Connect with us


      




ಕರ್ನಾಟಕ

ವಸತಿ ಮನೆ ಜಟಾಪಟಿ – ವಾಸ್ತವ ಅಂಶಗಳನ್ನು ಬಿಚ್ಚಿಟ್ಟ ವಿ.ಸೋಮಣ್ಣ

Iranna Anchatageri

Published

on

2019ರಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಒಂದು ಪೈಸೆ ನೀಡಿಲ್ಲ. ಎಲ್ಲಾದ್ರೂ ಒಂದು ಮನೆಯನ್ನು ಕೊಟ್ಟಿದ್ದೀರಾ ಎಂದು ವಸತಿ ಸಚಿವ ವಿ.ಸೋಮಣ್ಣ ಅವರನ್ನು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್, 15 ಲಕ್ಷ ಮನೆಗಳನ್ನು ಕಟ್ಟಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ವಿ.ಸೋಮಣ್ಣ, ಸಿದ್ದರಾಮಯ್ಯ ಅವರ ಗರಡಿಯಲ್ಲಿ ಬೆಳೆದಿದ್ದೇನೆ. ಸಿದ್ದರಾಮಯ್ಯ ಅವರ ಕ್ಷೇತ್ರಕ್ಕೆ ಎಷ್ಟು ಕೊಟ್ಟಿದ್ದೇವೆ ಎಂದು ನಾಳೆ ತಿಳಿಸುತ್ತೇನೆ. 2013ರಲ್ಲಿ ಬಿಜೆಪಿ ಸರ್ಕಾರ, ಕಾಂಗ್ರೆಸ್ ಗೆ 6 ಲಕ್ಷ ಮನೆಗಳಿಗೆ ಬಿಟ್ಟು ಹೋಗಿದ್ದೆವು. 3 ಸಾವಿರದ 315 ಕೋಟಿ ಇದಕ್ಕೆ ಹಣ ನಿಗದಿಪಡಿಸಲಾಗಿತ್ತು. ಕಾಂಗ್ರಸ್ ಸರ್ಕಾರ 5 ವರ್ಷದಲ್ಲಿ ನೀಡಿದ ಗುರಿ 18 ಲಕ್ಷ 56 ಸಾವಿರ ಮನೆಗಳು. ಇದಕ್ಕೆ 29,395 ಕೋಟಿ ಬೇಕಾಗಿತ್ತು. ಇದು ಐದು ವರ್ಷದಲ್ಲಿ ಇವರು ಖರ್ಚು ಮಾಡಿದ್ದು 10 ಸಾವಿರ 91 ಕೋಟಿ. ಇದರಿಂದ ಸಿದ್ದರಾಮಯ್ಯ ಸರ್ಕಾರವಧಿಯಲ್ಲಿ ಮನೆಗಳಾಗಿದ್ದು 9 ಲಕ್ಷ 76 ಸಾವಿರ ಮನೆಗಳು, ಇದರಲ್ಲಿ 6 ಲಕ್ಷ ಮನೆಗಳು 3,315 ಕೋಟಿ ಬಿಜೆಪಿ ಸರ್ಕಾರ ಬಿಟ್ಟು ಹೋಗಿತ್ತು. ಇನ್ನು 18 ಲಕ್ಷ ಮನೆಗಳಿಗೆ 22 ಸಾವಿರದ 619 ಕೋಟಿ ಮುಂದಿನ ಸರ್ಕಾರಕ್ಕೆ ಹೆಚ್ಚಿಗೆ ಸೇರ್ಪಡೆಯಾದವು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 4,467 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. 2 ಲಕ್ಷದ 70 ಸಾವಿರ ಮನೆಗಳನ್ನು ಕೊಟ್ಟಿದ್ದೇವೆ. ಇದಲ್ಲದೆ, ಪ್ರಸ್ತುತ ಇವತ್ತು ಪ್ರತಿಯೊಬ್ಬ ಶಾಸಕರಿಗೂ ಕೂಡ ಯಾವ್ಯಾವ ಪಂಚಾಯಿತಿಯಲ್ಲಿ ಎಷ್ಟೆಷ್ಟು ಕಟ್ಟಲಾಗುತ್ತಿದೆ ಎಂಬ ಬಗ್ಗೆ ಪುಸ್ತಕ ಕೊಟ್ಟಿದ್ದೇವೆ. ನೆರೆ ಹಾವಳಿಯಿಂದ 1 ಲಕ್ಷ 74 ಸಾವಿರ ಮನೆಗಳಿಗೆ ಜಿಪಿಎಸ್ ಮಾಡಿದ್ದೇವೆ. 2,208 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. ಅದಲ್ಲದೆ, ಸಿದ್ದರಾಮಯ್ಯ ಕಾಲದಲ್ಲಿ ಬದಾಮಿ ಕ್ಷೇತ್ರಕ್ಕೆ 6 ಕೋಟಿ 8 ಲಕ್ಷ ಕೊಟ್ಟಿದ್ದರು. ಆದರೆ ಬಿಜೆಪಿ ಅವಧಿಯಲ್ಲಿ 60 ಕೋಟಿ ರೂಪಾಯಿ ಕೊಟ್ಟಿದ್ದೇವೆ. ಈ ಬಗ್ಗೆ ನಾಳೆ ಸಭೆಗೆ ತಿಳಿಸಲಿದ್ದೇನೆ ಎಂದು ಸೋಮಣ್ಣ ತಿಳಿಸಿದರು.

ಹಳೆ ಕಟ್ಟಡ ಬದಲಾಗಿ ಹೊಸ ಮನೆಗಳನ್ನು ಕೊಡಬೇಕೆಂದು ಬೊಮ್ಮಾಯಿ ಸಿಎಂ ಆದ್ಮೇಲೆ ಬಸವ ವಸತಿಯಲ್ಲಿ ಮೂರೂವರೆ ಲಕ್ಷ, ಅಂಬೇಡ್ಕರ್ ಯೋಜನೆಯಡಿ 1 ಲಕ್ಷ ಹಾಗೂ ದೇವರಾಜ್ ಯೋಜನೆಯಡಿ 50 ಸಾವಿರ 5 ಲಕ್ಷ ಮನೆಗಳನ್ನು ಪ್ರತಿಯೊಂದು ಪಂಚಾಯಿತಿಗೆ ಕೊಡಲು ನಿರ್ಧರಿಸಲಾಗಿದೆ. ಇದೇ 16ರಂದು ನೀತಿ ಸಂಹಿತೆ ಮುಗಿಯಲಿದೆ. ಆ ಬಳಿಕ ಮನೆಗಳ ಹಂಚಿಕೆ ನಡೆಯಲಿದೆ ಎಂದು ಸೋಮಣ್ಣ ತಿಳಿಸಿದರು.

ಹಳೆ ಮೆನಗಳಿಗೆ ಕೊಡಬೇಡ ಅಂತಾ ತೀರ್ಮಾನ ಮಾಡಿದ್ರೆ ಬಿಟ್ಟುಬಿಡೋಣ. ಹಳೆಯ 18 ಲಕ್ಷ ಮನೆಗಳಿಗೆ ಮಂಜೂರಾತಿ ನೀಡಿ ಚುನಾವಣೆಗೆ ಹೋಗಿ ಕಾರ್ಯಾದೇಶ ಪತ್ರ ಕೊಟ್ಟು 29 ಸಾವಿರ ಕೋಟಿ ರೂಪಾಯಿ ಬದಲಾಗಿ 2 ಸಾವಿರ ಕೋಟಿ ಬಜೆಟ್ ನಲ್ಲಿ ಇಟ್ಟಿದ್ದೀರಿ ಎಂದು ಕಾಂಗ್ರೆಸ್ ನಾಯಕರನ್ನು ಸೋಮಣ್ಣ ನೇರವಾಗಿ ಪ್ರಶ್ನೆ ಮಾಡಿದರು. ಕೇವಲ 2 ಸಾವಿರ ಕೋಟಿ ರೂಪಾಯಿ ಬಜೆಟ್ ನಲ್ಲಿ ನಾವು ಹೇಗೆ ಮನೆ ನಿರ್ಮಿಸಲು ಸಾಧ್ಯ ಎಂದ ಸೋಮಣ್ಣ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ 10 ಲಕ್ಷ ಮನೆಗಳ ಪೈಕಿ 3 ಲಕ್ಷ ಮನೆ ನಿರ್ಮಾಣ ಮಾಡಿದ್ದೇವೆ. ಒಂದೂವರೆಯಿಂದ 2 ತಿಂಗಳಲ್ಲಿ ಎಲ್ಲ ಹಳೆಯ ಮನೆಗಳನ್ನು ಪೂರ್ಣಗೊಳಿಸಲಿದ್ದೇವೆ. 5 ಲಕ್ಷ ಮನೆಗಳಿಗೆ ಮೂರೇ ಕಂತು ಇದ್ದು ವಿಶೇಷ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಪ್ರತಿಯೊಂದು ಶಾಸಕರ ಕ್ಷೇತ್ರಕ್ಕೂ 2 ಸಾವಿರ 3 ಸಾವಿರ, 4 ಸಾವಿರ ಮನೆ ಕೊಟ್ಟು ಕೇವಲ 12 ತಿಂಗಳಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನ ಮನೆಗಳನ್ನು ನಿರ್ಮಿಸಿ ಕೊಡುತ್ತೇವೆ ಎಂದು ವಾಸ್ತವ ಅಂಶಗಳನ್ನು ವಿ.ಸೋಮಣ್ಣ ಸದನದ ಮುಂದೆ ಬಿಚ್ಚಿಟ್ಟರು.

Share