Connect with us


      




ದೇಶ

ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿದ ಶಶಿ ತರೂರ್

Bindushree Hosuru

Published

on

ನವದೆಹಲಿ: ಡಿ. 16 (ಯು.ಎನ್.ಐ) ಸಂಸದ ಶಶಿ ತರೂರ್ ಅವರು ನೂತನವಾಗಿ 2021 ರ ವಿಶ್ವ ಸುಂದರಿ ಕಿರೀಟವನ್ನು ಅಲಂಕರಿಸಿರುವ ಹರ್ನಾಜ್ ಕೌರ್ ಸಂಧು ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಡಿಸೆಂಬರ್ 13 ರಂದು ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಕೌರ್ ಸಂಧು ಅವರನ್ನು ವಿಜೇತ ಎಂದು ಘೋಷಿಸಲಾಯಿತು. 21 ವರ್ಷಗಳ ಬಳಿಕ ಭಾರತಕ್ಕೆ ಮತ್ತೊಮ್ಮೆ ವಿಶ್ವ ಸುಂದರಿ ಪಟ್ಟ ಒಲಿದಿದೆ.

ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಹರ್ನಾಜ್ ಸಂಧು ಅವರೊಂದಿಗಿನ ಭೇಟಿಯ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಿಸ್ ಯೂನಿವರ್ಸ್ ಹರ್ನಾಜ್ ಕೌರ್ ಸಂಧು ಅವರು ಭಾರತಕ್ಕೆ ವಿಜಯಶಾಲಿಯಾಗಿ ಹಿಂದಿರುಗಿದ್ದಕ್ಕಾಗಿ ಅವರನ್ನು ವೈಯಕ್ತಿಕವಾಗಿ ಅಭಿನಂದಿಸಲು ಸಂತೋಷವಾಗಿದೆ. ಸಹಜವಾಗಿ, ಅವರನ್ನು ಸ್ವಾಗತಿಸಲು ಹೆಮ್ಮೆಪಡುತ್ತೇನೆ. ಅವರು ವೇದಿಕೆಯಲ್ಲಿ ಕಾಣುವಂತೆಯೇ ವೈಯಕ್ತಿಕವಾಗಿಯೂ ಸಮಚಿತ್ತ ಮತ್ತು ಆಕರ್ಷಕರಾಗಿದ್ದಾರೆ ಎಂದು ತರೂರ್​​ ಬರೆದುಕೊಂಡಿದ್ದಾರೆ.

ಚಂಡೀಗಡ ಮೂಲದ ಹರ್ನಾಜ್​​ ಶಶಿ ತರೂರ್ ಅವರಿಗೆ ಧನ್ಯವಾದ ಹೇಳಿದ್ದಾರೆ. ನಿಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಿ ನನಗೆ ಸಂತೋಷವಾಗಿದೆ. ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು ಎಂದು ಹೇಳುವ ಮೂಲಕ ತರೂರ್​ ಟ್ವೀಟ್ ಅನ್ನು ಸಂಧು ರಿಟ್ವೀಟ್​ ಮಾಡಿದ್ದಾರೆ.

ಪರಾಗ್ವೆಯ ನಾಡಿಯಾ ಫೆರೇರಾ ಮತ್ತು ದಕ್ಷಿಣ ಆಫ್ರಿಕಾದ ಲಲೆಲಾ ಮಸ್ವಾನೆ ಅವರನ್ನು ಹಿಂದಿಕ್ಕಿ, ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್ 2021ರ ಸ್ಪರ್ಧೆಯಲ್ಲಿ ಜಯಗಳಿಸಿದ್ದಾರೆ. ಹರ್ನಾಜ್ ಸಂಧು ಅವರಿಗೂ ಮೊದಲು 1994 ರಲ್ಲಿ ಸುಶ್ಮಿತಾ ಸೇನ್ ಮತ್ತು 2000 ರಲ್ಲಿ ಲಾರಾ ದತ್ತಾ ವಿಶ್ವ ಸುಂದರಿ ಪಟ್ಟವನ್ನು ಗೆದ್ದಿದ್ದರು.

Share