Connect with us


      
ಸಿನೆಮಾ

ವಿಚ್ಛೇದನ ವಿಚಾರದಲ್ಲಿ ನಾನು ಸಮಂತ ಹ್ಯಾಪಿ : ಚೈತನ್ಯ

Published

on

ಹೈದರಬಾದ್ : ಜನೆವರಿ 12 (ಯು.ಎನ್.ಐ.) ವಿಚ್ಛೇದನ ವಿಚಾರವಾಗಿ ಇದೇ ಮೊದಲ ಬಾರಿಗೆ ನಟ ನಾಗಚೈತನ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬಂಗಾರ್ ರಾಜು ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದ ನಾಗಚೈತನ್ಯ ಅವರಿಗೆ ಮಾಧ್ಯಮದವರಿಂದ ವೈಯಕ್ತಿಕ ಪ್ರಶ್ನೆಗಳು ಎದುರಾದವು.

“ನಾನು ಮತ್ತು ಸಮಂತಾ ವಿಚ್ಛೇದನದ ಬಗ್ಗೆ ಮಾತನಾಡಿ ನಿರ್ಧರಿಸಿದ್ದೆವು. ಇಬ್ಬರೂ ಸೇರಿ ತೆಗೆದುಕೊಂಡ ನಿರ್ಧಾರ. ಆದ್ದರಿಂದ ಅಷ್ಟೋಂದು ತೊಂದರೆಯಾಗಲಿಲ್ಲ. ಇದರಿಂದ ನಾನು ಸಂತೋಷವಾಗಿದ್ದೇನೆ ಮತ್ತು ಸಮಂತ ಕೂಡ ಸಂತೋಷವಾಗಿದ್ದಾರೆ. ಕುಟುಂಬದವರು ಎಲ್ಲ ರೀತಿಯಿಂದಲೂ ಬೆಂಬಲ ನೀಡಿದ್ದಾರೆ. ವಿಚ್ಛೇದನ ಒಳ್ಳೆಯದು ಎಂದು ತಿಳಿದೆ ಬೇರೆಯಾಗಿದ್ದೇವೆ” ಎಂದರು.

ಈಗೀಗ ಚೈತು ವಿಚ್ಛೇದನದ ಕಹಿ ನೆನಪಿನಿಂದ ಹೊರಬರುತ್ತಿದ್ದಾರೆ. ಹಾಗಾಗಿಯೇ ಅವರು ತಮ್ಮ ವೈಯಕ್ತಿಕ ವಿಚಾರಗಳನ್ನೂ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಏನೆ ಆದರು ಚೈತು ಮತ್ತು ಸಮಂತಾ ಏಕೆ ಬೇರ್ಪಟ್ಟರು ಎಂಬುದು ಅವರ ಕುಟುಂಬ ಸದಸ್ಯರಿಗೆ ಬಿಟ್ಟರೆ ಬೇರೆ ಯಾರಿಗೂ ತಿಳಿದಿಲ್ಲ.

ಸಿನೆಮಾ

ನಟ ದಿಲೀಪ್‌ರನ್ನು ಜ. 27 ರವರೆಗೆ ಬಂಧಿಸದಂತೆ ನಿರ್ದೇಶನವಿತ್ತ ಕೇರಳ ಹೈಕೋರ್ಟ್

Published

on

ತಿರುವನಂತಪುರಂ: ಜನೆವರಿ 22 (ಯು.ಎನ್.ಐ.) ನಟ ದಿಲೀಪ್‌ ಮೇಲಿನ ಲೈಂಗಿಕ ದೌರ್ಜನ್ಯದ ತನಿಖೆ ನಡೆಸುತ್ತಿರುವ ತನಿಖಾ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ಕೇರಳ ಹೈಕೋರ್ಟ್ ಜನವರಿ 27 ರವರೆಗೆ ಬಂಧಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.

ನಟ ದಿಲೀಪ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಪೀಠ, ತನಿಖಾಧಿಕಾರಿಗಳ ವಿರುದ್ಧ ಪಿತೂರಿ ರೂಪಿಸುವುದು ಅಪರಾಧಕ್ಕೆ ಸಮಾನ ಎಂದು ಅಭಿಪ್ರಾಯಪಟ್ಟಿದೆ.

ನಟ ದಿಲೀಪ್ ಮೇಲಿನ ಹಲ್ಲೆ ಪ್ರಕರಣದಲ್ಲಿ ತನಿಖಾಧಿಕಾರಿಗಳಿಗೆ ಹಾನಿ ಮಾಡಲು ಸಂಚು ರೂಪಿಸಿರುವ ಪ್ರಕರಣ ಕಪೋಲಕಲ್ಪಿತವಾಗಿದ್ದು, ತನಿಖಾಧಿಕಾರಿಗಳು ಮತ್ತು ಪ್ರಾಸಿಕ್ಯೂಷನ್ ಕಕ್ಷಿದಾರರನ್ನು ಜೈಲಿಗೆ ಹಾಕುವ ಸಲುವಾಗಿ ಯಾವುದೇ ಸಾಕ್ಷ್ಯಧಾರಗಳಿಲ್ಲದೇ ದೂರುತ್ತಿದ್ದಾರೆ ಎಂದು ನಟ ದಿಲೀಪ್ ಪರ ವಕೀಲರು ಆರೋಪಿಸಿದ್ದಾರೆ.

“ಘಟನೆ ನಡೆದು ಐದು ವರ್ಷಗಳಾಗಿವೆ. ಈಗ ಹೊಸ ಕಥೆಗಳನ್ನು ಹೆಣೆಯುತ್ತಿದ್ದಾರೆ. ಅವರು ತಮ್ಮ ಪ್ರಕರಣವನ್ನು ರುಜುವಾತುಪಡಿಸಲು ಕೆಲವು ಮಾನ್ಯತಾ ದಾಖಲೆ, ಸಾಕ್ಷಿಗಳನ್ನು ನೀಡಬೇಕು ಎಂದು ದಿಲೀಪ್ ಪರ ವಕೀಲರು ವಾದಿಸಿದರು.

ಪ್ರಕರಣದ ಎಲ್ಲಾ ಆರೋಪಿಗಳು ವಿಚಾರಣೆಗೆ ಹಾಜರಾಗಲು ಸಿದ್ಧರಿದ್ದಾರೆ ಆದರೆ ಅವರು “ರೋವಿಂಗ್ ತನಿಖೆ” ಗೆ ಸಲ್ಲಿಸಲು ಸಿದ್ಧರಿಲ್ಲ ಎಂದು ಹೇಳಿದರು. ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿರೋಧಿಸಿದ ಪ್ರಾಸಿಕ್ಯೂಷನ್, ಪ್ರಕರಣದಲ್ಲಿ ನಟನನ್ನು ಕನಿಷ್ಠ ಐದು ದಿನಗಳ ಕಾಲ ವಿಚಾರಣೆ ಮಾಡಬೇಕಾಗುತ್ತದೆ ಎಂದು ಹೇಳಿದರು. ಆರೋಪಿಗಳಿಗೆ ಕಿರುಕುಳ ನೀಡುವುದಿಲ್ಲ ಎಂದು ಭರವಸೆ ನೀಡಿದರು.

Continue Reading

ಸಿನೆಮಾ

ಬಾಡಿಗೆ ತಾಯ್ತನ ಮೂಲಕ ಹೆಣ್ಣು ಮಗು ಪಡೆದ ಪ್ರಿಯಾಂಕಾ ಚೋಪ್ರಾ

Published

on

ಮುಂಬೈ: ಜನೆವರಿ 22 (ಯು.ಎನ್.ಐ.) ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ದಂಪತಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗು ಪಡೆದುಕೊಂಡಿದ್ದಾರೆ.

ಖುದ್ದಾಗಿ ಈ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ ಘೋಷಿಸಿರುವ ಪ್ರಿಯಾಂಕಾ, ಬಾಡಿಗೆ ತಾಯ್ತನದ ಮೂಲಕ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದೇವೆ. ದಯವಿಟ್ಟು ನನ್ನ ಕುಟುಂಬದ ಮೇಲೆ ವಿಶೇಷ ಗಮನವಹಿಸಬೇಕಾದ ಕಾರಣ ನಮ್ಮ ಖಾಸಗಿ ಸಮಯವನ್ನು ಗೌರವಿಸಿ ಎಂದು ಹೇಳಿ ಧನ್ಯವಾದ ಸಲ್ಲಿಸಿದ್ದಾರೆ.

ಮೂಲಗಳ ಪ್ರಕಾರ 12 ವಾರಗಳ ಮುಂಚೆಯೇ ಅಂದರೆ ಅವಧಿಪೂರ್ವವೇ ಹೆಣ್ಣು ಮಗು ದಕ್ಷಿಣ ಕ್ಯಾಲಿಫೋರ್ನಿಯಾ ಆಸ್ಪತ್ರೆಯಲ್ಲಿ ಜನಿಸಿದೆ. ಹಾಗಾಗಿ ಪುಟ್ಟ ಮಗು ಇನ್ನೂ ಆಸ್ಪತ್ರೆಯಲ್ಲಿದೆ. ಆರೋಗ್ಯ ಸುಧಾರಿಸುವವರೆಗೂ ಮಗು ಆಸ್ಪತ್ರೆಯಲ್ಲಿಯೇ ಇರಲಿದೆ ಎಂದು ತಿಳಿದು ಬಂದಿದೆ. ಎಂದು ವರದಿಯಾಗಿದೆ.

ಪ್ರಿಯಾಂಕಾ ಮತ್ತು ನಿಕ್ ಬಹಳ ಸಮಯದಿಂದ ಮಗುವನ್ನು ಹೊಂದಲು ಯೋಜಿಸಿದ್ದರು. ಆದರೆ ಅವರ ಬಿಡುವಿಲ್ಲದ ಕಾರಣ, ಮಗುವಿನ ವಿಚಾರವನ್ನು ವಿಳಂಬಗೊಳಿಸುತ್ತಲೇ ಇದ್ದರು. ನಂತರ ಬಾಡಿಗೆ ತಾಯ್ತನವನ್ನು ಆರಿಸಿಕೊಂಡರು. ಅವರು ದಕ್ಷಿಣ ಕ್ಯಾಲಿಫೋರ್ನಿಯಾದ ಮಹಿಳೆಯೊಂದಿಗೆ ಸಂಪರ್ಕ ಸಾಧಿಸಿ ಮುದ್ದಾದ ಮಗುವನ್ನು ಪಡೆದುಕೊಂಡಿದ್ದಾರೆ.

Continue Reading

ಸಿನೆಮಾ

ಬಹುದಿನಗಳ ಕನಸು ಈಗ ನನಸಾಯಿತು: ಪೂಜಾ ಹೆಗ್ಡೆ

Published

on

ಮುಂಬೈ: ಜನೆವರಿ 22 (ಯು.ಎನ್.ಐ.) ಸಾಲು ಸಾಲು ಸಿನಿಮಾಗಳ ಯಶ್ಸಸ್ಸಿನಲ್ಲಿ ಪೂಜಾ ಹೆಗ್ಡೆ ಇದ್ದಾರೆ. ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ ಎಂದರೆ ಆ ಸಿನಿಮಾ ಹಿಟ್ ಅನ್ನು ಮಟ್ಟಿಗೆ ಹೆಸರು ಮಾಡಿ ಮುನ್ನುಗ್ಗುತ್ತಿದ್ದಾರೆ. ಹೆಸರು ಮಾಡುವ ಜೊತೆಗೆ ಹಣ ಕೂಡ ಚೆನ್ನಾಗಿ ಗಳಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ಮನೆ ಕಟ್ಟಿರುವ ಪೂಜಾ, ಇತ್ತೀಚೆಗಷ್ಟೆ ಗೃಹ ಪ್ರವೇಶ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನ ಶೇರ್ ಮಾಡಿದ್ದಾರೆ.

ಅದರಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ನಾಯಕಿ ಕೈಯಲ್ಲಿ ತೆಂಗಿನಕಾಯಿ ಹಿಡಿದು ಕುಳಿತಿದ್ದಾರೆ. ‘ಮನೆ ಕಟ್ಟುವ ನನ್ನ ಕನಸು ನನಸಾಗಿದೆ. ನಿಮ್ಮ ಆತ್ಮಸಾಕ್ಷಿ ಮತ್ತು ಕಠಿಣ ಪರಿಶ್ರಮವನ್ನು ನಂಬಿರಿ. ಈ ಜಗತ್ತು ನಿಮ್ಮನ್ನು ಪ್ರೀತಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

‘ಒಕಾ ಲೈಲಾ ಕೋಸಂ’ ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾದ ಪೂಜಾ ಹೆಗಡೆ. ‘ಮುಕುಂದ’ ಚಿತ್ರದ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದಾರೆ. ಸಿನಿಮಾಗಳಲ್ಲಿ ತಮ್ಮ ಪಾತ್ರಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡು ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟಿ ‘ಅಲ ವೈಕುಂಠಪುರಮುಲೋ’ ಚಿತ್ರದ ಮೂಲಕ ಮೋಸ್ಟ್ ವಾಂಟೆಡ್ ಹೀರೋಯಿನ್ ಆದರು. ಇತ್ತೀಚೆಗೆ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಪ್ರಸ್ತುತ ‘ಮೃಗ’, ‘ಆಚಾರ್ಯ’ ಮತ್ತು ‘ರಾಧೇಶ್ಯಾಮ್’ ಚಿತ್ರಗಳಲ್ಲಿ ತಮ್ಮ ನಟನ ವಿಶ್ವರೂಪವನ್ನ ಮಾಡುತ್ತಿದ್ದಾರೆ.

https://www.instagram.com/p/CY_pwDXP1t8/?utm_source=ig_web_copy_link

Continue Reading
Advertisement
ಅಂಕಣ3 mins ago

ಎಳವೆಯಿಂದ ರಂಗಭೂಮಿ

ನಾದಾಂಕಣ – ಡಾ. ನಾ. ದಾಮೋದರ ಶೆಟ್ಟಿ ಭಾರತೀಯ ಹಾಗೂ ಗ್ರೀಕ್‌ ರಂಗಭೂಮಿಗೆ ಬಹುದೊಡ್ಡ ಪರಂಪರೆಇದೆ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಯುರೋಪಿನ ರಂಗಭೂಮಿಯಾಗಲೀ ರಷ್ಯಾ, ಅಮೇರಿಕಾ...

ದೇಶ4 mins ago

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು,...

ಹಣಕಾಸು44 mins ago

ಕೆಲಸ ಬದಲಾಯಿಸಿದ್ದೀರಾ? ಚಿಂತೆ ಬಿಡಿ.. ನಿಮ್ಮ ನೆರವಿಗೆ ಇದೆ ಇಪಿಎಫ್ಒ!

ಬೆಂಗಳೂರು: ಜನೆವರಿ 23 (ಯು.ಎನ್.ಐ.) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ...

ದೇಶ48 mins ago

ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ… ದೇಶಾದ್ಯಂತ ಪರಾಕ್ರಮ ದಿನವಾಗಿ ಆಚರಣೆ

ನವದೆಹಲಿ, ಜ ೨೩( ಯುಎನ್ ಐ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ನೇ ಜನ್ಮಜಯಂತಿ ಇಂದು. ದೇಶಾದ್ಯಂತ ಪರಾಕ್ರಮ ದಿನವಾಗಿ ನೇತಾಜಿ...

ಕರ್ನಾಟಕ1 hour ago

ಇಡೀ ವರ್ಷ ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆಗೆ ತೀರ್ಮಾನ: ಸಿಎಂ

ಬೆಂಗಳೂರು : ಜನೆವರಿ 23 (ಯು.ಎನ್.ಐ.) ರಾಜ್ಯ ಸರ್ಕಾರದ ವತಿಯಿಂದ ವರ್ಷವಿಡೀ ನೇತಾಜಿ ಸುಭಾಷ್ ಚಂದ್ರಬೋಸ್ ರವರ 125ನೇ ಜನ್ಮ ದಿನಾಚರಣೆಯನ್ನ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ...

ಅಂಕಣ1 hour ago

ಸ್ವಾತಂತ್ರ್ಯಕ್ಕಿಂತ ದೊಡ್ಡದು ಇನ್ಯಾವುದಿದೆ ?

‌ಅಂಕಣ: ದಿಟನುಡಿ -೩ ಕಳೆದ ವಾರ ನನ್ನ ಕೈರೋಪ್ರಾಕ್ಟರ್ ರೇ ಬಳಿ ಹೋಗಿದ್ದೆ. ಏಕೋ ಗೊತ್ತಿಲ್ಲ ಕೆಲ ದಿನಗಳ ಹಿಂದೆ ಸೊಂಟ ಹಿಡಿದಿತ್ತು. ಏಳಲು, ಕೂರಲು, ನಿಲ್ಲಲು...

ದೇಶ2 hours ago

ಪಂಜಾಬ್ ಚುನಾವಣೆ: ಕೆಂಪು ಕೋಟೆ ಹಿಂಸಾಚಾರದ ಆರೋಪಿಗೆ ರೈತ ಸಂಘಟನೆಯಿಂದ ಟಿಕೆಟ್!

ಚಂಡೀಗಢ: ಜನೆವರಿ 23 (ಯು.ಎನ್.ಐ.) ರೈತರ ಸಂಘಟನೆ ಯುನೈಟೆಡ್ ಸಮಾಜ ಮೋರ್ಚಾ ಪಂಜಾಬ್ ವಿಧಾನಸಭಾ ಚುನಾವಣೆಗೆ 35 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ...

ಕರ್ನಾಟಕ2 hours ago

ನ್ಯಾಯಮೂರ್ತಿ ಕೆ ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಬೆಂಗಳೂರು: ಜನವರಿ 23 (ಯು.ಎನ್.ಐ.)  ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ನ್ಯಾಯಮೂರ್ತಿ ಮಂಜುನಾಥ್ ಅವರು...

ಅಂಕಣ2 hours ago

ಸ್ವಾತಂತ್ರ್ಯ ಕೇವಲ ಮನುಷ್ಯನ ಹಕ್ಕೆ?

ಅ‌ಂಕಣ- ಖಚಿತ ನೋಟ ಹೆಸರಾಂತ ಪ್ರಾಣಿಹಕ್ಕುಗಳ ಪ್ರತಿಪಾದಕ, ಪೀಟರ್ ಸಿಂಗರ್ ಹೇಳುವಂತೆ, ಮನುಷ್ಯ ತನ್ನ ಇತಿಹಾಸದಲ್ಲಿ ಮಾಡಿರುವ ಜಾತಿ ಮತ್ತು ಲಿಂಗ ಆಧಾರಿತ ಶೋಷಣೆಯ ಬಗ್ಗೆ ಇಂದು...

ವಿದೇಶ2 hours ago

ಅಫ್ಘಾನಿಸ್ತಾನ ಬಾಂಬ್ ಸ್ಫೋಟ: 7 ಮಂದಿ ಸಾವು

ಹೆರಾತ್: ಜನೆವರಿ 23 (ಯು.ಎನ್.ಐ.) ಅಫ್ಘಾನಿಸ್ತಾನದ ಪಶ್ಚಿಮ ನಗರವಾಗಿರುವ ಹೆರಾತ್‌ನಲ್ಲಿ ಮಿನಿ ವ್ಯಾನ್‌ ಒಳಗೆ ಇಟ್ಟಿದ್ದ ಬಾಂಬ್ ಸ್ಫೋಟಗೊಂಡು 7 ಮಂದಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರೂ...

ಟ್ರೆಂಡಿಂಗ್

Share