Connect with us


      
ದೇಶ

ಗಣರಾಜ್ಯೋತ್ಸವ.. ನಾರಾಯಣ ಗುರುಗಳಿಗೆ ಅಪಮಾನ.. ಎಸ್ ಡಿ ಪಿ ಐ ಆಗ್ರಹ

UNI Kannada

Published

on

ಮಂಗಳೂರು, ಜ ೧೭ (ಯುಎನ್ ಐ) ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ರಾಜ್ಯವಾರು ಸ್ಥಳೀಯ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಪ್ರತಿಬಿಂಬಿಸುವ ಸ್ತಬ್ಧ ಚಿತ್ರ ಪ್ರದರ್ಶಿಸಲು ಅವಕಾಶ ನೀಡುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಆದರೆ, ಈ ಬಾರಿ ಗಣರಾಜ್ಯೋತ್ಸವಕ್ಕೆ ಕೇರಳ ಸರಕಾರ ಕಳಿಸಿಕೊಟ್ಟ ಸಮಾಜ ಸುಧಾರಕ, ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕರಿಸಿರುವ ಮೂಲಕ ನಾರಾಯಣ ಗುರುಗಳಿಗೆ, ಅವರ ಅನುಯಾಯಿಗಳಿಗೆ ಘೋರ ಅಪಮಾನ ಮಾಡಿದೆ ಎಂದು ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಹೇಳಿದ್ದಾರೆ.

ಕೇರಳದ (ಅಂದಿನ ಟ್ರಾವಂಕೂರ್ ಸಂಸ್ಥಾನ) ಜನಸಂಖ್ಯೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇದ್ದಂತಹ ಈಳವ ಸಮುದಾಯ ಮೇಲ್ಜಾತಿಯವರ ಶ್ರೇಣೀಕೃತ ವ್ಯವಸ್ಥೆಯ ಕರಾಳ ನಿಯಂತ್ರಣದಿಂದ ಅತ್ಯಂತ ಅಮಾನವೀಯ, ಅಸ್ಪೃಶ್ಯತೆಯಿಂದ ಬಂಧಿಸಲ್ಪಟ್ಟು ಅವಮಾನಕರವಾದ ಬದುಕು ಸಾಗಿಸುತ್ತಿದ್ದ ಸಂದರ್ಭದಲ್ಲಿ ಹದಿನೆಂಟನೆಯ ಶತಮಾನದ ಮಧ್ಯ ಭಾಗದಲ್ಲಿ ಅಂದಿನ ಟ್ರವಾಂಕೂರ್ ಸಂಸ್ಥಾನದ ಚೆಂಪಝಂತಿ ಎಂಬ ಗ್ರಾಮದಲ್ಲಿ ಜನ್ಮತಾಳಿದ ನಾರಾಯಣ ಗುರುಗಳು ತಮ್ಮ ಎಪ್ಪತ್ತೆರಡು ವರ್ಷಗಳ ಸುಧೀರ್ಘ ಜೀವನದಲ್ಲಿ ಮಾಡಿದ ಕ್ರಾಂತಿಕಾರಿ ,ಮಾನವತಾವಾದಿ ಹೋರಾಟಗಳು , ಅವರು ಕೈಗೊಂಡ ಸುಧಾರಣಾವಾದಿ ಆಂದೋಲನಗಳು ಈಳವ (ಬಿಲ್ಲವ) ಸಮುದಾಯವನ್ನು ಹಂತ ಹಂತವಾಗಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಯಿತು.

.
ಸಂವಿದಾನಾತ್ಮಕವಾಗಿ ಆಯ್ಕೆ ಯಾದ ರಾಜ್ಯ ಸರಕಾರವೊಂದು ತನ್ನ ನೆಲದ ಇತಿಹಾಸ ಪುರುಷನ ಚರಿತ್ರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಕಳಿಸಿ ಕೊಟ್ಟ ಸ್ತಬ್ಧ ಚಿತ್ರವನ್ನು ನಿರಾಕರಿಸಿರುವುದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ದೋರಣೆ ಪ್ರತಿಬಿಂಬಿಸುತ್ತಿದೆ . ಇದರ ವಿರುದ್ಧ ದ್ವನಿಯೆತ್ತಬೇಕಾದ ನಾರಾಯಣ ಗುರುಗಳ ಅನುಯಾಯಿಗಳು ಸೇರಿದಂತೆ ಜಾತ್ಯಾತೀತ ಪಕ್ಷಗಳ ಮೌನ ದೇಶದ ಸಂವಿದಾನಕ್ಕೆ ಅಪಾಯಕಾರಿ ಆಗಲಿದೆ ಎಂದು ಕಳವಳವ್ಯಕ್ತಪಡಿಸಿದೆ.

ದೇಶದ ಸುಂದರ ಚರಿತ್ರೆ ಹಾಗೂ ಗತ ವೈಭವದ ಇತಿಹಾಸವನ್ನು ಬದಲಾಯಿಸಲು ಬಿಜೆಪಿ ಸರಕಾರ ಹೊರಟರೆ ಎಸ್ ಡಿ ಪಿ ಐ ಪಕ್ಷವು ಅದನ್ನು ಜನಾಂದೋಲನದ ಮೂಲಕ ಎದುರಿಸಲು ಸದಾ ಸನ್ನದ್ದ ವಾಗಿದೆ ಎಂದು ಸರಕಾರ ಅರಿತು ಕೊಳ್ಳಬೇಕಾಗಿದೆ ಜನವರಿ ೨೬ ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಕೇರಳದ ಗುರು ನಾರಾಯಣ ಸ್ವಾಮಿಗಳ ಸ್ತಬ್ಧ ಚಿತ್ರ ಅಳವಡಿಸಲು ಸರಕಾರ ಅವಕಾಶ ಮಾಡಿಕೊಟ್ಟು ದಾರ್ಶನಿಕರ ಚರಿತ್ರೆಯನ್ನು ಇಂದಿನ ತಲೆಮಾರಿಗೆ ಪರಿಚಯಿಸುವ ಕೆಲಸ ಮಾಡಿ ಕೊಡಬೇಕು ಇದಕ್ಕಾಗಿ ರಾಜ್ಯದ ಎಲ್ಲ ಸಂಸದರು ಪ್ರಯತ್ನಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Share