Connect with us


      




ರಾಜಕೀಯ

ಮೇಕೆದಾಟು; ಕಾರಜೋಳ ಟೀಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

Kumara Raitha

Published

on

ಬೆಂಗಳೂರು: ಜನೆವರಿ 06 (ಯು.ಎನ್.ಐ.) ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಸರ್ವಪ್ರಯತ್ನ ನಡೆಸಲಾಗಿದೆ. ಯಾವುದೇ ವಿಳಂಬ ಮಾಡಿಲ್ಲ. ಜಲ ಸಂಪನ್ಮೂಲ ಸಚಿವ ಇದನ್ನು ಅರಿತುಕೊಮಡು ಮಾತನಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಅವರಿಂದು ಸುದ್ದಿಗಾರರ ಜೊತೆ ಮಾತನಾಡಿದರು. ಸಚಿವ ಗೋವಿಂದ ಕಾರಜೋಳ ಹೇಳ್ತಾರೆ. ಸಿದ್ದರಾಮಯ್ಯ ಸರ್ಕಾರ ಏನೂ ಮಾಡಲಿಲ್ಲ. ಡಿಪಿಆರ್ ಮಾಡೋಕೆ ೫ ವರ್ಷ ತೆಗೆದುಕೊಂಡರು ಎಂದು. ಇವರು ಅಧಿಕಾರಕ್ಕೆ ಬಂದಿದ್ದು ಯಾವಾಗ. ೨೨ ಜುಲೈ ೨೦೧೯ ರಲ್ಲಿ ಇವರು ಅಧಿಕಾರಕ್ಕೆ ಬಂದ್ರು. ಇಲ್ಲಿಯವರೆಗೆ ಎರಡೂವರೆ ವರ್ಷವಾಗಿದೆ. ಕೇಂದ್ರ, ರಾಜ್ಯದಲ್ಲೂ ಇವರದ್ದೇ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರ ಇದ್ಯಲ್ಲಪ್ಪಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರ್ಕಾರ ಎರಡೂವರೆ ವರ್ಷದಲ್ಲಿ ಏನು‌ಮಾಡಿದ್ರು ಎಂದ ಸಿದ್ದರಾಮಯ್ಯ  ಕಾರಜೋಳ ಆರೋಪಕ್ಕೆ ಬಲವಾದ  ತಿರುಗೇಟು ನೀಡಿದರು. ಕಾರಜೋಳರಿಗೆ ಬುದ್ದಿ ಇಲ್ಲವೆಂದರೆ ಹೇಗೆ? ಕಾಂಗ್ರೆಸ್ ಸರ್ಕಾರ ಸುಮ್ಮನೆ ಕುಳಿತಿರಲಿಲ್ಲ. ನಿರಂತರವಾಗಿ ಪ್ರಕ್ರಿಯೆಗಳನ್ನು ಮಾಡಿದ್ದೇವೆ. ೪/೨/೧೬ ರಲ್ಲಿ ೫೯೧೨ ಕೋಟಿಗೆ ಡಿಪಿಆರ್ ಆಗಿದೆ ಸೆಂಟ್ರಲ್ ವಾಟರ್ ಕಮೀಷನ್ ಕೆಲವು ಪರಿಶೀಲನೆ ಕೇಳುತ್ತದೆ. ೧೮/೧/೨೦೧೮ ರಲ್ಲಿ ನಾವೇ ಡಿಪಿಆರ್ ಸಬ್ಮಿಟ್ ಮಾಡಿದ್ದೇವೆ. ೧೬/೨/೧೮ ರಂದು ಸುಪ್ರೀಂ ಫೈನಲ್   ತೀರ್ಪು ನೀಡುತ್ತದೆ. ೧೭೭.೨೫ ಟಿಎಂಸಿ ನೀರು ಬಿಡಲು ಆದೇಶಿಸಿತು. ಕೆಆರ್ ಎಸ್ ನಿಂದ ತಮಿಳುನಾಡಿಗೆ ಬಿಡಲು ತೀರ್ಪು ನೀಡಿತು. ಅಲ್ಲಿಯವರೆಗಿದ್ದ ವಿವಾದ ಮುಗಿಯಿತು ಎಂದು ವಿವರಿಸಿದರು.

ತಮಿಳುನಾಡಿಗೆ ೧೭೭ ಟಿಎಂಸಿ ನೀರು  ಬಿಡಲಾಗ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವೂ ರಚನೆಯಾಗಿದೆ. ಬಿಳಿಗುಂಡ್ಲು ಬಳಿ ಯೋಜನೆ ಪ್ರಾರಂಭಿಸಿದ್ರು. ನಾವು ಪಿಐಎಲ್ ಹಾಕಿದ್ದೆವು. ತಮಿಳುನಾಡಿನವರೂ ಪಿಐಎಲ್ ಹಾಕಿದ್ದರು. ಡಿಸೆಂಬರ್ ೨೦೧೬ ರಲ್ಲಿ ಸುಪ್ರೀಂ ನಿರ್ದೇಶನ ನೀಡ್ತು. ಸುಪ್ರೀಂನಲ್ಲಿ ಕೇಸ್ ವಿಚಾರಣೆ ನಡೆದಿತ್ತು. ೨೦೧೩ ರಲ್ಲಿ ನಾವು ಅಧಿಕಾರಕ್ಕೆ ಬಂದಿತ್ತು ಕೆಪಿಟಿಟಿ ಆ್ಯಕ್ಟ್ ನಲ್ಲಿ ಎಕ್ಸಂಶನ್ ತೆಗೆದುಕೊಳ್ಳಲು ಪ್ರಯತ್ನ ಮಾಡಿದೆವು. ಡಿಟೇಲ್ ಪ್ರಾಜೆಕ್ಟ್ ಗೆ ಅಪ್ರೂವಲ್ ಕಳಿಸಿದ್ದೆವು. ಯೋಜನೆ ಕೈಗೆತ್ತಿಕೊಳ್ಳಬಹುದೆಂದು ಕೋರ್ಟ್ ಹೇಳಿತ್ತು. ೨೦೧೪ ರಲ್ಲಿ ಟೆಂಡರ್ ಪ್ರಕ್ರಿಯೆ ಮಾಡಿದ್ದೇವೆ. ೨೦೧೪ ರ ನಂತರ ಯೋಜನೆ ನಾವು ಕೈಗೆತ್ತಿಕೊಂಡಿದ್ದೇವೆ. ಪ್ರಧಾನಿ ಮೋದಿಯವರಿಗೆ ಮನವಿ ಪತ್ರ ಕೊಟ್ಟಿದ್ದೇವೆ. ನಾನೇ ಮನವಿ ಪತ್ರವನ್ನ ಪ್ರಧಾನಿಗೆ ಕೊಟ್ಟಿದ್ದೇನೆ ೧೭/೮/೨೦೧೫ ರಲ್ಲಿ ಟೆಕ್ನಿಕಲ್ ಬ್ರಿಡ್ಜ್ ರೆಡಿಯಾಗಿದೆ. ನಂತರ ಗ್ಲೋಬಲ್ ಟೆಂಡರ್ ಕರೆಯಲಾಗಿತ್ತು. ಹೆಚ್ಚಿನ ಮೊತ್ತಕ್ಕೆ ಟೆಂಡರ್ ಕೋಟ್ ಮಾಡಿದ್ದರು. ಕರ್ನಾಟಕ ನೀರಾವರಿ ನಿಗಮ ರಿಜೆಕ್ಟ್ ಮಾಡಿದೆ. ಹೆಚ್ಚಿನ ‌ಮೊತ್ತ ಟೆಂಡರ್ ನಮೂದಿಸಿದ್ದಕ್ಕೆ ರದ್ಧಾಗಿದೆ. ೨೦೧೬ ಕ್ಕೆ ೪ಜಿ ಎಕ್ಸಾಂಪ್ಶನ್ ಸಿಕ್ಕಿದೆ ಎಂದು ವಿವರಣೆ ನೀಡಿದರು.

ಕಾಂಗ್ರೆಸ್ ಸರ್ಕಾರ ಸರ್ಕಾರ ಎಲ್ಲಿ ಸುಮ್ಮನೆ ಕುಳಿತಿತ್ತು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು ಗೋವಿಂದ ಕಾರಜೋಳ ಇದನ್ನು ಅರ್ಥ ಮಾಡಿಕೊಳ್ಬೇಕು. ಈಗ ಇವರು ಅಧಿಕಾರಕ್ಕೆ ಬಂದಿದ್ದಾರೆ. ಕೇಂದ್ರದಲ್ಲಿ, ರಾಜ್ಯದಲ್ಲಿ  ಅವರದ್ದೇ ಸರ್ಕಾರವಿದೆ. ತಮಿಳುನಾಡು ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದೆ. ತಮಿಳುನಾಡು ಅರ್ಜಿಗೆ ಸುಪ್ರೀಂ ಮಾನ್ಯತೆ ಕೊಟ್ಟಿಲ್ಲ. ಹಾಗಾಗಿ ಯೋಜನೆ ಜಾರಿಗೆ ಏಕೆ ಮೀನಾಮೇಷ ಎಣಿಸುತ್ತಿರುವುದು ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಎಲ್ಲೂ ವಿಳಂಬ ಧೋರಣೆ ಮಾಡಿಲ್ಲ. ಯೋಜನೆಗೆ ಎಲ್ಲ ರೀತಿಯ ಕ್ರಮವಹಿಸಿದ್ದೇವೆ. ಡಿಪಿಆರ್,ಶಿಫಾರಸು ಎಲ್ಲವೂ ಮಾಡಿದ್ದೆವು. ಭೂಸ್ವಾಧೀನಕ್ಕೂ ನಾವು ಭೂಮಿ ಗುರ್ತಿಸಿದ್ದೆವು. ಬೊಮ್ಮಾಯಿ,ಕಾರಜೋಳಗೆ ಮಾಡೋಕೆ ಏನು ಸಮಸ್ಯೆ ಜನರನ್ನ ತಪ್ಪುದಾರಿಗೆಳೆಯಲು ಕಾರಜೋಳ ಪ್ರಯತ್ನಿಸುತ್ತಿದ್ದಾರೆ.. ಅವರ ತಪ್ಪು ಮುಚ್ಚಿಕೊಳ್ಳೋಕೆ ಈ ರೀತಿ ಹೇಳಿದ್ದಾರೆ ಎಂದು ಕಾರಜೋಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿಯವರೆಗೆ ಬಿಜೆಪಿ ಸರ್ಕಾರ ಯಾವ ಸ್ಟೆಪ್ ತೆಗೆದುಕೊಂಡಿದೆ. ಇದು ಎರಡು ರಾಜ್ಯಗಳಿಗೆ ಅನ್ವಯವಾಗುವ ಪ್ರಾಜೆಕ್ಟ್. ಯೋಜನೆಗೆ ಸುಪ್ರೀಂ,ಅಥಾರಿಟಿಯಲ್ಲೂ ಸ್ಟೇ ಇಲ್ಲ. ಎನ್ ಜಿಟಿಯಲ್ಲೂ ಇದಕ್ಕೆ ಸ್ಟೇ ಇಲ್ಲ. ಯಡಿಯೂರಪ್ಪ ಸ್ಟಾಲಿನ್ ಗೆ ಪತ್ರ ಬರೆದಿದ್ದಾರೆ. ಇದನ್ನು ಬಿಟ್ಟರೆ ಯಾವುದೇ ಕ್ರಮಕೈಗೊಂಡಿಲ್ಲ. ಇವರಿಗೆ ಯಾವ ತಡೆಯಿದೆ ಯೋಜನೆ ಮಾಡೋಕೆ ಎಂದು ಪ್ರಶ್ನಿಸಿದರು.

ಫಾರೆಸ್ಟ್ ನಲ್ಲಿ ಕಾಮಗಾರಿ ನಡೆಯಬೇಕು. ಅದಕ್ಕೆ ಮಾತ್ರ ಕ್ಲಿಯರೆನ್ಸ್ ಬಾಕಿಯಿದೆ. ಅದನ್ನು ಹೊರತುಪಡಿಸಿ ಮಂಡ್ಯ ಜಿಲ್ಲೆಯಲ್ಲಿ  ಜಾಗ ಗುರ್ತಿಸಲಾಗಿದೆ. ಯಾಕೆ ಯೋಜನೆ ಮಾಡ್ತಿಲ್ಲ. ಸಿಡಬ್ಲ್ಯುಸಿ ಯಾರ ಅಧೀನದಲ್ಲಿದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾರಾ? ಅಲ್ಲಿ ಪ್ರಧಾನಿಯಾಗಿರೋದು ನರೇಂದ್ರ ಮೋದಿ. ಯೋಜನೆಗೆ ಮೋದಿ ಯಾಕೆ ಅವಕಾಶ ಕೊಡ್ತಿಲ್ಲ. ಅವರ ವ್ಯಾಪ್ತಿಗೆ ಇದು ಬರುತ್ತೆ ಕೊಡಬಹುದಲ್ಲ. ಅಣ್ಣಾ ಮಲೈ ಧರಣಿ ಕೂರೋದ್ಯಾಕೆ? ಎಂದು ಪ್ರಶ್ನೆಗಳ ಸುರಿಮಳೆಗರೆದರು.

ಸುಪ್ರೀಂ ಮುಂದೆ ಯಾವುದೇ ಸ್ಟೇ ಇಲ್ಲ. ನ್ಯಾಯಾಧೀಕರಣದ ಮುಂದೆ ಯಾವುದೇ ಸ್ಟೇ ಇಲ್ಲ. ಅಲ್ಲಿ ಕುಳಿತು ಕೆಲಸ ಮಾಡಿಸಿಕೊಳ್ತಿಲ್ಲ. ಇದು ನೀರಾವರಿ ಯೋಜನೆಯಲ್ಲ. ಇದು ಕುಡಿಯುವ ನೀರಿನ ಯೋಜನೆ. ಕುಡಿಯುವ ನೀರಿಗೆ ಎಲ್ಲೂ ತಡೆಮಾಡುವಂತಿಲ್ಲ ಇವರಿಗೇನು ಯೋಜನೆ ತರೋಕೆ ಕಷ್ಟ ಎಂದು ಕೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇತರ ಮುಖಂಡರು ಹಾಜರಿದ್ದರು

Share