Published
6 months agoon
By
Vanitha Jainಚಂಡೀಗಢ: ಜನೆವರಿ 08 (ಯು.ಎನ್.ಐ.) ಇಲ್ಲಿನ ಮುನ್ಸಿಪಲ್ ಕೌನ್ಸಿಲರ್ ಗಾದಿಗೆ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಏರ್ಪಟ ಪೈಪೋಟಿಯಲ್ಲಿ ಕೇವಲ ಒಂದೇ ಒಂದು ಮತದಿಂದ ಬಿಜೆಪಿ ಆಮ್ ಆದ್ಮಿ ಪಕ್ಷವನ್ನು ಸೋಲಿಸಿ ಮೇಯರ್ ಸ್ಥಾನ ಪಡೆದುಕೊಂಡಿದೆ.
ಆಮ್ ಆದ್ಮಿ ಪಕ್ಷದ ಅಂಜು ಕತ್ಯಾಲ್ ಅವರನ್ನು ಕೇವಲ ಒಂದು ಮತದಿಂದ ಸೋಲಿಸಿದ ಸರಬ್ಜಿತ್ ಕೌರ್ ಚಂಡೀಗಢ ಮುನ್ಸಿಪಲ್ ಕಾಪೆರ್Çರೇಷನ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಒಟ್ಟು 36 ಮತಗಳಲ್ಲಿ 28 ಮತ ಚಲಾವಣೆಯಾಗಿದ್ದು, ಏಳು ಕಾಂಗ್ರೆಸ್ ಕೌನ್ಸಿಲರ್ಗಳು ಮತ್ತು ಶಿರೋಮಣಿ ಅಕಾಲಿದಳದ ಏಕೈಕ ಕೌನ್ಸಿಲರ್ ಗೈರಾಗಿದ್ದರು. ಕೌರ್ 14 ಮತಗಳನ್ನು ಪಡೆದರೆ, ಕತ್ಯಾಲ್ 13 ಮತಗಳನ್ನು ಪಡೆದರು ಮತ್ತು ಒಂದು ಅಸಿಂಧು ಎಂದು ಘೋಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫಲಿತಾಂಶ ಪ್ರಕಟವಾದ ನಂತರ, ಸದನದಲ್ಲಿ ಎಎಪಿ ಕೌನ್ಸಿಲರ್ಗಳಲ್ಲಿ ಗದ್ದಲ ಉಂಟಾಯಿತು. ನಂತರ ಪೊಲೀಸರು ಹತೋಟಿಗೆ ತಂದರು.
ಡಿಸೆಂಬರ್ 27 ರಂದು ಪ್ರಕಟವಾದ ಚಂಡೀಗಢ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯ 35 ವಾರ್ಡ್ಗಳಲ್ಲಿ ಆಮ್ ಆದ್ಮಿ ಪಕ್ಷ 14 ಮತ್ತು ಬಿಜೆಪಿ 12 ರಲ್ಲಿ ಗೆದ್ದುಕೊಂಡಿತ್ತು. ಕಾಂಗ್ರೆಸ್ ಎಂಟು ಸ್ಥಾನಗಳನ್ನು ಪಡೆದಿದ್ದರೆ, ಶಿರೋಮಣಿ ಅಕಾಲಿದಳ ಒಂದು ಸ್ಥಾನವನ್ನು ಪಡೆದುಕೊಂಡಿತ್ತು.
ಆದರೆ, ಚುನಾವಣಾ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ನ ಮುನ್ಸಿಪಲ್ ಕೌನ್ಸಿಲರ್ ಹರ್ಪ್ರೀತ್ ಕೌರ್ ಬಬ್ಲಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 35 ಕೌನ್ಸಿಲರ್ಗಳಲ್ಲದೆ, ಮುನ್ಸಿಪಲ್ ಕಾರ್ಪೋರೇಷನ್ನಲ್ಲಿ ಪದನಿಮಿತ್ತ ಸದಸ್ಯರಾಗಿರುವ ಚಂಡೀಗಢ ಸಂಸದರೂ ಮತದಾನದ ಹಕ್ಕನ್ನು ಹೊಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು; ಶಿಂಧೆ ಬಣ ಸೇರಿದ ಮತ್ತೊಬ್ಬ ಮಿನಿಸ್ಟರ್
ಮಹಾರಾಷ್ಟ್ರ ಸರ್ಕಾರದಲ್ಲಿ ಬಿಕ್ಕಟ್ಟು; ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಿಂಧೆ ಟೀಂ
ಲೋಕಸಭೆ ಉಪಚುನಾವಣೆ; ಅಖಿಲೇಶ್ ಯಾದವ್ ಗೆ ಮುಖಭಂಗ, ಅರಳಿದ ‘ಕಮಲ’
ಶಿವಸೇನೆ ಬಂಡಾಯ ನಾಯಕರಿಗೆ ಭದ್ರತೆ ಒದಗಿಸಿ: ಮಹಾರಾಷ್ಟ್ರ ರಾಜ್ಯಪಾಲರು
ನೀವು ಎಷ್ಟು ದಿನ ಗುವಾಹಟಿಯಲ್ಲಿ ಅಡಗಿಕೊಳ್ಳುತ್ತೀರಿ? …ಉಪಸ್ಪೀಕರ್ ಫೋಟೋ ಜೊತೆ ರೆಬೆಲ್ಸ್ ಗೆ ಶಿವಸೇನೆ ಸಂದೇಶ
ನಿಮಗೆ ಧೈರ್ಯವಿದ್ದರೆ ಶಿವಸೇನೆ ಪಕ್ಷ ತೊರೆದು ಚುನಾವಣೆ ಎದುರಿಸಿ: ರೆಬೆಲ್ ಶಾಸಕರಿಗೆ ಆದಿತ್ಯ ಠಾಕ್ರೆ ಸವಾಲು