Published
2 months agoon
By
Vanitha Jainಮುಂಬೈ: ಜೂನ್ 25 (ಯು.ಎನ್.ಐ.) ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರು ಸಿನಿ ಪಯಣ ಆರಂಭಿಸಿ ಇಂದಿಗೆ 30 ವರ್ಷ. ಸುಮಾರು ಮೂರು ದಶಕಗಳ ಕಾಲ ಬಾಲಿವುಡ್ ನಲ್ಲಿ ಛಾಪನ್ನು ಮೂಡಿಸಿರುವ ಇವರು ತಮ್ಮ ಅಭಿನಯದ ಮೂಲಕ ಮಿಲಿಯನ್ ಗಟ್ಟಲೇ ಜನರನ್ನು ಸೆಳೆದಿರುವ ಸರದಾರ.
30 ವರ್ಷದ ಸಂಭ್ರಮದಲ್ಲಿರುವ ಬಾಲಿವುಡ್ ಬಾದ್ ಷಾ, ಪಠಾಣ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೂ ಅಭಿಮಾನಿಗಳ ಅಪಾರ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ. ಬಹುತಾರಾಗಣವನ್ನು ಒಳಗೊಂಡಿರುವ ಪಠಾಣ್ ಸಿನಿಮಾ ಜನವರಿ 25, 2023 ರಂದು ಬಿಡುಗಡೆಯಾಗಲಿದೆ.
ಪಠಾಣ್ ಸಿನಿಮಾದ ಒಂದು ವಿಡಿಯೋ ಬಿಡುಗಡೆಯಾಗಿದ್ದು, ಚಿತ್ರತಂಡ ಇವರ ಜರ್ನಿಗೆ ಕೊಡುಗೆಯಾಗಿ ಪಠಾಣ್ ಸಿನಿಮಾದ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಶಾರುಖ್ ಖಾನ್ ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
30 ವರ್ಷಗಳು ಮತ್ತು ನಿಮ್ಮ ಪ್ರೀತಿ ಮತ್ತು ಖುಷಿ ಅನಂತವಾದುದಾಗಿದೆ. ಇದು ಪಠಾಣ್ ಮೂಲಕ ಮುಂದುವರೆಯಲಿದೆ. 25ನೇ ಜನವರಿ, 2023 ರಂದು #YRF50 ಜೊತೆಗೆ #Pathan ಅನ್ನು ಸಂಭ್ರಮಿಸೋಣ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
30 yrs and not counting cos ur love & smiles have been infinite. Here’s to continuing with #Pathaan.
Celebrate #Pathaan with #YRF50 on 25th January, 2023. Releasing in Hindi, Tamil and Telugu. @deepikapadukone | @TheJohnAbraham | #SiddharthAnand | @yrf pic.twitter.com/tmLIfQfwUh
— Shah Rukh Khan (@iamsrk) June 25, 2022
ಪಠಾಣ್ ಜನವರಿ 25, 2023 ರಂದು ಬಿಡುಗಡೆಯಾಗಲಿದೆ. ಶಾರುಖ್ ಖಾನ್ ಜೊತೆಗೆ, ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ. ಬಹುತಾರಾಗಣದ ಈ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ.
‘ಕಾಂತಾರ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ಡೇಟ್ ಫಿಕ್ಸ್
ಪಡ್ಡೆಹೈದರ ಎದೆಬಡಿತ ಹೆಚ್ಚಿಸಿದ ಅನಿಖಾ ಸುರೇಂದ್ರನ್ ಇಚ್ಛೆ !
‘ಅವಳು ಡಾರ್ಲಿಂಗ್’ ಎಂದು ವಿಜಯ್ ದೇವರಕೊಂಡ ಹೇಳಿದ್ಯಾರಿಗೆ?
ನಟಿ ಕತ್ರಿನಾ ಕೈಫ್ ಗೆ ಜೀವ ಬೆದರಿಕೆ ಹಾಕಿದವ 2 ದಿನ ಪೊಲೀಸ್ ಕಸ್ಟಡಿಗೆ
ನಟ ರಣವೀರ್ ಸಿಂಗ್ ನಗ್ನ ಫೋಟೋಗಳು ವೈರಲ್, ಎಫ್ಐಆರ್ ದಾಖಲು
ಪಾಕಿಸ್ತಾನದ ವೇಗಿ ಶೋಯೆಬ್ ಅಖ್ತರ್ ಮೋಷನ್ ಪೋಸ್ಟರ್ ಬಿಡುಗಡೆ;