Connect with us


      




ಸಿನೆಮಾ

ದುಲ್ಕರ್ ಸಲ್ಮಾನ್ ಸಿನೆಮಾಗಳಿಗೆ ನಿಷೇಧ ಹೇರಿದ ಕೇರಳ ಚಿತ್ರ ಪ್ರದರ್ಶಕರು

Kumara Raitha

Published

on

ಬೆಂಗಳೂರು: ಮಾರ್ಚ್‌ ೧೫ (ಯು.ಎನ್.‌ಐ.) ದುಲ್ಕರ್‌ ಸಲ್ಮಾನ್‌ ಒಡೆತನದ ನಿರ್ಮಾಣ ಸಂಸ್ಥೆ ಮಾಡಿಕೊಂಡ ಒಪ್ಪಂದಿಂದ ಹಿಂದೆ ಸರಿದಿದೆ ಎಂದು ಕೇರಳ ಚಿತ್ರ ಪ್ರದರ್ಶಕರ ಒಕ್ಕೂಟ ಆರೋಪಿಸಿದೆ. ದುಲ್ಕರ್‌ ಅವರ ಸಿನೆಮಾಗಳು ಮತ್ತು ಅವರ ನಿರ್ಮಾಣ ಸಂಸ್ಥೆ ಮೇಲೆ ನಿಷೇಧ ಹೇರಿದೆ.

ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಸೇಶನ್ ಆಫ್ ಕೇರಳ (FEUOK)   ದುಲ್ಕರ್ ಸಲ್ಮಾನ್ ಮತ್ತು ಅವರ ನಿರ್ಮಾಣ ಸಂಸ್ಥೆ ವೇಫೇರರ್ ಫಿಲ್ಮ್ಸ್ ಅವರೊಂದಿಗೆ ಸಹಕರಿಸುವುದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದೆ.  ದುಲ್ಕರ್‌ ಅವರು  ಒಟಿಟಿ ಫ್ಲಾಟ್‌ ಫಾರಂಗಿಂತ ಮೊದಲು ಸಲ್ಯೂಟ್‌ ಚಿತ್ರವನ್ನು ಸಿನೆಮಾ ಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡು ಬಳಿಕ ಅದನ್ನು ಉಲ್ಲಂಘಿಸಿದ್ದಾರೆ ಎಂಬುದು ಈ ಒಕ್ಕೂಟ ನೀಡುವ ಕಾರಣ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಒಕ್ಕೂಟದ ಪ್ರತಿನಿಧಿ ಕೆ. ವಿಜಯ ಕುಮಾರ್‌ ಅವರು ದುಲ್ಕರ್ ತಮ್ಮ ಸಿನೆಮಾವನ್ನು ಕೇರಳದ  ಚಿತ್ರಮಂದಿರಗಳಲ್ಲಿ  ಬಿಡುಗಡೆ ಮಾಡುವ ನಿರ್ಧಾರದಿಂದ “ಹಿಂತೆಗೆದುಕೊಂಡಿದ್ದಾರೆ. ಅವರೇ  ಸಹಿ ಮಾಡಿದ ಒಪ್ಪಂದವನ್ನು ಗೌರವಿಸಿಲ್ಲ ಎಂದು ಕೆ ವಿಜಯಕುಮಾರ್  ಹೇಳಿದರು.

ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ವೇಫೇರರ್‌ ಸಂಸ್ಥೆಯ ಪ್ರತಿನಿಧಿ, ಮೊದಲು ಒಟಿಟಿಯಲ್ಲಿಯೇ ಸೆಲ್ಯೂಟ್‌ ಬಿಡುಗಡೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ. . ಮಾರ್ಚ್‌ ೧೮ರಂದು ಸೋನಿ ಲೈವ್‌ ನಲ್ಲಿ ಸಿನೆಮಾವನ್ನು ಬಿಡುಗಡೆ ಮಾಡಲು ಕಾರಣವಾದ ಪರಿಸ್ಥಿತಿಯನ್ನು ವಿವರಿಸಿದ್ದಾರೆ

ಜನವರಿಯಲ್ಲಿ ಬಿಡುಗಡೆ ಮಾಡುವ ದೃಷ್ಟಿಯಿಂದಲೇ  ಸಿನೆಮಾದ  ಮಾರ್ಕೆಟಿಂಗ್‌ಗಾಗಿ  ಪ್ರೊಡಕ್ಷನ್ ಹೌಸ್ ಗಣನೀಯ ಮೊತ್ತವನ್ನು ಖರ್ಚು ಮಾಡಿದೆ . “ನಾವು ಕೇರಳದಾದ್ಯಂತ ಹೋರ್ಡಿಂಗ್‌ಗಳನ್ನು ಹಾಕಿದ್ದೇವೆ ಮತ್ತು ಚಿತ್ರಕ್ಕೆ ಸರಿಯಾದ ಮಾರ್ಕೆಟಿಂಗ್ ಮಾಡಿದ್ದೆವು  ಎಂದು ಅವರು  ಹೇಳಿದ್ದಾರೆ.

ಏತನ್ಮಧ್ಯೆ, ಕೋವಿಡ್ -19 ಪ್ರಕರಣಗಳ ಉಲ್ಬಣದಿಂದಾಗಿ ಜನವರಿ 14 ರ ನಿಗದಿತ ಬಿಡುಗಡೆಯನ್ನು ಮುಂದೂಡಲಾಯಿತು. ನಿಗದಿತ ಅವಧಿಯೊಳಗೆ ಚಿತ್ರ ಮಾಡದಿದ್ದರೆ OTT ಬಿಡುಗಡೆಗೆ ಹೋಗುವುದಾಗಿ ನಾವು ಈಗಾಗಲೇ ಥಿಯೇಟರ್ ಮಾಲೀಕರಿಗೆ ತಿಳಿಸಿದ್ದೇವೆ. ಆಗಲೇ ಹಿಟ್ ಸಿನಿಮಾಗಳು ರಿಲೀಸ್ ಆಗಿದ್ದು, ಫೆಬ್ರವರಿ 14ಕ್ಕೆ ರಿಲೀಸ್ ಮಾಡುವ ಸಾಧ್ಯತೆ  ಇರಲಿಲ್ಲ.. ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುವುದು ಬೇಡ ಅಂತೇನಿಲ್ಲ. ನಾವು ಯಾವಾಗಲೂ ಥಿಯೇಟರ್‌ಗಳನ್ನು ಬೆಂಬಲಿಸಿದ್ದೇವೆ, ”ಎಂದು ಹೇಳಿದ್ದಾರೆ

ರೋಶನ್ ಆಂಡ್ರ್ಯೂಸ್ ಅವರ ನೇತೃತ್ವದಲ್ಲಿ  ಸೆಲ್ಯೂಟ್,  ನಿರ್ಮಾಣವಾಗಿದೆ. ಇದು ತನಿಖಾ ಥ್ರಿಲ್ಲರ್  ಚಿತ್ರಕಥೆ ಹೊಂದಿದೆ.  ಇದನ್ನು ಒಟಿಟಿ  ಫ್ಲಾಟ್‌ ಫಾರಂ ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ. ಸೆಲ್ಯೂಟ್ ಅನ್ನು OTT ಗಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಥಿಯೇಟರ್‌ಗಳಲ್ಲಿ ತೆರೆಕಾಣುವ ಅವಕಾಶ ಸಿಕ್ಕಿದ್ದರಿಂದ ಅದನ್ನು ತಳ್ಳಿ ಹಾಕಲು ಪ್ರಯತ್ನಿಸಿದೆವು. ಆದರೆ ಕೋವಿಡ್ ಪರಿಸ್ಥಿತಿಯು ‌ ಈ ಸಂಬಂಧದ ವಿಷಯಗಳಿಗೆ ಪೂರಕವಾಗಲಿಲ್ಲ ಎಂದು ಅವರು ಹೇಳಿದ್ದಾರೆ

Share