Connect with us


      
ಕ್ರೀಡೆ

ಚೇಷ್ಟೆ ಮಾಡಲು ಹೋದ ಶಿಖರ್ ಧವನ್ ಕೆನ್ನೆಗೆ ಭಾರಿಸಿದ ವ್ಯಕ್ತಿ..!

UNI Kannada

Published

on

ಜನೆವರಿ 26 (ಯು.ಎನ್.ಐ.) ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಶಿಖರ್ ಧವನ್ ವ್ಯಕ್ತಿಯೊಬ್ಬನ ಜೊತೆ ಚೇಷ್ಟೆ ಮಾಡಲು ಹೋಗಿ ಕೆನ್ನೆಗೆ ಹೊಡೆಸಿಕೊಂಡಿದ್ದಾರೆ. ಆಗಂತ ತುಂಬಾ ಸೀರಿಯಸ್ ವಿಚಾರವಲ್ಲ, ತಮಾಷೆಯ ವೀಡಿಯೋ ಮಾಡುವ ಸಂದರ್ಭದಲ್ಲಿ ತಂದೆ ಮತ್ತು ಮಗನ ನಡುವಿನ ಸಂಭಾಷಣೆಯ ಸಮಯದಲ್ಲಿ ಈ ಘಟನೆ ನಡೆದಿದೆ. ರೂಮಿನಿಂದ ಹೊರಗೆ ಬರುತ್ತಿರುವ ತಂದೆಯನ್ನ ನಿಲ್ಲಿಸಿ ವಾರೆಂಟ್ ಇದ್ಯಾ? ಡಾಕ್ಯೂಮೆಂಟ್ ಇದ್ಯಾ? ಎಂದು ಪ್ರಶ್ನಿಸಿದ ಧವನ್ ಕೆನ್ನೆಗೆ ಪಟ್ ಅಂತ ಭಾರಿಸಿ ಒಳಗಡೆ ಕಳುಹಿಸುವ ವಿಡಿಯೋವನ್ನು ಧವನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “ಬಾಪ್ ಹಮೇಶಾ ಬಾಪ್ ಹೀ ಹೋತಾ ಹೈ” ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.

ಈ ವೀಡಿಯೊ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಧವನ್ ನ್ಯಾಚುರಲ್ ಆಗಿ ಕಾಣಿಸಿಕೊಂಡಿರುವುದರಿಂದ ಈ ಸನ್ನಿವೇಶ ನಿಜವೆಂದು ಗಂಭೀರವೆಂದು ಪರಿಗಣಿಸಿದ್ದರು ವೀಕ್ಷಕರು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಗಬ್ಬರ್ ನಟನೆ ನೋಡಿದ ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಗಬ್ಬರ್ ನಟನೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ. ಧವನ್ ಪ್ರತಿಭೆ ನೋಡಿ ಬಾಲಿವುಡ್ ಹೀರೋ ಆಯುಷ್ಮಾನ್ ಖುರಾನಾ ಫಿದಾ ಆದರು. ಅದೇ ವೇಳೆ ಗಬ್ಬರ್ ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ಏಕದಿನ ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ್ದರು.

https://www.instagram.com/reel/CZJ6hevoRLb/?utm_source=ig_web_copy_link

Share