Connect with us


      




ಕರ್ನಾಟಕ

ನಾಳೆಯಿಂದ ಮತ್ತೆ ಪಾದಯಾತ್ರೆಗೆ ಸಿದ್ದರಾಮಯ್ಯ

UNI Kannada

Published

on

SIDDARAMAIAH

ಬೆಂಗಳೂರು:ಜನೆವರಿ 10 (ಯು.ಎನ್.ಐ)ಸುಸ್ತು ಜ್ವರದಿಂದಾಗಿ ಮೇಕದಾಟು ಪಾದಯಾತ್ರೆಯ ಮೊದಲ ದಿನವೇ ಪಾದಯಾತ್ರೆಯಿಂದ ಅರ್ಧಕ್ಕೆ ಹೊರನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಾಳೆಯಿಂದ ಮತ್ತೆ ಪಾದಯಾತ್ರೆ ಮುಂದುವರೆಸಲಿದ್ದಾರೆ.

ಸುಸ್ತು, ಜ್ವರದಿಂದ ಬಳಲಿದ್ದ ಅವರು ಬೆಂಗಳೂರಿಗೆ ವಾಪಾಸಾಗಿ ಕುಟುಂಬದ ವೈದ್ಯರಿಂದ ಚಿಕಿತ್ಸೆ ಪಡೆದು,ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆದಿದ್ದರು. ವೈದ್ಯರ ಸಲಹೆ ಮೇರೆಗೆ ಸಿದ್ದರಾಮಯ್ಯ ಸೋಮವಾರ ಕೂಡಾ ತಮ್ಮ‌ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಮಂಗಳವಾರದಿಂದ ಮತ್ತೆ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯನವರು ಇವತ್ತು ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ.ಇವತ್ತು ಬರುತ್ತೇವೆ ಎಂದರು. ಆದರೆ ನಾನೇ ಬೇಡ ಎಂದಿದ್ದೇನೆ. ವಿಶ್ರಾಂತಿ ಪಡೆಯಿರಿ ಎಂದಿದ್ದೇನೆ. ಇವತ್ತು ಸಂಪೂರ್ಣ ವಿಶ್ರಾಂತಿ ಪಡೆದು ನಾಳೆ ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದರು.

 

Share