Published
6 days agoon
By
Vanitha Jainಮುಂಬೈ: ಮೇ 14 (ಯು.ಎನ್.ಐ.) ನಟ ಸೋಹೈಲ್ ಖಾನ್ ಮತ್ತು ಫ್ಯಾಷನ್ ಡಿಸೈನರ್ ಪತ್ನಿ ಸೀಮಾ ಖಾನ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೂಲಕ 24 ವರ್ಷಗಳ ಮದುವೆಯ ಜೀವನಕ್ಕೆ ಇತಿಶ್ರೀ ಹಾಡುತ್ತಿದ್ದಾರೆ.
ನಿರ್ವಾನ್ ಮತ್ತು ಯೋಹಾನ್ ಎಂಬ ಇಬ್ಬರು ಗಂಡು ಮಕ್ಕಳನ್ನು ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಸೊಹೈಲ್ ಮತ್ತು ಸೀಮಾ ಅವರು ಶುಕ್ರವಾರ ಮುಂಬೈನ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು.
“ಸೊಹೈಲ್ ಖಾನ್ ಮತ್ತು ಸೀಮಾ ಸಚ್ದೇವ್ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರೂ ಪರಸ್ಪರ ಸ್ನೇಹದಿಂದ ಇದ್ದರು. ತಮ್ಮ ವಿಚ್ಛೇದನ ಅರ್ಜಿಯ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವರು ನ್ಯಾಯಾಧೀಶ ಮಕ್ದೂಮ್ ಅವರ ಮುಂದೆ ಹಾಜರಾದರು ಎಂದು ಮೂಲವೊಂದು ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಸೀಮಾ, ವಯಸ್ಸಾಗುತ್ತಿದ್ದಂತೆ ಸಂಬಂಧಗಳು ಬೇರೆ ಬೇರೆ ದಿಕ್ಕುಗಳನ್ನು ಪಡೆದುಕೊಳ್ಲುತ್ತವೆ. ನಾನು ಅದರ ಬಗ್ಗೆ ಕ್ಷಮೆಯಾಚಿಸುವುದಿಲ್ಲ. ಏಕೆಂದರೆ ನಾವು ಸಂತೋಷವಾಗಿದ್ದೇವೆ. ನನ್ನ ಮಕ್ಕಳು ಸಂತೋಷವಾಗಿದ್ದಾರೆ. ಸೋಹೈಲ್ ಮತ್ತು ನಾನು ಸಾಂಪ್ರದಾಯಿಕ ವಿವಾಹವಾಗಿಲ್ಲ, ಆದರೆ ನಾವು ಒಂದು ಕುಟುಂಬ. ನಾವು ಒಂದೇ. ನಮಗೆ, ಕೊನೆಯಲ್ಲಿ ಮುಖ್ಯವಾಗುವುದು ಅವನು, ನಾನು ಮತ್ತು ನಮ್ಮ ಮಕ್ಕಳು ಎಂದು ಹೇಳಿದ್ದಾರೆ.
ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ೨೦೧೭ರಲ್ಲಿ ವಿಚ್ಛೇದನ ಪಡೆದುಕೊಳ್ಳುವ ಮೂಲಕ ೧೮ ವರ್ಷದ ವಿವಾಹ ಜೀವನವನ್ನು ಕೊನೆಗಾಣಿಸಿದ್ದಾರೆ.
ಗಂಡು ಮಗುವಿನ ತಾಯಾದ ಸಂಜನಾ ಗಲ್ರಾನಿ
ರಿಮೇಕ್ ಆಗುತ್ತಿದೆ ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್ ಅಭಿನಯದ ‘ಆನಂದ್’ ಚಿತ್ರ!
ಮಗಳಿಗೆ ಅದ್ಬುತ ಶುಭಾಶಯ ಕೋರಿದ ಪ್ರಿಯಾ ಕಿಚ್ಚ ಸುದೀಪ್
ಮಂದಣ್ಣ ಕುಟುಂಬ ಪರಿಚಯಿಸಿದ ನಟಿ ರಶ್ಮಿಕಾ ಮಂದಣ್ಣ; ಫೋಟೋ ವೈರಲ್
ತೆಲುಗು ನಟ ಆದಿ ಪಿನಿಶೆಟ್ಟಿ ಜೊತೆ ಸಪ್ತಪದಿ ತುಳಿದ ನಟಿ ನಿಕ್ಕಿ ಗಲ್ರಾನಿ
ಪುರುಷರಿಗಿಲ್ಲದ ಸೌಂದರ್ಯ ಮಾನದಂಡ ಮಹಿಳೆಯರಿಗೇಕೆ ? ರಮ್ಯ ಪ್ರಶ್ನೆ