Connect with us


      




ಕ್ರೀಡೆ

ಸಾನಿಯಾ ಮಿರ್ಜಾಗೆ ಆಘಾತ … ಟೂರ್ನಿಯಿಂದ ಔಟ್ .. !

UNI Kannada

Published

on

ಅಡಿಲೇಡ್‌, ಜ 8(ಯುಎನ್‌ ಐ) ಹೊಸ ವರ್ಷದಲ್ಲಿ ಭಾರತದ ಮಹಿಳಾ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಹೋರಾಟ ಸೆಮಿಫೈನಲ್‌ನಲ್ಲಿ ಅಂತ್ಯಗೊಂಡಿದೆ. ಅಡಿಲೇಡ್ ಓಪನ್ ಡಬ್ಲ್ಯುಟಿಎ ಸೆಮಿಫೈನಲ್‌ನಲ್ಲಿ ಸಾನಿಯಾ (ಭಾರತ) – ನಾಡಿಯಾ ಕಿಚೆನೊಕ್ (ಉಕ್ರೇನ್) ಜೋಡಿ ಸೆಮಿಫೈನಲ್‌ ನಲ್ಲಿ ಪರಾಭವಗೊಂಡಿದೆ. ಆಶ್ಲೇ ಬಾರ್ಟಿ – ಸ್ಟಾರ್ಮ್ ಸಾಂಡರ್ಸ್ (ಆಸ್ಟ್ರೇಲಿಯಾ) ಜೋಡಿ ಎದುರು ನಡೆದ ಪಂದ್ಯ ದಲ್ಲಿ ಸಾನಿಯಾ-ಕಿಚೆನೊಕ್ 1–6, 6–2, 8–10ರಲ್ಲಿ ಸೋತರು. ಸೂಪರ್ ಟೈಬ್ರೇಕ್‌ನಲ್ಲಿ ಪರಾಭವಗೊಂಡಿದ್ದಾರೆ.
ಸೆಮಿಯಲ್ಲಿ ಬೋಪಣ್ಣ ಜೋಡಿ
ಈ ನಡುವೆ ಅಡಿಲೇಡ್ ಓಪನ್ ಮೆನ್ಸ್‌ ಟೂರ್ನಿಯಲ್ಲಿ ರೋಹನ್ ಬೋಪಣ್ಣ-ರಾಮ್‌ಕುಮಾರ್ (ಭಾರತ) ಜೋಡಿ ಸೆಮಿಫೈನಲ್ ತಲುಪಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಬೋಪಣ್ಣ-ರಾಮ್‌ ಜೋಡಿ 6–1, 6–3ರಲ್ಲಿ ಬೊಂಜಿ (ಫ್ರಾನ್ಸ್‌)–ಹ್ಯೂಗೊ ನಿಸ್‌ (ಮೊನಾಕೊ) ಜೋಡಿಯನ್ನು ಮಣಿಸಿತು.

Share