Published
2 months agoon
ಔರಂಗಾಬಾದ್: ಜೂನ್ 25 (ಯು.ಎನ್.ಐ.) ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಔರಂಗಾಬಾದ್ ಮತ್ತು ಜಲ್ನಾ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ಏಳು ಜನ ಸಾವಿಗೀಡಾಗಿದ್ದಾರೆ.
ಔರಂಗಾಬಾದ್ ಜಿಲ್ಲೆಯ ಕನ್ನಡ ತಾಲೂಕಿನ ಅಡ್ಗಾಂವ್-ಜೆಹೂರ್ ಗ್ರಾಮದಲ್ಲಿ ಮೇಘಸ್ಫೋಟದಿಂದಾಗಿ ಎಂಟು ಜನರು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಈ ಪೈಕಿ ಐವರನ್ನು ರಕ್ಷಿಸಲಾಗಿದೆ. ಆದರೆ ಒಬ್ಬ ಮಹಿಳೆ ಮತ್ತು ಇಬ್ಬರು ಬಾಲಕಿಯರು ಅಪಮೃತ್ಯುಗೀಡಾಗಿದ್ದಾರೆ. ಮತ್ತೊಂದು ಘಟನೆಯಲ್ಲಿ ಸೋಯಗಾಂವ ತಾಲೂಕಿನ ಹನುಮಂತ ಖೇಡಾ ನಿವಾಸಿ 20 ವರ್ಷದ ಕಿಶೋರ್ ಪವಾರ್ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಜಲ್ನಾ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ರೀನಾ ದಾವರ್, ಅಂಬಾಡ್ ಧನಂಜಯ್ ಮೈತೆ ಮತ್ತು ಶಾಂತಾಬಾಯಿ ರಂಗನಾಥ್ ಪವಾರ್ ಎಂದು ಗುರುತಿಸಲಾಗಿದೆ.