Published
6 months agoon
By
Vanitha Jainತೋಷಮ್, ಜನವರಿ 01(ಯು.ಎನ್.ಐ)ಹರಿಯಾಣದ ಭಿವಾನಿ ಜಿಲ್ಲೆಯ ತೋಷಮ್ ಬ್ಲಾಕ್ನ ದಡಮ್ ಗಣಿಗಾರಿಕೆ ವಲಯದಲ್ಲಿ ಭೂಕುಸಿತ ಸಂಭವಿಸಿದ್ದು, ಹಲವಾರು ಜನರು ಸಿಲುಕಿರುವ ಶಂಕೆ ಇದೆ.
ಜಿಲ್ಲಾಡಳಿತವು ತೋಷಮ್ ಬ್ಲಾಕ್ನ ದಡಮ್ ಗಣಿಗಾರಿಕೆ ವಲಯದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.
ಭೂ ಅವಶೇಷಗಳಡಿ ಎಷ್ಟು ಜನರು ಸಿಲುಕಿದ್ದಾರೆ ಎಂಬ ಬಗ್ಗೆ ತಿಳಿದಿಲ್ಲ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶದ ಮೇರೆಗೆ ಈ ಪ್ರದೇಶದಲ್ಲಿ ಗಣಿಗಾರಿಕೆಯನ್ನು ನಿರ್ಬಂಧಿಸಲಾಗಿದೆ. ಆದರೂ ಗಣಿಗಾರಿಕೆ ನಡೆಸಿದ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತೋಷಮ್ ಶಾಸಕ ಕಿರಣ್ ಚೌಧರಿ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಗಣಿಗಾರಿಕೆಯನ್ನು ನಿಯಮಾವಳಿಗಳ ಪ್ರಕಾರ ನಡೆಸಲಾಗುತ್ತಿಲ್ಲ, ಇದರಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು.
ಘಟನೆಯ ಕುರಿತು ಮಾತನಾಡಿದ ಜಿಲ್ಲಾಡಳಿತದ ಅಧಿಕಾರಿ, ಭೂಕುಸಿತ ಸಂಭವಿಸಿದಾಗ ಕಾರ್ಮಿಕರು ಬೇರೆ ಸ್ಥಳಕ್ಕೆ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ಅವರು ಸಿಲುಕಿರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಉದ್ಧವ್ ಠಾಕ್ರೆ
ರಾಜಸ್ಥಾನ ಶಿರಚ್ಛೇದ: ಹಂತಕರಿಗೆ ಪಾಕಿಸ್ತಾನದಲ್ಲಿ 15 ದಿನ ಟ್ರೈನಿಂಗ್
National Statistics Day: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!
ಉದಯಪುರ ಹತ್ಯೆ: ಎನ್ಐಎ ತನಿಖೆ – ಕೇಂದ್ರ ಸರಕಾರ ಆದೇಶ
ಉದಯಪುರ ಟೈಲರ್ ಹತ್ಯೆ ಖಂಡಿಸಿದ ಮಮತಾ ಬ್ಯಾನರ್ಜಿ
ಬಿಹಾರ ರಾಜಕೀಯ: ಓವೈಸಿ ಪಾರ್ಟಿಯಿಂದ ನಾಲ್ವರು ಶಾಸಕರು ಆರ್ಜೆಡಿಗೆ ಜಿಗಿತ!