Published
6 months agoon
ಕ್ರೈಸ್ಟ್ ಚರ್ಚ್ : ಜನೆವರಿ 09 (ಯು.ಎನ್.ಐ.) ಕ್ರಿಕೆಟ್ ಜಗತ್ತಿನಲ್ಲಿ ಒಂದಿಲ್ಲೊಂದು ವಿಚಿತ್ರ ಘಟನೆ ನೋಡಿರಬಹುದು.. ಇಲ್ಲವೇ ಕೇಳಿರಬಹುದು. ಆದ್ರೆ ನೋ ಬಾಲ್ ಮತ್ತು ವೈಡ್ ಬಾಲ್ ಇಲ್ಲದೆ ಒಂದೇ ಬಾಲ್ ನಲ್ಲಿ 7 ರನ್ ಗಳಿಸಿದ್ದನ್ನು ನೋಡಿದ್ದೀರಾ? ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂತಹ ಅಚ್ಚರಿಯ ಘಟನೆ ಸಂಭವಿಸಿದೆ. ಬಾಂಗ್ಲಾದೇಶ ತಂಡವು ಒಂದೇ ಬಾಲ್ನಲ್ಲಿ 7 ರನ್ ಗಳನ್ನು ನ್ಯೂಜಿಲೆಂಡ್ ತಂಡಕ್ಕೆ ನೀಡಿದೆ.
ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ಮಧ್ಯೆ ಎರಡನೇ ಟೆಸ್ಟ್ ಪಂದ್ಯ ಇಂದು ಕ್ರೈಸ್ಟ್ ಚರ್ಚ್ ನಲ್ಲಿ ಆರಂಭವಾಗಿದೆ. ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಲು ಕ್ರೀಜ್ ಗೆ ಇಳಿದ ನ್ಯೂಜಿಲೆಂಡ್ 26ನೇ ಓವರ್ನಲ್ಲಿ ಒಂದು ಎಸೆತದಲ್ಲಿ 7 ರನ್ ಗಳಿಸಿದೆ. 26ನೇ ಓವರ್ ಅನ್ನು ವೇಗದ ಬೌಲರ್ ಇಬಾದತ್ ಹುಸೇನ್ ಮಾಡುತ್ತಿದ್ದರು. ಇವರ ಓವರ್ನ ಕೊನೆಯ ಎಸೆತದಲ್ಲಿ ವಿಲ್ ಯಂಗ್ ಶಾಟ್ ಆಗಿ ಪರಿವರ್ತಿಸಿದರು. ಚೆಂಡು ಎರಡನೇ ಸ್ಲಿಪ್ ನಲ್ಲಿ ಕ್ಯಾಚ್ ಇದ್ದಾಗ ಫೀಲ್ಡರ್ ಕೈಚೆಲ್ಲಿದರು.
ಈ ವೇಳೆ, ಚೆಂಡು ಥರ್ಡ್ ಮ್ಯಾನ್ ನತ್ತ ವೇಗವಾಗಿ ಚಲಿಸಲು ಆರಂಭಿಸಿತು. ಅಷ್ಟರಲ್ಲಿ ವಿಲ್ ಯಂಗ್ ಮತ್ತು ಟಾಮ್ ಲ್ಯಾಥಮ್ ಮೂರು ರನ್ ಪೂರ್ಣಗೊಳಿಸಿದರು. ಚೆಂಡು ಬೌಂಡರಿ ಗೆರೆ ಮುಟ್ಟುವ ಮುನ್ನ ತಸ್ಕಿನ್ ಅಹ್ಮದ್ ಬೌಂಡರಿಗೆ ಅವಕಾಶ ನೀಡದೆ ಚೆಂಡನ್ನು ವಿಕೆಟ್ ಕೀಪರ್ ಗೆ ಎಸೆದರು. ವಿಕೆಟ್ ಕೀಪರ್ ನೂರುಲ್ ಹಸನ್ ಚೆಂಡನ್ನು ವಿಕೆಟ್ ಗೆ ಥ್ರೋ ಮಾಡಲು ಹೋಗಿ ಇನ್ನೊಂದು ತುದಿಗೆ ಎಸೆದರು. ಆದರೆ ಚೆಂಡು ಬೌಲರ್ ಮತ್ತು ಫೀಲ್ಡರ್ ನಿಂದ ತಪ್ಪಿಸಿಕೊಂಡು ಬೌಂಡರಿ ಗೆರೆಗೆ ನುಗ್ಗಿತು. ಇದರೊಂದಿಗೆ ಒಂದೇ ಎಸೆತದಲ್ಲಿ ವಿಲ್ ಯಂಗ್ ಕ್ಯಾಚ್ ಕೈ ತಪ್ಪಿದರೆ, ಓವರ್ ಥ್ರೋ ಕಾರಣದಿಂದಾಗಿ 4 ರನ್ ಕೂಡ ಗಿಫ್ಟ್ ಆಗಿ ಬಂದಿತು. ಹೀಗಾಗಿ ಒಟ್ಟಾರೆ, ನ್ಯೂಜಿಲೆಂಡ್ ಬ್ಯಾಟ್ಸಮನ್ ಗಳು 7 ರನ್ ಗಳನ್ನು ಉಚಿತವಾಗಿ ಕಲೆ ಹಾಕಿದರು. ಈ ರೀತಿಯಾಗಿ ರನ್ ಗಳಿಸಿದ್ದು ಟೆಸ್ಟ್ ಕ್ರಿಕೆಟ್ ನಲ್ಲಿ ಅಪರೂಪವಾಗಿದೆ.
Meanwhile, across the Tasman Sea… ⛴️
Chaos in the field for Bangladesh as Will Young scores a seven (yes, you read that correctly!) 😅#NZvBAN | BT Sport 3 HD pic.twitter.com/fvrD1xmNDd
— Cricket on BT Sport (@btsportcricket) January 9, 2022
ಅಮೋಘ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಕ್ಯಾಪ್ಟನ್
ಮೊದಲ ದಿನದ ಆಟದಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಟೆಸ್ಟ್ ಮಾದರಿಯಲ್ಲಿ ತಮ್ಮ 12ನೇ ಶತಕ ಪೂರ್ಣಗೊಳಿಸಿದರು. 29 ಇನ್ನಿಂಗ್ಸ್ ಬಳಿಕ ಟೆಸ್ಟ್ನಲ್ಲಿ ಲ್ಯಾಥಮ್ ಶತಕ ಗಳಿಸಿದರು. ಮೊದಲ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 1 ವಿಕೆಟ್ ನಷ್ಟಕ್ಕೆ 349 ರನ್ ಕಲೆ ಹಾಕಿದೆ. ಲಾಥಮ್ ಅಜೇಯ 186 ಮತ್ತು ಡೆವೊನ್ ಕಾನ್ವೇ 99 ರನ್ ಗಳಿಸಿದ್ದಾರೆ. ಇವರಿಬ್ಬರ ನಡುವೆ ಎರಡನೇ ವಿಕೆಟ್ಗೆ 201 ರನ್ಗಳ ಜೊತೆಯಾಟ ಪೇರಿಸಿದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಕಿವೀಸ್ 8 ವಿಕೆಟ್ಗಳ ಅಂತರದಿಂದ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಸೋಲಿನ ನಂತರ ನ್ಯೂಜಿಲೆಂಡ್ ಗೆ 2ನೇ ಟೆಸ್ಟ್ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈ ಪಂದ್ಯವನ್ನು ಕಿವೀಸ್ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ಬಾಂಗ್ಲಾದೇಶ ಟೆಸ್ಟ್ ಸರಣಿ ಕೈ ವಶ ಮಾಡಿಕೊಳ್ಳಲಿದೆ.
ಚೊಚ್ಚಲ ರಣಜಿ ಟ್ರೋಫಿ ಮುಡಿಗೇರಿಸಿಕೊಂಡ ಮಧ್ಯಪ್ರದೇಶ; ಆರ್ ಸಿಬಿ .. ಆರ್ ಸಿಬಿ ಎಂಬ ಕೂಗು
ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಕೋವಿಡ್ ಸೋಂಕು!
ಕ್ರಿಕೆಟ್: ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಪಂದ್ಯಗಳು ಸೋನಿಯಲ್ಲಿ ಪ್ರಸಾರ
ಕ್ರಿಕೆಟಿಗ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದರ್ಪಣೆ ಮಾಡಿ 15 ವರ್ಷ! ಖುಷಿಯಲ್ಲಿ ಆರ್ ಎಸ್
ವಿಶ್ವ ಈಜು ಚಾಂಪಿಯನ್ಶಿಪ್: ಕೈ ಮುರಿದುಕೊಂಡ ಆಸ್ಟ್ರೇಲಿಯಾದ ಈಜುಗಾರ್ತಿ!
ತಂಡಕ್ಕೆ ಆಯ್ಕೆಯಾಗಲಿಲ್ಲವೆಂದು ಪಾಕ್ ಕ್ರಿಕೆಟಿಗ ಆತ್ಮಹತ್ಯೆ ಯತ್ನ