Published
4 months agoon
By
Vanitha Jainನವದೆಹಲಿ: ಜನೆವರಿ 24 (ಯು.ಎನ್.ಐ.) ಎಸ್ಬಿಐ ಖಾತೆದಾರರಿಗೆ ಸಿಹಿ ಸುದ್ದಿ. ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ (ಪಿಎಸ್ ಯು) ಸ್ಥಿರ ಠೇವಣಿ (ಎಫ್ಡಿ) ಬಡ್ಡಿದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಇತ್ತೀಚೆಗಷ್ಟೇ ಎಚ್ಡಿಎಫ್ ಸಿ ಬ್ಯಾಂಕ್ ಕೂಡ ತನ್ನ ಬಡ್ಡಿದರದಲ್ಲಿ ಏರಿಕೆಯನ್ನು ಘೋಷಿಸಿತ್ತು. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಸರದಿ.
ಎಸ್ಬಿಐ ತನ್ನ ವೆಬ್ಸೈಟ್ನಲ್ಲಿ ಇತ್ತೀಚಿನ ಪರಿಷ್ಕರಣೆ ಬಡ್ಡಿದರವನ್ನು ಪ್ರಕಟಿಸಿದೆ. ಅಧಿಸೂಚನೆಯ ಪ್ರಕಾರ, ಒಂದು ವರ್ಷದಿಂದ ಎರಡು ವರ್ಷಗಳ ಅವಧಿಯವರೆಗಿನ ಠೇವಣಿಗಳ ಬಡ್ಡಿದರಗಳನ್ನು ಹೆಚ್ಚಿಸಲಾಗಿದೆ. ಎಫ್ಡಿ ಬಡ್ಡಿ ದರಗಳನ್ನು 10 ಬೇಸಿಸ್ ಪಾಯಿಂಟ್ಗಳು ಅಥವಾ ಶೇಕಡಾ 0.10 ರಷ್ಟು ಪರಿಷ್ಕರಿಸಲಾಗಿದೆ. ಹಿರಿಯ ನಾಗರಿಕರು ಶೇಕಡಾ 5.5 ರಿಂದ 10 ಬೇಸಿಸ್ ಪಾಯಿಂಟ್ಗಳನ್ನು ಹೆಚ್ಚಿಸಿದ್ದು ಶೇಕಡಾ 5.6 ರ ಬಡ್ಡಿಯನ್ನು ಪಡೆಯುತ್ತಾರೆ.
46 ದಿನಗಳಿಂದ 179 ದಿನಗಳು – ಶೇ 3.90- 4.40
180 ದಿನಗಳಿಂದ 210 ದಿನಗಳು – ಶೇ 4.40- 4.90
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ – ಶೇ 4.40- 4.90
1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ- ಶೇ 5.10 – 5.60
2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ- ಶೇ 5.10 – 5.60
3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ – ಶೇ 5.30 – 5.80
5 ವರ್ಷಗಳು ಮತ್ತು 10 ವರ್ಷಗಳವರೆಗೆ – ಶೇ 5.40- 6.20
SBI ಸ್ಥಿರ ಠೇವಣಿಗಳ ವಿವಿಧ ಪ್ರಕಾರಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ಗ್ರಾಹಕರಿಗೆ ವಿವಿಧ ರೀತಿಯ ಸ್ಥಿರ ಠೇವಣಿಗಳನ್ನು ಇರಿಸಲು ಅನುಕೂಲ ಮಾಡಿಕೊಡುವ ಸಲುವಾಗಿ ವಿವಿಧ ರೀತಿಯ ಠೇವಣಿಗಳನ್ನು ರೂಪಿಸಿದೆ. ಗ್ರಾಹಕರು ಈ ಮೂಲಕ ವಿವಿಧ ಪ್ರಯೋಜನಗಳನ್ನು ಪಡೆಯಬಹುದು.
SBI ಅವಧಿ ಠೇವಣಿ (SBI Term Deposite)
SBI ತೆರಿಗೆ ಉಳಿತಾಯ ಯೋಜನೆ (Tax Saving Scheme)
SBI ಸ್ಥಿರ ಠೇವಣಿ ಹೂಡಿಕೆ ಯೋಜನೆ (Fixed Deposit Investment Plan)
SBI ವರ್ಷಾಶನ ಠೇವಣಿ ಯೋಜನೆ ( Annuity Deposit Scheme)
SBI Wecare
ಟ್ವಿಟ್ಟರ್ ಖರೀದಿ ಒಪ್ಪಂದ ತಾತ್ಕಾಲಿಕವಾಗಿ ತಡೆಹಿಡಿದ ಎಲೋನ್ ಮಸ್ಕ್!
ಅಮೆಜಾನ್ ; ಗ್ರಾಹಕರ ದೂರುಗಳಿಗೆ ತುರ್ತು ಸ್ಪಂದಿಸಲು ಕೇಂದ್ರ ಸೂಚನೆ
1000ಕ್ಕೂ ಹೆಚ್ಚು ಶಾಖೆ ತೆರೆದ ಎಚ್ಡಿಎಫ್ಸಿ..!
ಸ್ವಿಗ್ಗಿ; ಡ್ರೋನ್ ಮೂಲಕ ದಿನಸಿ ವಿತರಣಾ ಸೇವೆಗೆ ಸಿದ್ಧ
ಬೆಂಗಳೂರಿಗರಿಗೆ ಸಿಗಲಿದೆ ಶೀಘ್ರ ಡ್ರೋನ್ ಮೂಲಕ ಆಹಾರ!
61,000 ಕೋಟಿ ರೂ. ಮೊತ್ತದ ಇಒಐ ನಿರೀಕ್ಷೆ, 12,000 ಉದ್ಯೋಗ ಸೃಷ್ಟಿ