Connect with us


      




ದೇಶ

ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಬಿಡುಗಡೆ

Vanitha Jain

Published

on

ನವದೆಹಲಿ, ಡಿಸೆಂಬರ್ 8, (ಯು.ಎನ್.ಐ): ಕೋರೆಗಾಂವ್-ಭೀಮಾ ಪ್ರಕರಣ ಸಂಬಂಧ ಕಳೆದ ಮೂರು ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ವಕೀಲೆ, ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರನ್ನು ಬುಧವಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.

ಈ ಪ್ರಕರಣ ಹಿನ್ನೆಲೆ ಬಾಂಬೆ ಹೈಕೋರ್ಟ್‍ನಿಂದ ಡೀಫಾಲ್ಟ್ ಜಾಮೀನು ಪಡೆದಿರುವ ವಕೀಲೆ-ಕಾರ್ಯಕರ್ತ ಸುಧಾ ಭಾರದ್ವಾಜ್ ಅವರು 50,000 ರೂ.ಗಳ ಶ್ಯೂರಿಟಿಯನ್ನು ಒದಗಿಸುವ ಮೂಲಕ ಜೈಲಿನಿಂದ ಬಿಡುಗಡೆ ಮಾಡಬಹುದು ಎಂದು ವಿಶೇಷ ಎನ್‍ಐಎ ನ್ಯಾಯಾಲಯ ಬುಧವಾರ ಹೇಳಿದೆ.

ಬಾಂಬೆ ಹೈಕೋರ್ಟ್ ನಿರ್ಧಾರದ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂಕೊರ್ಟ್ ಹೇಳಿದ ಒಂದು ದಿನದಲ್ಲಿ ಈ ಬೆಳವಣಿಗೆ ನಡೆದಿದೆ.

ಬುಧವಾರ ಅಥವಾ ಗುರುವಾರ ಜೈಲಿನಿಂದ ಬಿಡುಗಡೆಗೊಳಿಸಲು ನಗದು ಶ್ಯೂರಿಟಿಯನ್ನು ಸಲ್ಲಿಸಲು ನ್ಯಾಯಾಲಯ ಸುಧಾ ಭಾರದ್ವಾಜ್ ಅವರಿಗೆ ಅವಕಾಶ ಮಾಡಿಕೊಟ್ಟಿತು. ಸುಧಾ ಅವರನ್ನು ಬಿಡುಗಡೆ ಮಾಡಲು ಒಪ್ಪಿರುವ ಎನ್‍ಐಎ ಕೆಲವು ಷರತ್ತುಗಳನ್ನು ವಿಧಿಸಿದೆ. ಸುಧಾ ಅವರು ನ್ಯಾಯಾಲಯದ ವ್ಯಾಪ್ತಿಯಲ್ಲಿ ನೆಲೆಸಬೇಕು ಮತ್ತು ಯಾವುದೇ ಅನುಮತಿಯಿಲ್ಲದೆ ಮುಂಬೈಯಿಂದ ಹೊರ ಪ್ರದೇಶಗಳಿಗೆ ತೆರಲುವಮತಿಲ್ಲ ಎಂದು ಸೂಚಿಸಿದೆ.

Share