Connect with us


      




ಕರ್ನಾಟಕ

ಕಲ್ಬುರ್ಗಿ ಪ್ರಶಸ್ತಿಗೆ ಕವಿ ಸಿದ್ದರಾಮಯ್ಯ ಆಯ್ಕೆ

Kumara Raitha

Published

on

ಬೆಂಗಳೂರು: ಡಿಸೆಂಬರ್ 15 (ಯು.ಎನ್.ಐ.)  ಲಂಡನ್‍ನ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನವು ಕನ್ನಡದ ಪ್ರಸಿದ್ಧ ಚಿಂತಕ, ಸಂಶೋಧಕರಾಗಿದ್ದ ದಿ. ಎಂ.ಎಂ. ಕಲ್ಬುರ್ಗಿ ಅವರ ಹೆಸರಿನಲ್ಲಿ ನೀಡುವ ಪ್ರಸಕ್ತ ಸಾಲಿನ  ಡಾ. ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿಗೆ ಕನ್ನಡದ ಪ್ರಗತಿಪರ ಲೇಖಕ, ಕವಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು 25 ಸಾವಿರ ನಗದು ಹಾಗೂ ತಾಮ್ರ ಪತ್ರವನ್ನು ಒಳಗೊಂಡಿದೆ. ದಿ. ಎಂ.ಎಂ. ಕಲ್ಬುರ್ಗಿ ಅವರ ಹೆಸರಿನಲ್ಲಿ ಮೂಢನಂಬಿಕೆ ಮತ್ತು ಮೌಢ್ಯತೆ ವಿರುದ್ಧ ಕೆಲಸ ಮಾಡುತ್ತಿರುವವರನ್ನು ಗುರುತಿಸಿ, ಪ್ರಶಸ್ತಿ ನೀಡಲಾಗುವುದು. ಅದರಂತೆ  ಎಸ್.ಜಿ. ಸಿದ್ದರಾಮಯ್ಯ ಅವರಿಗೆ ನೀಡಲು ಡಾ. ಗೊ.ರು. ಚನ್ನಬಸಪ್ಪ ಸಮಿತಿ ತೀರ್ಮಾನಿಸಿದೆ.
ಪುರಸ್ಕೃತರಿಗೆ ಡಿ.27ರಂದು ಸಂಜೆ 5.30ಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಡಾ. ಬಿ.ಎಲ್. ಶಂಕರ್ ಅಧ್ಯಕ್ಷತೆ ವಹಿಸುವರು. ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಎಸ್. ಮಹಾದೇವಯ್ಯ, ಪ್ರೊ. ಎಂ.ಎಸ್. ಆಶಾದೇವಿ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು ಎಂದು ಬಸವ ಇಂಟರ್‍ನ್ಯಾಷನಲ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ವಿ. ನಾಗರಾಜ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share