Published
6 months agoon
By
Vanitha Jainನವದೆಹಲಿ: ಜನೆವರಿ 05 (ಯು.ಎನ್.ಐ.)ಸಂಗೀತ ಮಾಂತ್ರಿಕ, ಗಾಯಕ ಸೋನು ನಿಗಮ್, ಅವರ ಪತ್ನಿ ಮಧುರಿಮಾ ಮತ್ತು ಪುತ್ರನಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.
ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊ ಹಂಚಿಕೊಂಡಿರುವ ಗಾಯಕ ತಾನು ವೈರಸ್ಗೆ ತುತ್ತಾಗಿದ್ದೇನೆ ಮತ್ತು ಪ್ರಸ್ತುತ ದುಬೈನಲ್ಲಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ವೀಡಿಯೊದಲ್ಲಿ, ಗಾಯಕ ಭುವನೇಶ್ವರಕ್ಕೆ ಕಾರ್ಯಕ್ರಮದ ಶೂಟಿಂಗ್ಗಾಗಿ ಹೋಗಬೇಕಿತ್ತು. ಆದರೆ ಕ್ವಾರಂಟೈನ್ನಲ್ಲಿರುವ ಕಾರಣ ಹೋಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ನನಗೆ ಕೋವಿಡ್ ಆಗಿದೆ. ನನ್ನ ಕುಟುಂಬಕ್ಕೂ ವಿಸ್ತøತಗೊಂಡಿದೆ. 2022 ರ ಹೊಸ ವರ್ಷದ ಶುಭಾಶಯಗಳು ಎಂದು ಇನ್ಸ್ಟಾಗ್ರಾಮಿನಲ್ಲಿ ಬರೆದಿದ್ದು, “ನಾನು ದುಬೈನಲ್ಲಿದ್ದೇನೆ. ನಾನು ಭುವನೇಶ್ವರದಲ್ಲಿ ಪ್ರದರ್ಶನ ನೀಡಲು ಮತ್ತು ಸೂಪರ್ ಸಿಂಗರ್ ಸೀಸನ್ 3 ಗಾಗಿ ಭಾರತಕ್ಕೆ ಬರಬೇಕಾಗಿತ್ತು. ಆಗ ನಾನು ಕೊರೋನಾ ಪರೀಕ್ಷೆ ಒಳಪಟ್ಟೆ. ಆಗ ಪಾಸಿಟಿವ್ ಕಾಣಿಸಿಕೊಂಡಿದೆ. ನಾನು ಮರುಪರೀಕ್ಷೆ ಮಾಡಿದೆ. ಆಗಲೂ ಪಾಸಿಟಿವ್ ಬಂದಿದೆ. ಮತ್ತೊಮ್ಮೆ ಮರುಪರೀಕ್ಷೆ ಮಾಡಿದಾಗೂ ಪಾಸಿಟಿವ್ ಬಂದಿದೆ. ಜನರು ಕೊರೋನಾದೊಂದಿಗೆ ಬದುಕಬೇಕು ಎಂದು ನಾನು ಭಾವಿಸುತ್ತೇನೆ.
“ನನ್ನ ಗಂಟಲು ಸಹ ಚೆನ್ನಾಗಿದೆ. ಆದರೆ ನನ್ನಿಂದ ನಷ್ಟವನ್ನು ಎದುರಿಸಿದ ಜನರ ಬಗ್ಗೆ ನನಗೆ ಬೇಸರವಾಗಿದೆ. ಕೊರೋನಾ ತುಂಬಾ ವೇಗವಾಗಿ ಹರಡುತ್ತಿದೆ. ಕೆಲಸವು ಈಗಷ್ಟೇ ಪ್ರಾರಂಭವಾಗಿರುವುದರಿಂದ ನಮ್ಮ ಬಗ್ಗೆ ನನಗೆ ಬೇಸರವಾಗಿದೆ. ಥಿಯೇಟರ್ಗಳಿಗೆ ಸಂಬಂಧಿಸಿದ ಜನರು ಮತ್ತು ಚಲನಚಿತ್ರ ನಿರ್ಮಾಪಕರಿಗೂ ಸಹ ನಾನು ವಿಷಾದಿಸುತ್ತೇನೆ. ಏಕೆಂದರೆ ಕಳೆದ ಎರಡು ವರ್ಷಗಳಿಂದ ಕೆಲಸವು ಪರಿಣಾಮ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂದೇಸೆ ಆತೇ ಹೈ, ತುಮ್ಸೆ ಮಿಲ್ಕೆ ದಿಲ್ಕಾ, ಸೂರಜ್ ಹುವಾ ಮದ್ದಂ, ದೋ ಪಾಲ್, ಮೈ ಅಗರ್ ಕಹೂನ್, ಜಾನೇ ನಹೀ ದೇಂಗೆ ತುಜೆ ಮುಂತಾದ ಹಿಟ್ ಹಾಡುಗಳನ್ನು ಹಾಡಿದ ಕೀರ್ತಿ ಸೋನು ನಿಗಮ್ ಅವರಿಗೆ ಸಲ್ಲುತ್ತದೆ.