Connect with us


      
ವಾಣಿಜ್ಯ

ಐಪಿಒ ಮೇಲೆ ಕಾರ್ಮೋಡ – ಹೂಡಿಕೆದಾರರಿಗೆ ಭಯ – ಏನಾಗಲಿದೆ MobiKwik ಮತ್ತು Oyo ಭವಿಷ್ಯ?

Iranna Anchatageri

Published

on

ಮುಂಬೈ, ನ 20 (ಯುಎನ್ಐ) ಷೇರು ಮಾರುಕಟ್ಟೆಯಲ್ಲಿ ಚೊಚ್ಚಲ ಎಂಟ್ರಿಯೊಂದಿಗೆ ಅನೇಕ ಕಂಪನಿಗಳು ಹಣದ ಸುರಿಮಳೆಗೈದಿದ್ದವು. ಆದರೆ, ಪರಿಸ್ಥಿತಿ ವಿಭಿನ್ನವಾಗಿದೆ. ಹೂಡಿಕೆದಾರರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆಲ್ಲ ಕಾರಣ ನವೆಂಬರ್ 18ರ ಪೇಟಿಯಮ್ ಐಪಿಒ ಆಗಮನ ಹಿಂದೆಂದಿಗಿಂತ ಕಾಣದಷ್ಟು ನಷ್ಟದ ಬಿರುಗಾಳಿಗೆ ಸಿಲುಕಿದ್ದು.
ಎಲ್ಲರೂ ಹಣ ಪಾವತಿಗಾಗಿ ಇಷ್ಟಪಡುವ ಮೊಬೈಲ್ ಆ್ಯಪ್ ಅಂದ್ರೆ ಪೇಟಿಯಂ. ಆದ್ರೆ, ದೇಶದ ಪ್ರಮುಖ ಡಿಜಿಟಲ್ ಪಾವತಿ ಸೇವೆ ಒದಗಿಸುವ ಪೇಟಿಎಂನ ಐಪಿಒ ಭವಿಷ್ಯವನ್ನು ನೋಡಿದ ನಂತರ, ಇತರೆ ಕಂಪನಿಗಳು ಶಾಕ್ ಗೆ ಒಳಗಾಗಿವೆ. ಒಂದು ವರದಿಯ ಪ್ರಕಾರ, ಮಾರುಕಟ್ಟೆಯಲ್ಲಿ Paytm ನ ನಿರಾಶಾದಾಯಕವಾಗಿ ಎಂಟ್ರಿ ಕೊಟ್ಟ ನಂತ್ರ MobiKwik ಮತ್ತು Oyo ಯೋಜಿಸಿದ IPO ಪ್ಲಾನ್ ಮೇಲೆ ಕತ್ತಲೆ ಆವರಿಸಿದೆ.
Paytmನ IPO ಮಾರುಕಟ್ಟೆ ಮೇಲೆ ಹೂಡಿಕೆದಾರರು ಅತ್ಯಧಿಕ ಭರವಸೆ ಇಟ್ಟುಕೊಂಡಿದ್ದರು. ಆದ್ರೆ ಅವರ ಭರವಸೆ ಕ್ಷಣಮಾತ್ರದಲ್ಲಿ ಉಡೀಸ್ ಆಗಿತ್ತು. ಇಂಥ ಪರಿಸ್ಥಿತಿಯಲ್ಲಿ ಹೂಡಿಕೆದಾರರು Paytm ಮೂಲಕ ಆಗಿರುವ ನಷ್ಟದಿಂದ ಸುಧಾರಿಸಿಕೊಳ್ಳಲು ಸುಮಾರು ಮೂರ್ನಾಲ್ಕು ತಿಂಗಳಾದ್ರು ಬೇಕೇ ಬೇಕು ಅಂತಾ ವರದಿಗಳು ಹೇಳುತ್ತಿವೆ.


6 ವಿಶ್ಲೇಷಕರಿಂದ ಸಿದ್ಧವಾಯಿತು ವರದಿ :
ಮುಂಬೈನ ಬ್ರೋಕರೇಜ್ ಹೌಸ್ ಸಂಸ್ಥೆ ಪ್ರಕಾರ, 6 ವಿಶ್ಲೇಷಕರು ಮತ್ತು ಬ್ಯಾಂಕರ್‌ಗಳು ಸೇರಿ ಪೇಟಿಯಂನಂತೆ ಇದೇ ಕ್ಷೇತ್ರದ ಇತರ ಕಂಪನಿಗಳ ಐಪಿಒ ಮೇಲಿ ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದರ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಭಾರತೀಯ ಇತಿಹಾಸದಲ್ಲಿ ಐಪಿಒ ಲಿಸ್ಟಿಂಗ್ ವೇಳೆ ಡಿಜಿಜಿಟಲ್ ಪಾವತಿಯ ಸಂಸ್ಥೆಯೊಂದು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಇದೇ ಮೊದಲ ಬಾರಿ. ಇದರಿಂದ ಇತರ ಕಂಪನಿಗಳ ಐಪಿಒ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಲಿದೆ ಅನ್ನೋದನ್ನು ವಿಶ್ಲೇಷಣಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಅಂತಾ ಬ್ರೋಕರೇಜ್ ಹೌಸ್ ಸಂಸ್ಥೆ ತಿಳಿಸಿದೆ.
ಅಕೌಂಟೆಂಟ್ EY ವರದಿ ಪ್ರಕಾರ, ಭಾರತೀಯ ಕಂಪನಿಗಳು 2021 ರ ಮೊದಲ ಒಂಬತ್ತು ತಿಂಗಳಲ್ಲಿ ಆರಂಭಿಕ ಷೇರು ಮಾರಾಟದ ಮೂಲಕ 9.7 ಬಿಲಿಯನ್ ಡಾಲರ್ ಸಂಗ್ರಹಿಸಿವೆ, ಕಳೆದ ಎರಡು ದಶಕಗಳಲ್ಲಿ ಇದೇ ಅವಧಿಗೆ ಹೋಲಿಸಿದರೆ 9.7 ಬಿಲಿಯನ್ ಡಾಲರ್ ಅತ್ಯಧಿಕ ಪ್ರಮಾಣವಾಗಿದೆ. ಆದ್ರೆ ಪಾವತಿ ಸೇವಾ ಸಂಸ್ಥೆ MobiKwik ಮತ್ತು ಹೋಟೆಲ್ ಅಗ್ರಿಗೇಟರ್ OYO, ವರ್ಷಾಂತ್ಯದ ವೇಳೆಗೆ ತಮ್ಮ IPO ಅನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಂಡಿವೆ. ಮುಂದಿನ ದಿನಗಳಲ್ಲಿ ಈ ಕಂಪನಿಗಳು ಪೇಟಿಯಂನ ನಷ್ಟದ ಬಗ್ಗೆ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಹೂಡಿಕೆದಾರರಿಗೆ ದೊಡ್ಡ ನಷ್ಟ ಉಂಟು ಮಾಡುವ ಮೂಲಕ Paytm ಅವರ ಭರವಸೆಯನ್ನು ನುಚ್ಚುನೂರು ಮಾಡಿದೆ ಅಂತಾ ಅಕೌಂಟೆಂಟ್ EY ತನ್ನ ವರದಿಯಲ್ಲಿ ಹೇಳಿದೆ.
ವಿಶ್ಲೇಷಕರ ಭಯ: 
ಅತ್ಯಂತ ಹೆಚ್ಚಿನ ಬೇಡಿಕೆಯ ಐಪಿಒಗಳ ಮೇಲೆ ಇದರ ನೇರ ಪರಿಣಾಮ ಬೀರಲಿದೆ. ಪೇಟಿಯಂಗೆ ಆಗಿರುವ ಗತಿಯಿಂದಾಗಿ ಹೂಡಿಕೆದಾರರ ಮೇಲೂ ಪರಿಣಾಮ ಬೀರಲಿದೆ. ದೊಡ್ಡ ಪ್ರಮಾಣದ ಇನ್ವೆಸ್ಟರ್ ಗಳ ಪ್ರೀಮಿಯಂನಲ್ಲಿ ಕುಸಿತ ಕಾಣುವ ಸಾಧ್ಯತೆ ಇದೆ ಅನ್ನೋದು ವಿಶ್ಲೇಷಕರ ಆತಂಕ.
ಅತಿ ದೊಡ್ಡ ಐಪಿಒ ಅನ್ನೋ ಹೆಗ್ಗಳಿಕೆ ಹೊಂದಿದ್ದ Paytm!
18,300 ಕೋಟಿ ರೂ ಮೊತ್ತದ ಪೇಟಿಎಂ ಐಪಿಒ ದೇಶದ ಷೇರು ಮಾರುಕಟ್ಟೆ ಇತಿಹಾಸದಲ್ಲಿಯೇ ಅತಿ ದೊಡ್ಡ ಐಪಿಒ ಆಗಿತ್ತು. ನವೆಂಬರ್ 18ರಂದು ಲಿಸ್ಟಿಂಗ್ ವೇಳೆ Paytm ನ IPO ಬೆಲೆ 2080 ರಿಂದ 2150 ರೂಪಾಯಿ ಆಗಿತ್ತು. ಹೂಡಿಕೆದಾರರು ಲಿಸ್ಟಿಂಗ್‌ ದಿನದಲ್ಲಿ ಶೇ.27ರಷ್ಟು ಕುಸಿತ ಕಂಡಿತು. ಐಪಿಒ ನೀಡಿಕೆ ಬೆಲೆಗೆ ಹೋಲಿಸಿದರೆ ಹೂಡಿಕೆದಾರರು ಪ್ರತಿ ಷೇರಿಗೆ 590 ರೂಪಾಯಿ ನಷ್ಟ ಅನುಭವಿಸಿಬೇಕಾಯಿತು.
Paytm 10 ವರ್ಷಗಳ ಹಿಂದೆ ಪ್ರಾರಂಭ
Paytm ಸುಮಾರು 10 ವರ್ಷಗಳ ಹಿಂದೆ ಪ್ರಾರಂಭವಾಯಿತು. ಆ ಸಮಯದಲ್ಲಿ ಮೊಬೈಲ್ ರೀಚಾರ್ಜ್ ಪ್ಲಾಟ್‌ಫಾರ್ಮ್‌ನೊಂದಿಗೆ ಕಾರ್ಯಾಚರಣೆಗಿಳಿತು. ಆದಾಗ್ಯೂ, 2016 ರಲ್ಲಿ ದೇಶದಲ್ಲಿ ನೋಟು ಅಮಾನ್ಯೀಕರಣದ ನಂತರ Paytm ಕಂಪನಿಯು ವೇಗವಾಗಿ ಬೆಳೆಯಿತು. ಇದರ ನಂತರ, ಕಂಪನಿಯು ವಿಮೆ ಮತ್ತು ಚಿನ್ನದ ಮಾರಾಟ, ಚಲನಚಿತ್ರ ಮತ್ತು ವಿಮಾನ ಟಿಕೆಟ್‌ಗಳು ಮತ್ತು ಬ್ಯಾಂಕ್ ವಹಿವಾಟು ಇತ್ಯಾದಿ ಕ್ಷೇತ್ರಗಳಲ್ಲಿ ಸದ್ಯ ತೊಡಗಿಸಿಕೊಂಡಿದೆ. Paytm ನಲ್ಲಿ ಸುಮಾರು 22 ಮಿಲಿಯನ್ ವ್ಯಾಪಾರಿಗಳು ವಾರ್ಷಿಕವಾಗಿ ಸುಮಾರು 80 ಶತಕೋಟಿ ಡಾಲರ್ ವಹಿವಾಟು ನಡೆಸುತ್ತಾರೆ. ಈ ವೇದಿಕೆಯಲ್ಲಿ 337 ಮಿಲಿಯನ್ ನೋಂದಾಯಿತ ಬಳಕೆದಾರರು ಸಹ ಇದ್ದಾರೆ.

Continue Reading
Share