರ್ಯಕರ್ತರು ಮತ್ತು ಅಂತರರಾಷ್ಟ್ರೀಯ ಟೆನಿಸ್ ದಂತಕಥೆ ಮಾರ್ಟಿನಾ ನವ್ರಾಟಿಲೋವಾ ಅವರಿಂದ ತೀವ್ರ ಟೀಕೆಗೆ ಗುರಿಯಾಯಿತು.

Continue Reading
Advertisement
ದೇಶ17 seconds ago

ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ

ಚಂಡೀಗಢ: ಜನೆವರಿ 17 (ಯು.ಎನ್.ಐ.) ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಗುರು ರವಿದಾಸ್ ಜಯಂತಿ ಆಚರಣೆಗೆ ಅನುಕೂಲ...

ದೇಶ2 mins ago

ದೇಶವನ್ನು ಕೊರೋನಾ ಮುಕ್ತಗೊಳಿಸಲು ಪಣ ತೊಡೋಣ; ಕೇಜ್ರಿವಾಲ್

ನವದೆಹಲಿ: ಜನೆವರಿ 17 (ಯು.ಎನ್.ಐ.) ಸಾಂಕ್ರಾಮಿಕ ರೋಗವಾದ ಕೋವಿಡ್ -೧೯ ಪರಿಸ್ಥಿತಿಯನ್ನು ಆಪಾದನೆ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಇಡೀ ದೇಶದಿಂದ ತೊಡೆದುಹಾಕು ಪಣ ತೊಡಬೇಕು ಎಂದು...

ಸಿನೆಮಾ19 mins ago

ಹಿಂದಿಯಲ್ಲಿ ತೆರೆ ಕಾಣುತ್ತಿದೆ ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲು’

ಹೈದರಾಬಾದ್: ಜನೆವರಿ 17 (ಯು.ಎನ್.ಐ.) ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಮತ್ತೊಂದು ಸಂತೋಷದ ವಿಚಾರವೆಂದರೆ ಅಲ್ಲು ಅರ್ಜುನ್‌...

ದೇಶ34 mins ago

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು...

ದೇಶ39 mins ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಕರ್ನಾಟಕ49 mins ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಬೆಂಗಳೂರು1 hour ago

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಕೋವಿಡ್

ಬೆಂಗಳೂರು, ಜ ೧೭(ಯುಎನ್ ಐ) ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆಆರ್ ಟಿ...

ದೇಶ1 hour ago

ಉಪಯುಕ್ತ ಮಾಹಿತಿ ; 5 ಸಾವಿರ ಅಲ್ಲ, ಕೇವಲ ₹260 ರಲ್ಲಿ ಒಮೈಕ್ರಾನ್ ಪತ್ತೆ ಹಚ್ಚಿ!

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಪ್ರತಿ ದಿನ ಒಮೈಕ್ರಾನ್ ಸೋಂಕು ದೇಶದಲ್ಲಿ ವೇಗವಾಗಿ ಹರಡಲಾರಂಭಿಸಿದೆ. ಕೊರೊನಾ ರೂಪಾಂತರಗಳಿಗಿಂತ ಒಮೈಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನೊಂದಿಗೆ...

ದೇಶ1 hour ago

ಐಐಟಿ ಬಾಂಬೆಯ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಜನೆವರಿ 17  (ಯು.ಎನ್.ಐ.) ಐಐಟಿ ಬಾಂಬೆಯ ವಿದ್ಯಾರ್ಥಿ ಸೋಮವಾರ ಮುಂಜಾನೆ ಇಲ್ಲಿನ ಪೊವೈ ಕ್ಯಾಂಪಸ್ ನಲ್ಲಿರುವ ತನ್ನ ಹಾಸ್ಟೆಲಿನ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ...

ಕರ್ನಾಟಕ2 hours ago

ಕೋವಿಡ್‌ ಸೋಂಕು ಹೆಚ್ಚು; ಸಾವು ಕಡಿಮೆ:‌ ಸಚಿವ ಅಶೋಕ್

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಾಗಿದೆ.  ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆ ಇದೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿಳಿಸಿದರು....

ಟ್ರೆಂಡಿಂಗ್

Share