Connect with us


      
ರಾಜಕೀಯ

ಮತಾಂತರ ನಿಷೇಧ ವಿಧೇಯಕ ಸಂವಿಧಾನ ವಿರೋಧಿ; ಎಸ್ ಡಿ ಪಿ ಐ

UNI Kannada

Published

on

ಬೆಂಗಳೂರು, ಜ ೭(ಯುಎನ್ ಐ) ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ತರಾತುರಿಯಲ್ಲಿ ಜಾರಿ ಮಾಡಲು ಹೊರಟಿರುವ ಮತಾಂತರ ನಿಷೇಧ ವಿಧೇಯಕ ಸಂವಿಧಾನ ವಿರೋಧಿ, ಸರ್ವಾಧಿಕಾರಿ ಹಾಗೂ ಅಪ್ರಜಾಸತ್ತಾತ್ಮಕ ನಿಲುವು ಹೊಂದಿದೆ ಎಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಬೆಂಗಳೂರಿನಲ್ಲಿ ಆರೋಪಿಸಿದ್ದಾರೆ

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಧರ್ಮದ ಹೆಸರಲ್ಲಿ ಅಮಾಯಕರನ್ನು ಹಿಂಸಿಸುವ, ಅವರ ಮೇಲಿನ ದೈಹಿಕ, ಮಾನಸಿಕ ದಾಳಿಗಳಿಗೆ ಪ್ರಚೋದಿಸುವ ಕೃತ್ಯವಾಗಿದೆ. ಈ ಕಾಯ್ದೆ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದ ಕಾಯಿದೆಯಾಗಿದೆ” ಎಂದು ಹೇಳಿದರು.

ಈ ವಿಧೇಯಕ ಸಂವಿಧಾನದ ೨೫ ರಿಂದ ೨೮ರವರೆಗಿನ ಪರಿಚ್ಛೇದಗಳು ಸೂಚಿಸುತ್ತಿರುವ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಧಾರ್ಮಿಕ ಅಲ್ಪಸಂಖ್ಯಾತ ವರ್ಗದವರನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಯದ ವಾತಾವರಣದಲ್ಲಿ ಸಿಕ್ಕಿಸುವ ಶಡ್ಯಂತ್ರವಾಗಿದೆ ಎಂದು ದೂರಿದರು.

ಹುಬ್ಬಳ್ಳಿ, ಕೊಡಗು, ಹಾಸನ, ಮಂಡ್ಯ ಹಾಗು ರಾಜ್ಯದ ಹಲವು ಕಡೆಗಳಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಅಡ್ಡಿ ಸೇರಿದಂತೆ ೨೦೨೧ರ ಅವಧಿಯಲ್ಲಿ ಸುಮಾರು ೩೯ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿಗಳು ನಡೆದಿದ್ದು, ಮತಾಂತರ ನಿಷೇಧ ವಿಧೇಯಕ ಮತ್ತಷ್ಟು ದಾಳಿಗಳಿಗೆ ಪುಷ್ಠಿ ನೀಡಲು ಕಾರಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕಾಯಿದೆಯ ಮೂಲಕ ಬಿಜೆಪಿ ಹಿಂದುತ್ವ ಅಜೆಂಡಾ ಕಾರ್ಯಗತಗೊಳಿಸಲು ಪ್ರಯತ್ನಿಸಿದರೆ, ಕಾಂಗ್ರೆಸ್ ಮತ್ತು ಜೆಡಿ(ಎಸ್) ಅಲ್ಪಸಂಖ್ಯಾತ ಮತ ಬ್ಯಾಂಕ್ ಅನ್ನು ಹಿಡಿದಿಟ್ಟುಕೊಳ್ಳಲು ನಾಮಕಾವಸ್ಥೆ ವಾಗ್ವಾದ ನಡೆಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ
ಸರಕಾರ ವಿಧಾನಮಂಡಲ ಅಧಿವೇಶನದಲ್ಲಿ ಅತೀವೃಷ್ಟಿ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ಕೋವಿಡ್ ಸಂಕಷ್ಟದಂತಹ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವುದರ ಚರ್ಚೆ ಮಾಡುವುದರ ಬದಲು ಜನ ಸಾಮಾನ್ಯರ ಬದುಕಿಗೆ ಯಾವ ರೀತಿಯಲ್ಲೂ ಸಂಬಂಧ ಪಡದ ಮತಾಂತರ ನಿಷೇಧ ಮಸೂದೆ ಕುರಿತಾದ ಚರ್ಚೆ, ಸುಗ್ರೀವಾಜ್ಞೆಗಳು ಸರಕಾರದ ಭೌದ್ಧಿಕ ದಿವಾಳಿತನಕ್ಕೆ ಅವೈಜ್ಞಾನಿಕ ನಿಲುವುಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಹೇಳಿದೆ.

Share