Connect with us


      




ವಿದೇಶ

ಶಾಲೆಗಳಿಗೆ ಬೀಗ.. ಹಿಜಾಬ್ ಇಲ್ಲದೆ ಪ್ರಯಾಣಿಸುವಂತಿಲ್ಲ!

Published

on

ಕಾಬೂಲ್, ಡಿಸೆಂಬರ್ 27 (ಯು.ಎನ್.ಐ.) ಅಫ್ಘಾನಿಸ್ತಾನದಲ್ಲಿ ಇನ್ನೂ ವಿಶ್ವವಿದ್ಯಾಲಯಗಳು ತೆರೆದಿಲ್ಲ ಎಂದು ತಾಲಿಬಾನ್ ಸರ್ಕಾರ ಹೇಳಿದೆ. ಯುದ್ಧದಿಂದ ತತ್ತರಿಸಿರುವ ದೇಶ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವುದೇ ಇದರ ಹಿಂದಿನ ಕಾರಣ. ಇದಲ್ಲದೇ ವಿಶ್ವವಿದ್ಯಾನಿಲಯ ತೆರೆಯದೇ ಇರುವುದರ ಹಿಂದೆ ಸಹ ಶಿಕ್ಷಣದ ಸಮಸ್ಯೆಯೂ ಅಡಗಿದೆ. ಹುಡುಗಿಯರಿಗೆ ಪ್ರತ್ಯೇಕ ತರಗತಿಗಳನ್ನು ರಚಿಸಲು ಮತ್ತು ಹೆಚ್ಚುವರಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಹೆಚ್ಚಿನ ಸಮಯ ಮತ್ತು ಹೆಚ್ಚುವರಿ ಬಜೆಟ್ ಅಗತ್ಯವಿದೆ ಎಂದು ತಾಲಿಬಾನ್ ಉನ್ನತ ಶಿಕ್ಷಣ ಸಚಿವ ಅಬ್ದುಲ್ ಬಾಕಿ ಹಕ್ಕಾನಿ ಹೇಳಿದ್ದಾರೆ ಎಂದು ಖಾಮಾ ಪ್ರೆಸ್ ವರದಿ ಮಾಡಿದೆ.

ಅಫ್ಘಾನಿಸ್ತಾನದಲ್ಲಿ ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಮತ್ತು ಬಾಲಕಿಯರ ಪ್ರೌಢಶಾಲೆಗಳು ಇನ್ನೂ ಪುನರಾರಂಭಗೊಂಡಿಲ್ಲ. ವಿಶ್ವದ ರಾಷ್ಟ್ರಗಳ ವಿರೋಧದ ಮಧ್ಯೆಯೇ ಈ ವರ್ಷ ಆಗಸ್ಟ್ 15 ರಂದು ತಾಲಿಬಾನ್  ಅಫ್ಘಾನಿಸ್ತಾನವನ್ನು ಮರಳಿ ವಶಪಡಿಸಿಕೊಂಡಿತು. ವಿಶ್ವವಿದ್ಯಾನಿಲಯದಲ್ಲಿ ಹುಡುಗಿಯರು ಹುಡುಗರು ಒಂದೇ ತರಗತಿಯಲ್ಲಿ ಕುಳಿತುಕೊಳ್ಳಲು ಇನ್ನು ಮುಂದೆ ಅನುಮತಿಸುವುದಿಲ್ಲ ಎಂದು ತಾಲಿಬಾನ್ ಆದೇಶಿಸಿದೆ.

ಹಿಜಾಬ್ ಇಲ್ಲದೆ ಸಾರ್ವಜನಿಕ ಸಾರಿಗೆಯಲ್ಲಿ ಕುಳಿತುಕೊಳ್ಳುವಂತಿಲ್ಲ

ಎಲ್ಲಾ ವಾಹನ ಮಾಲೀಕರು ತಮ್ಮ ವಾಹನದಲ್ಲಿ ಇಸ್ಲಾಮಿಕ್ ಹಿಜಾಬ್ ಧರಿಸಿರುವ ಮಹಿಳೆಯರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ಆದೇಶಿಸಿದೆ. ತಾಲಿಬಾನ್‌ನ ಈ ಕ್ರಮವನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಟೀಕಿಸಿದ್ದಾರೆ. 72 ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣಿಸುವ ಮಹಿಳೆಯರಿಗೆ ಆಪ್ತ ಕುಟುಂಬದ ಸದಸ್ಯರು ಜೊತೆಗಿಲ್ಲದಿದ್ದರೆ ಸವಾರಿ ಮಾಡಬಾರದು ಎಂದು ಸಚಿವಾಲಯದ ವಕ್ತಾರ ಸಾದಿಕ್ ಅಕಿಫ್ ಮುಹಾಜಿರ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಹತ್ತಿರದ ಸದಸ್ಯರು ಪುರುಷರಾಗಿರಬೇಕು ಎಂದು ಹೇಳಿದ್ದಾರೆ.

ತಾಲಿಬಾನ್ ಸರ್ಕಾರದಲ್ಲಿ ಒಬ್ಬ ಮಹಿಳೆಯೂ ಇಲ್ಲ

ಅಫ್ಘಾನಿಸ್ತಾನದ ಟಿವಿ ಚಾನೆಲ್ ಗಳಲ್ಲಿ ಮಹಿಳೆಯರು ಇರುವ ಧಾರಾವಾಹಿಗಳು ಮತ್ತು ಚಲನಚಿತ್ರಗಳನ್ನು ಪ್ರದರ್ಶಿಸುವುದು ಹಾಗೂ ಮಹಿಳಾ ಟಿವಿ ಪತ್ರಕರ್ತರು ಸುದ್ದಿ ಓದುವಾಗ ಹಿಜಾಬ್ ಧರಿಸಬೇಕು ಎಂದು ಸಚಿವಾಲಯ ಹೇಳಿದೆ. ಅಲ್ಲದೆ, ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಮಹಿಳೆಯರ ಹಕ್ಕುಗಳನ್ನು ಮಿತಿಗೊಳಿಸಲು ಪ್ರಾರಂಭಿಸಿದೆ. ತಾಲಿಬಾನ್ ಮಧ್ಯಂತರ ಸರ್ಕಾರವನ್ನು ರಚನೆಗೊಂಡಾಗ ಒಬ್ಬ ಮಹಿಳೆಯನ್ನೂ ಸಹ ತಮ್ಮ ಆಡಳಿತದಲ್ಲಿ ಸೇರ್ಪಡೆ ಮಾಡಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ತಾಲಿಬಾನ್ ಸರ್ಕಾರವನ್ನು ಈ ಹಿಂದೆ ಟೀಕೆ ಮಾಡಲಾಗಿತ್ತು.

ವಿದೇಶ

ಅಫ್ಘಾನಿಸ್ತಾನ ಬಾಂಬ್ ಸ್ಫೋಟ: 7 ಮಂದಿ ಸಾವು

Published

on

ಹೆರಾತ್: ಜನೆವರಿ 23 (ಯು.ಎನ್.ಐ.) ಅಫ್ಘಾನಿಸ್ತಾನದ ಪಶ್ಚಿಮ ನಗರವಾಗಿರುವ ಹೆರಾತ್‌ನಲ್ಲಿ ಮಿನಿ ವ್ಯಾನ್‌ ಒಳಗೆ ಇಟ್ಟಿದ್ದ ಬಾಂಬ್ ಸ್ಫೋಟಗೊಂಡು 7 ಮಂದಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರೂ ಸೇರಿದ್ದು, ದಾಳಿಯಲ್ಲಿ 10 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಕಮಾಂಡರ್ ಮೌಲಾವಿ ಅನ್ಸಾರಿ ಹೇಳಿದ್ದಾರೆ. ಆದರೆ ಸ್ಫೋಟದ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಇದುವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಸೀಕ್ರೆಟ್ ಇಲಾಖೆಯ ವಕ್ತಾರ ಸಬಿತ್ ಹಾರ್ವೆ ನೀಡಿರುವ ಮಾಹಿತಿ ಪ್ರಕಾರ, “ಪ್ರಯಾಣಿಕರ ವಾಹನದಲ್ಲಿನ ತೈಲ ಟ್ಯಾಂಕ್ ಮೇಲೆ ಸ್ಫೋಟಕವನ್ನು ಅಳವಡಿಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ” ಎಂದು ಹೇಳಿದ್ದಾರೆ. ಇನ್ನು ಗಾಯಗೊಂಡ 10 ಮಂದಿಯಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೆರಾತ್‌ನ ಆರೋಗ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಐಸಿಸ್ ಮತ್ತು ಐಸಿಸ್-ಕೆ ಭಯೋತ್ಪಾದಕರ ಮೇಲೆ ಶಂಕೆ

ಸ್ಫೋಟ ಸಂಭವಿಸಿದ ಹೆರಾತ್ ಪ್ರದೇಶದಲ್ಲಿ ಶಿಯಾ ಹಜಾರಾ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದೆ. ಈ ಸಮುದಾಯವು ಹೆಚ್ಚಾಗಿ ISIS ಮತ್ತು ಇಸ್ಲಾಮಿಕ್ ಸ್ಟೇಟ್ ಇನ್ ಖೊರಾಸನ್ (ISIS-K) ಭಯೋತ್ಪಾದಕರ ದಾಳಿಗೆ ತುತ್ತಾಗುತ್ತಿರುತ್ತಾರೆ. ಇದರಿಂದಾಗಿ ಈ ದಾಳಿಯ ಹಿಂದೆ ಈ ಉಗ್ರ ಸಂಘಟನೆಗಳ ಕೈವಾಡವಿರಬಹುದು ಎಂದು ಊಹಿಸಲಾಗಿದೆ.
ಹೆರಾತ್ ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ನಗರವಾಗಿದ್ದು, ಇರಾನ್‌ನ ಗಡಿಯ ಸಮೀಪದಲ್ಲಿದೆ. ಅಫ್ಘಾನಿಸ್ತಾನದ ಇತರ ಪ್ರದೇಶಗಳಿಗೆ ಹೋಲಿಸಿದರೆ ಈ ನಗರವನ್ನು ಸಾಕಷ್ಟು ಶಾಂತವೆಂದು ಪರಿಗಣಿಸಲಾಗಿದೆ. ಆದರೆ, ಈ ದಾಳಿಯಿಂದ ಉಗ್ರರ ಪೈಶಾಚಿಕ ಕೃತ್ಯ ಮತ್ತಷ್ಟು ಅಫ್ಘಾನಿಸ್ತಾನದಲ್ಲಿ ವ್ಯಾಪಿಸತೊಡಗಿದೆ.

ಆರ್ಥಿಕ ಹೊಡೆತದಿಂದ ತತ್ತರಿಸಿದ ತಾಲಿಬಾನ್!

ಪ್ರಪಂಚದಾದ್ಯಂತದ ವಿವಿಧ ದೇಶಗಳು 20 ವರ್ಷಗಳ ಕಾಲದಿಂದ ಅಫ್ಘಾನಿಸ್ತಾನಕ್ಕೆ ನೀಡುತ್ತಿದ್ದ ನೆರವನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ ಅಫ್ಘಾನಿಸ್ತಾನ ಆಡಳಿತರೂಢ ಸರ್ಕಾರ ತಾಲಿಬಾನ್ ತತ್ತರಿಸಿ ಹೋಗಿದೆ. 2020ರಲ್ಲಿ ಅಫ್ಘಾನಿಸ್ತಾನದ ಬಜೆಟ್ ಸುಮಾರು 41 ಸಾವಿರ ಕೋಟಿಗಳಷ್ಟಿತ್ತು, ಈಗ ಅದು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಕೇವಲ 3,800 ಕೋಟಿಗಳಾಗಿದೆ.

Continue Reading

ವಿದೇಶ

ಅಧಿಕಾರಕ್ಕಾಗಿ ಟ್ರಂಪ್‌ ಆ ಮಟ್ಟಕ್ಕೆ ಇಳಿದಿದ್ದರೆ ? ಬೆಳಕಿಗೆ ಬಂದ ಆಘಾತಕಾರಿ ವಿಷಯ !

Published

on

By

ಮತ ಯಂತ್ರಗಳ ಸ್ವಾಧೀನಕ್ಕೆ ಟ್ರಂಪ್ ಪತ್ರ !

ವಾಷಿಂಗ್ಟನ್, ಜ 23(ಯುಎನ್‌ ಐ) – ಅಧಿಕಾರ ಹಸ್ತಾಂತರ ಶಾಂತಿಯುತ, ಸುಗಮವಾಗಿ ನಡೆಯುವುದು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬೇಕಿರಲಿಲ್ಲವೇ ? ಅಧಿಕಾರದಲ್ಲಿ ಮುಂದುವರಿಯಲು ಅವರು ಇನ್ನಿಲ್ಲದ ಪ್ರಯತ್ನ ನಡೆಸಿದ್ದರಾ ? ಈ ಅಂಶಗಳನ್ನು ದೃಢಪಡಿಸುವಂತಹ ಪತ್ರವೊಂದು ಬೆಳಕಿಗೆ ಬಂದಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ನಂತರ ಡೋನಾಲ್ಡ್‌ ಟ್ರಂಪ್ ಬೆಂಬಲಿಗರು ಜನವರಿ 6 ರಂದು ಕ್ಯಾಪಿಟಲ್ ಹಿಲ್ ಕಟ್ಟಡದ ಮೇಲೆ ದಾಳಿ ನಡೆಸಿದ್ದರು. ಈ ಕುರಿತು ತನಿಖೆ ನಡೆಸುತ್ತಿರುವ ಸದನ ಸಮಿತಿಗೆ ಈ ಪತ್ರ ಲಭಿಸಿದೆ. ಮತ ಯಂತ್ರಗಳನ್ನು ವಶಪಡಿಸಿಕೊಳ್ಳುವಂತೆ ರಕ್ಷಣಾ ಕಾರ್ಯದರ್ಶಿಗೆ ಈ ಪತ್ರವನ್ನು ಕಳುಹಿಸಲು ಟ್ರಂಪ್‌ ಬಯಸಿದ್ದರು. ಪತ್ರ ಸಿದ್ದಪಡಿಸಿದರಾದರೂ, ಅದನ್ನು ಅಧಿಕೃತವಾಗಿ ಜಾರಿಗೊಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಆ ಪತ್ರ ರಕ್ಷಣಾ ಸಚಿವಾಲಯಕ್ಕೆ ತಲುಪಿದ್ದರೆ ಚುನಾವಣಾ ಫಲಿತಾಂಶ ದೃಢೀಕರಣ ಇನ್ನೂ 2 ತಿಂಗಳು ವಿಳಂಬವಾಗುತ್ತಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.

Continue Reading

ವಿದೇಶ

W H M O ನಿರ್ದೇಶಕ ಸ್ಥಾನಕ್ಕೆ ಮಜು ವರ್ಗೀಸ್‌ ರಾಜೀನಾಮೆ

Published

on

By

ವಾಷಿಂಗ್ಟನ್, ಜ 23(ಯುಎನ್‌ ಐ) ಶ್ವೇತ ಭವನ ಸೇನಾ ಕಚೇರಿಯ ನಿರ್ದೇಶಕ ಸ್ಥಾನಕ್ಕೆ ಭಾರತೀಯ ಮೂಲದ ಮಜು ವರ್ಗೀಸ್ ಅವರು ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದು, ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದು ತಮಗೆ ಹೆಮ್ಮೆ ಮೂಡಿಸಿದೆ ಎಂದು ಶನಿವಾರ ಟ್ವೀಟ್ ಮಾಡಿದ್ದಾರೆ.
ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಮಜು ಅವರ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಶ್ವೇತಭವನದ ಅಧಿಕಾರಿಗಳು ಪ್ರಶಂಸಿಸಿದ್ದಾರೆ. ಮಜು ಅವರು ಈ ಹಿಂದೆ ಒಬಾಮಾ ಆಡಳಿತದಲ್ಲಿಯೂ ಸೇವೆ ಸಲ್ಲಿಸಿದ್ದರು. ಈ ಹುದ್ದೆಗೆ ಯಾರನ್ನು ನೇಮಕ ಮಾಡಬೇಕೆಂದು ಶ್ವೇತಭವನ ಇನ್ನೂ ನಿರ್ಧರಿಸಿಲ್ಲ. ಮಜು ಮುಂದಿನ ಚಟುವಟಿಕೆಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ವೃತ್ತಿಯಲ್ಲಿ ಮಜು ವಕೀಲರಾಗಿದ್ದು, ಅವರು ಮೂಲತಹಃ ಕೇರಳದವರಾಗಿದ್ದಾರೆ.

Continue Reading
Advertisement
ದೇಶ1 min ago

ಬಂಗಾಳ: ನೇತಾಜಿ ಜನ್ಮದಿನದಂದು ಲಾಠಿ ಚಾರ್ಜ್

ಕೋಲ್ಕತ್ತಾ: ಜನೆವರಿ 23 (ಯು.ಎನ್.ಐ.) ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಸಂದರ್ಭದಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ರಾಜಕೀಯ ನಿಂತಿಲ್ಲ. ಪಶ್ಚಿಮ ಬಂಗಾಳದ...

ಅಂಕಣ51 mins ago

ದಟ್ಟ ಕಾಡಿನಲ್ಲಿ ʻಸಪ್ನೋಂ ಕೀ ರಾಣೀʼ

ಅಂಕಣ: ಒಂದೂರಲ್ಲಿ ಒಂದಿನ- 3 ಈ ಒಂದೂರು ಅನ್ನುವ ಮಾಯೆ ಇದೆಯಲ್ಲ, ಅದು ವಿಚಿತ್ರವಾದದ್ದು. ಅಪ್ಪ ಕಥೆ ಹೇಳುವಾಗ ಪ್ರತಿ ಸಲವೂ ಆ ಕಥೆ ಒಂದೂರಿನಲ್ಲಿ ಅಂತಲೇ...

ಕ್ರೀಡೆ1 hour ago

ಅಂಕುಶ್ ರಘುವಂಶಿ ಟೀಂ ಇಂಡಿಯಾದ ಉದಯೋನ್ಮುಖ ತಾರೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅಂಡರ್ 19 ವರ್ಲ್ಡ್ ಕಪ್ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ದೊರೆತಿದ್ದಾರೆ. ಅವರೇ ದೆಹಲಿ ಮೂಲದ ಅಂಕುಶ್...

ಅಂಕಣ2 hours ago

ಎಳವೆಯಿಂದ ರಂಗಭೂಮಿ

ನಾದಾಂಕಣ – ಡಾ. ನಾ. ದಾಮೋದರ ಶೆಟ್ಟಿ ಭಾರತೀಯ ಹಾಗೂ ಗ್ರೀಕ್‌ ರಂಗಭೂಮಿಗೆ ಬಹುದೊಡ್ಡ ಪರಂಪರೆಇದೆ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಯುರೋಪಿನ ರಂಗಭೂಮಿಯಾಗಲೀ ರಷ್ಯಾ, ಅಮೇರಿಕಾ...

ದೇಶ2 hours ago

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು,...

ಹಣಕಾಸು3 hours ago

ಕೆಲಸ ಬದಲಾಯಿಸಿದ್ದೀರಾ? ಚಿಂತೆ ಬಿಡಿ.. ನಿಮ್ಮ ನೆರವಿಗೆ ಇದೆ ಇಪಿಎಫ್ಒ!

ಬೆಂಗಳೂರು: ಜನೆವರಿ 23 (ಯು.ಎನ್.ಐ.) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ...

ದೇಶ3 hours ago

ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ… ದೇಶಾದ್ಯಂತ ಪರಾಕ್ರಮ ದಿನವಾಗಿ ಆಚರಣೆ

ನವದೆಹಲಿ, ಜ ೨೩( ಯುಎನ್ ಐ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ನೇ ಜನ್ಮಜಯಂತಿ ಇಂದು. ದೇಶಾದ್ಯಂತ ಪರಾಕ್ರಮ ದಿನವಾಗಿ ನೇತಾಜಿ...

ಕರ್ನಾಟಕ4 hours ago

ಇಡೀ ವರ್ಷ ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆಗೆ ತೀರ್ಮಾನ: ಸಿಎಂ

ಬೆಂಗಳೂರು : ಜನೆವರಿ 23 (ಯು.ಎನ್.ಐ.) ರಾಜ್ಯ ಸರ್ಕಾರದ ವತಿಯಿಂದ ವರ್ಷವಿಡೀ ನೇತಾಜಿ ಸುಭಾಷ್ ಚಂದ್ರಬೋಸ್ ರವರ 125ನೇ ಜನ್ಮ ದಿನಾಚರಣೆಯನ್ನ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ...

ಅಂಕಣ4 hours ago

ಸ್ವಾತಂತ್ರ್ಯಕ್ಕಿಂತ ದೊಡ್ಡದು ಇನ್ಯಾವುದಿದೆ ?

‌ಅಂಕಣ: ದಿಟನುಡಿ -೩ ಕಳೆದ ವಾರ ನನ್ನ ಕೈರೋಪ್ರಾಕ್ಟರ್ ರೇ ಬಳಿ ಹೋಗಿದ್ದೆ. ಏಕೋ ಗೊತ್ತಿಲ್ಲ ಕೆಲ ದಿನಗಳ ಹಿಂದೆ ಸೊಂಟ ಹಿಡಿದಿತ್ತು. ಏಳಲು, ಕೂರಲು, ನಿಲ್ಲಲು...

ದೇಶ4 hours ago

ಪಂಜಾಬ್ ಚುನಾವಣೆ: ಕೆಂಪು ಕೋಟೆ ಹಿಂಸಾಚಾರದ ಆರೋಪಿಗೆ ರೈತ ಸಂಘಟನೆಯಿಂದ ಟಿಕೆಟ್!

ಚಂಡೀಗಢ: ಜನೆವರಿ 23 (ಯು.ಎನ್.ಐ.) ರೈತರ ಸಂಘಟನೆ ಯುನೈಟೆಡ್ ಸಮಾಜ ಮೋರ್ಚಾ ಪಂಜಾಬ್ ವಿಧಾನಸಭಾ ಚುನಾವಣೆಗೆ 35 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ...

ಟ್ರೆಂಡಿಂಗ್

Share