Connect with us


      




ಕ್ರೀಡೆ

2022ರ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಿಂದ ಹೊರಗುಳಿದ ಸೆರೆನಾ ವಿಲಿಯಮ್ಸ್

Vanitha Jain

Published

on

ಸೆರೆನಾ ವಿಲಿಯಮ್ಸ್

ಮೆಲ್ಬರ್ನ್, ಡಿಸೆಂಬರ್ 8 (ಯು.ಎನ್.ಐ): ಟೆನಿಸ್ ಜಗತ್ತಿನ ತಾರೆಯಾಗಿರುವ ಅಮೆರಿಕಾದ ಸೆರೆನಾ ವಿಲಿಯಮ್ಸ್ 2022ರ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಿಂದ ಹೊರಗುಳಿದಿದ್ದಾರೆ.

23 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್‍ನಲ್ಲಿ ಚಾಂಪಿಯನ್ ಆಗಿರುವ ಸೆರೆನಾ ಅವರು ಎಡ ಮೊಣಕಾಲಿನ ನೋವಿನಿಂದ ವೈದ್ಯರ ಸಲಹೆ ಸೂಚನೆ ಮೇರೆಗೆ ಪಂದ್ಯದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

‘ವೈದ್ಯರ ಸಲಹೆಯ ಕಾರಣ ನಾನು 2022ರ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಿಂದ ಸ್ಪರ್ಧಿಸುತ್ತಿಲ್ಲ. ಈ ನಿರ್ಧಾರ ತೆಗೆದುಕೊಳ್ಳುವುದು ಅಷ್ಟೊಂದು ಸುಲಭವಲ್ಲ. ನಾನು ದೈಹಿಕವಾಗಿ ಪಂದ್ಯದಲ್ಲಿ ಸ್ಪರ್ಧಿಸಲು ಶಕ್ತಳಾಗಿಲ್ಲ. ನಾನು ಪ್ರಯಾಣಿಸುವ ಎಲ್ಲಾ ನಗರಕ್ಕಿಂತ ಮೆಲ್ಬೋರ್ನ್ ನನ್ನ ಅಚ್ಚುಮೆಚ್ಚಿನ ನಗರ. ನಾನು ಪ್ರತಿವರ್ಷ ಈ ಸ್ಥಳದಲ್ಲಿ ಆಟವಾಡಲು ಎದುರು ನೋಡುತ್ತೇನೆ. ನನ್ನ ಸುತ್ತಮುತ್ತಲು ಕಾಣುತ್ತಿದ್ದ ಅಭಿಮಾನಿಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಆದರೆ ನಾನು ಇನ್ನು ಉತ್ತಮ ಪ್ರದರ್ಶನದೊಂದಿಗೆ ಪುನ: ಹಿಂತಿರುಗಲು ಉತ್ಸುಕಳಾಗಿದ್ದೇನೆ’ ಎಂದು ಸೆರೆನಾ ಹೇಳಿದ್ದಾರೆ.

ವಿಲಿಯಮ್ಸ್ 2021ರ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಲ್ಲಿ ಸೆಮಿಫೈನಲಿಸ್ಟ್ ಆಗಿದ್ದರು, ಅಂತಿಮವಾಗಿ ಚಾಂಪಿಯನ್ ನವೋಮಿ ಒಸಾಕಾಗೆ ಮಣಿಯುವ ಮುನ್ನ ಆರ್ನಾ ಸಬಲೆಂಕಾ ಮತ್ತು ಸಿಮೋನಾ ಹ್ಯಾಲೆಪ್ ಅವರನ್ನು ಸೋಲಿಸಿದರು.

Share