Connect with us


      




ದೇಶ

ಹಿಮಪಾತಕ್ಕೆ ಸಿಲುಕಿ ಏಳು ಸೇನಾ ಸಿಬ್ಬಂದಿ ನಾಪತ್ತೆ

Vanitha Jain

Published

on

ಇಟಾನಗರ: ಫೆಬ್ರವರಿ 07 (ಯು.ಎನ್.ಐ.) ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್ ನಲ್ಲಿ ಗಸ್ತು ತಿರುಗುತ್ತಿದ್ದ ತಂಡವೊಂದು ಹಿಮಪಾತಕ್ಕೆ ಸಿಲುಕಿ ಅದರಲ್ಲಿ ಏಳು ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ

ಪ್ರಸ್ತುತ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ವಿಶೇಷ ತಂಡಗಳನ್ನು ವಿಮಾನದಲ್ಲಿ ರವಾನಿಸಲಾಗಿದೆ” ಎಂದು ರಕ್ಷಣಾ ಪಿಆರ್ ಒ ತೇಜ್ಪುರ್ ಸೋಮವಾರ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತದ ಕಾರಣ ಈ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಉಂಟಾಗಿತ್ತು. ವಿರಳ ಜನಸಂಖ್ಯೆಯುಳ್ಳ, ಅರಣ್ಯದಿಂದ ಕೂಡಿದ ಕಮೆಂಗ್ ಸೆಕ್ಟರ್ 14,000 ಅಡಿಗಳಷ್ಟು ಎತ್ತರದಲ್ಲಿದೆ ಮತ್ತು ಭೂತಾನ್ ಮತ್ತು ಚೀನಾದ ಗಡಿಯಲ್ಲಿದೆ.

Share