Connect with us


      
ದೇಶ

ಅಪಘಾತ: ಏಳು ಮಂದಿ ಸಾವು; 24ಕ್ಕೂ ಹೆಚ್ಚು ಮಂದಿಗೆ ಗಾಯ

Vanitha Jain

Published

on

ಪಾಕುರ್: ಜನೆವರಿ 05(ಯು.ಎನ್.ಐ) ಜಾರ್ಖಂಡಿನ ಪಾಕುರ್ ಜಿಲ್ಲೆಯಲ್ಲಿ ಬುಧವಾರ ಬಸ್ ಮತ್ತು ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 24 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮ್ರಪಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೇರ್‍ಕೋಲಾ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

“ವೇಗವಾಗಿ ಬಂದ ಟ್ರಕ್ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಎರಡು ಡಜನ್‍ಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ” ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‍ಡಿಪಿಒ) ಅಜಿತ್ ಕುಮಾರ್ ವಿಮಲ್ ಹೇಳಿದ್ದಾರೆ.

ಅದೃಷ್ಟವಶಾತ್, ಟ್ರಕ್‍ನಲ್ಲಿದ್ದ ಯಾವುದೇ ಗ್ಯಾಸ್ ಸಿಲಿಂಡರ್‍ಗಳು ಸ್ಫೋಟಗೊಂಡಿಲ್ಲ, ಇಲ್ಲದಿದ್ದರೆ ಅಪಘಾತದಿಂದ ಇನ್ನಷ್ಟು ಸಾವು ಸಂಭವಿಸುತ್ತಿತ್ತು. ಪರಿಸ್ಥಿತಿಯನ್ನು ಗಮನಿಸಿದರೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಮಲ್ ಹೇಳಿದರು.

Share