Connect with us


      
ಸಿನೆಮಾ

ಪತಿಯ ‘ಶಂಶೇರಾ’ ಲುಕ್ ಗೆ ಆಲಿಯಾ ಭಟ್ ಫಿದಾ

Lakshmi Vijaya

Published

on

ಮುಂಬೈ: ಜೂನ್ 20 (ಯು.ಎನ್.ಐ.) ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿನಯಿಸಿರುವ ಮುಂಬರುವ ಚಿತ್ರ ಬ್ರಹ್ಮಾಸ್ತ್ರ ಟ್ರೇಲರ್ ಸಖತ್ ಸದ್ದು ಮಾಡುತ್ತಿರುವಾಗಲೇ ರಣಬೀರ್ ಅಭಿನಯದ ಶಂಶೇರಾ ಫಸ್ಟ್ ಲುಕ್ ಅಭಿಮಾನಿಗಳ ಗಮನ ಸಳೆಯುತ್ತಿದೆ. ಭಾನುವಾರ ಬಿಡುಗಡೆಯಾಗಿರುವ ಶಂಶೇರಾ ಫಸ್ಟ್ ಲುಕ್ ನಲ್ಲಿ ರಣಬೀರ್ ಕಪೂರ್ ಇದುವರೆಗೂ ಕಾಣಿಸಿಕೊಂಡಿರದ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತೀವ್ರ ಕುತೂಹಲ ಮೂಡಿಸಿರುವ ಫಸ್ಟ್ ಲುಕ್ ಬಗ್ಗೆ ರೋಮಾಂಚನಗೊಂಡಿರುವ ರಣಬೀರ್ ಪತ್ನಿ ಆಲಿಯಾ ಭಟ್ ಸೋಮವಾರ ಹಂಚಿಕೊಂಡಿದ್ದು ಇದು ಹಾಟ್ ಮಾರ್ನಿಂಗ್.. ಅಂದರೆ ಗುಡ್ ಮಾರ್ನಿಂಗ್ ಎಂದು ಫಸ್ಟ್ ಲುಕ್ ಗೆ ಶೀರ್ಷಿಕೆ ಕೊಟ್ಟಿದ್ದಾರೆ.

ಪೋಸ್ಟರ್‌ನಲ್ಲಿ  ರಣಬೀರ್ ಒರಟಾದ ನೋಟದಲ್ಲಿ ಉದ್ದನೆಯ ಕೂದಲು ಮತ್ತು ಪೂರ್ಣವಾಗಿ ಬೆಳೆದ ಗಡ್ಡ, ಬಲ ಹುಬ್ಬಿನ ಮೇಲೆ ಆಳವಾದ ಗಾಯದ ಗುರುತು ಹೊಂದಿದೆ. ಅಲ್ಲದೆ  ಪೋಸ್ಟರ್‌ನಲ್ಲಿ ಅವರು ಆಯುಧವನ್ನು ಹಿಡಿದಿರುವುದನ್ನು ಕಾಣಬಹುದು.

ಶಂಶೇರಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜುಲೈ 22 ರಂದು ಬಿಡುಗಡೆಯಾಗಲಿದೆ. ಯಶ್ ರಾಜ್ ಫಿಲ್ಮ್ಸ್ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಿಸಿದ, ಪಿರಿಯಾಡಿಕ್ ಆಕ್ಷನ್ ಡ್ರಾಮಾದಲ್ಲಿ ಸಂಜಯ್ ದತ್, ವಾಣಿ ಕಪೂರ್ ಮತ್ತು ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ, ರಣಬೀರ್ ಕಪೂರ್ ಮೊದಲ ಬಾರಿಗೆ ದೊಡ್ಡ ಪಾತ್ರವನ್ನು ನಿರ್ವಹಿಸಲಿದ್ದಾರೆ. 2018 ರಲ್ಲಿ ಬಿಡುಗಡೆಯಾದ ಅವರ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಸಂಜು ನಂತರ ರಣಬೀರ್ ದೊಡ್ಡ ಪರದೆಯ ಮೇಲೆ ವಾಪಸ್ಸಾಗ್ತಿದ್ದಾರೆ.

ಅಯಾನ್ ಮುಖರ್ಜಿಯ ಬ್ರಹ್ಮಾಸ್ತ್ರದೊಂದಿಗೆ ಆಲಿಯಾ ಭಟ್ ಜೊತೆ ರಣಬೀರ್ ಕಪೂರ್ ಸೆಪ್ಟೆಂಬರ್ 9, 2022 ರಂದು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

Share