Connect with us


      




ವಿದೇಶ

ಬೂಸ್ಟರ್ ಡೋಸ್ ತೆಗೆದುಕೊಂಡವರಿಗೂ ಒಕ್ಕರಿಸಿದ ಒಮೈಕ್ರಾನ್!

Iranna Anchatageri

Published

on

ಸಿಂಗಾಪುರ, ಡಿಸೆಂಬರ್ 11 (ಯು.ಎನ್.ಐ) ಕೊರೊನಾ ವೈರಸ್‌ನ ಹೊಸ ರೂಪಾಂತರವಾದ ಒಮೈಕ್ರಾನ್‌ ಮೇಲೆ ಕೋವಿಡ್ ಲಸಿಕೆ ಪರಿಣಾಮಕಾರಿಯಾಗಬಹುದೇ ಎಂಬ ಸಂಶೋಧನೆ ನಡೆಯುತ್ತಿರಾವಾಗಲೇ ಸಿಂಗಾಪುರದಲ್ಲಿ  ಆಘಾತಕಾರಿ ವಿಚಾರವೊಂದು ಹೊರಬಿದ್ದಿದೆ.

ಸಿಂಗಾಪುರದಲ್ಲಿ ಇಬ್ಬರು ಕೋವಿಡ್ ಬೋಸ್ಟರ್ ಡೋಸನ್ನು ಪಡೆದುಕೊಂಡಿದ್ದರು. ಇದರ ಹೊರತಾಗಿಯೂ ಅವರು ಒಮೈಕ್ರಾನ್ ಸೋಂಕಿಗೆ ತುತ್ತಾಗಿರುವುದು ಪತ್ತೆಯಾಗಿದೆ. ಇದರೊಂದಿಗೆ ಕೋವಿಡ್ ವೈರಸ್ ನ್ನು ತಡೆಗಟ್ಟವಲ್ಲಿ ಬೂಸ್ಟರ್ ಡೋಸ್‌ಗಳ ಸಾಮರ್ಥ್ಯದ ಬಗ್ಗೆ ವಿಶ್ವದ ರಾಷ್ಟ್ರಗಳು ಈಗ ಪ್ರಶ್ನೆಗಳನ್ನು ಎತ್ತುತ್ತಿವೆ.

ಒಂದು ಪ್ರಕರಣ ಸ್ಥಳೀಯ ಹಾಗೂ ಇನ್ನೊಂದು ಜರ್ಮನಿಯಿಂದ ಪ್ರಯಾಣ

ಸಿಂಗಾಪುರದಲ್ಲಿ ಒಮೈಕ್ರಾನ್‌ನ ಮೊದಲ ಪ್ರಕರಣ ಕಂಡುಬಂದಿದ್ದು, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸೇವೆಯಲ್ಲಿ ತೊಡಗಿಕೊಂಡಿದ್ದ 24 ವರ್ಷ ಮಹಿಳೆಯಲ್ಲಿ. ಈ ಮಹಿಳೆಗೆ ಆರಂಭಿಕ ಪರೀಕ್ಷೆಯಲ್ಲಿ ಒಮೈಕ್ರಾನ್ ಪಾಸಿಟಿವ್ ಇರುವ ಬಗ್ಗೆ ಸಿಂಗಾಪುರ ಆರೋಗ್ಯ ಸಚಿವಾಲಯ ದೃಢಪಡಿಸಿತ್ತು. ಎರಡನೆಯ ಪ್ರಕರಣವೆಂದರೆ ಡಿಸೆಂಬರ್ 6 ರಂದು ಜರ್ಮನಿಯಿಂದ ಹಿಂದಿರುಗಿದ್ದ ವ್ಯಕ್ತಿಯಲ್ಲಿ ಒಮೈಕ್ರಾನ್ ಸಾಬೀತಾಯಿತು. ಅಲ್ಲದೆ ಇಬ್ಬರು ಬೂಸ್ಟರ್ ಡೋಸ್ ನ್ನು ಪಡೆದ ರೋಗಿಗಗಾಳಾಗಿರುವುದು ಸಿಂಗಾಪುರ ಸರ್ಕಾರದ ತಲೆನೋವಿಗೆ ಕಾರಣವಾಗಿದೆ.

ಸಿಂಗಾಪುರ ಸರ್ಕಾರದ ಪ್ರಕಾರ , ದೇಶದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಇಬ್ಬರೂ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಸಂಪರ್ಕ ಹೊಂದಿದವರನ್ನೆಲ್ಲಾ 10 ದಿನಗಳವರೆಗೆ ಕ್ವಾರಂಟೈನ್ ಮಾಡಲಾಗಿದೆ. ಒಮೈಕ್ರಾನ್ ವೈರಸ್ ಹರಡುವಿಕೆಯ ವೇಗವನ್ನು ಗಮನದಲ್ಲಿಟ್ಟುಕೊಂಡು, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದಲ್ಲಿ ಒಮೈಕ್ರಾನ್ ಕಂಡುಬರಬಹುದು ಸಾಧ್ಯತೆ ಇದೆ ಅಂತಾ ಅಲ್ಲಿನ ಸರ್ಕಾರ ಹೇಳಿಕೊಂಡಿದೆ.

ಈ ವಾರದ ಆರಂಭದಲ್ಲಿ ಫೈಜರ್ ಕಂಪನಿ, ಲಸಿಕೆಯ ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್‌ ಒಮಿಕ್ರಾನ್ ಗೆ ಪರಿಣಾಮಕಾರಿಯಾಗಬಹುದು ಅಂತಾ ಹೇಳಿಕೆ ನೀಡಿತ್ತು. ಸಿಂಗಾಪುರದಲ್ಲಿ ಬೂಸ್ಟರ್ ಡೋಸ್ ಪಡೆದುಕೊಂಡಿರುವವರಲ್ಲಿ ಒಮೈಕ್ರಾನ್ ಪತ್ತೆಯಾಗಿರುವುದು ಪ್ರಾಥಮಿಕ ಲ್ಯಾಬ್ ಫಲಿತಾಂಶದ ಮೇಲೆ ಹಲವು ಪ್ರಶ್ನೆಗಳು ಹುಟ್ಟುವಂತೆ ಮಾಡಿದೆ.

Share