Connect with us


      
ದೇಶ

“ಯೋಗಯುಕ್ತ-ರೋಗಮುಕ್ತ” ಸಮಾಜಕ್ಕಾಗಿ ಮನೆ ಮನೆಯಲ್ಲಿ ಸೂರ್ಯನಮಸ್ಕಾರ ಕಾರ್ಯಕ್ರಮ: ವಚನಾನಂದ ಶ್ರೀ ಕರೆ

Kumara Raitha

Published

on

  • ಆಯುಷ್‌ ಮಂತ್ರಾಲಯದ ವೆಬಿನಾರ್‌ ನಲ್ಲಿ ಭಾಗಿ75 ಲಕ್ಷ ಯೋಗ ಸಾಧಕರು

  • 13 ಸುತ್ತು ಸೂರ್ಯ ನಮಸ್ಕಾರ ಮಾಡಲು ಪ್ರಧಾನಿ ಕರೆ

  • ಕೇಂದ್ರ ಆಯುಷ್‌ ಮಂತ್ರಾಯಲದ ಸಚಿವ  ಸರ್ಬಾನಂದ ಸೋನಾವಾಲ್ ಅವರೊಂದಿಗೆ ಚರ್ಚೆ

ಬೆಂಗಳೂರು: ಜನವರಿ 11 (ಯು.ಎನ್.ಐ.) ಜಾಗತಿಕ ತಾಪಮಾನ ನಿಯಂತ್ರಣಕ್ಕಾಗಿ ಪ್ರಾರ್ಥನೆ, ಕೋವಿಡ್‌ ಮೂರನೇ ಅಲೆಯ ಜಾಗೃತಿಗಾಗಿ ಹಾಗೂ “ಯೋಗಯುಕ್ತ-ರೋಗಮುಕ್ತ” ಸಮಾಜಕ್ಕಾಗಿ ಮನೆ ಮನೆಯಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಕೈಗೊಳ್ಳಬೇಕು. ಅಜಾದಿ ಕಾ ಅಮೃತಮ ಹೋತ್ಸವದ ಪ್ರಯಕ್ತ ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ಮಕರ ಸಂಕ್ರಾಂತಿಯಂದು ತಾವಿರುವ ಸ್ಥಳದಿಂದಲೇ ಸೂರ್ಯ ನಮಸ್ಕಾರ ಕೈಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧಿಪತಿ ಜಗದ್ಗುರು ವಚನಾನಂದ ಸ್ವಾಮೀಜಿ ಕರೆ ನೀಡಿದ್ದಾರೆ.

ಇಂದು ಭಾರತ ಸರಕಾರ, ಆಯುಷ್‌ ಮಂತ್ರಾಲಯ ಮತ್ತು ಮೊರಾರ್ಜಿ ದೇಸಾಯಿ ಯೋಗಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಮಕರ ಸಂಕ್ರಾಂತಿಯ ಸಾಮೂಹಿಕ ಸೂರ್ಯ ನಮಸ್ಕಾರದ ಪೂರ್ವಸಿದ್ದತೆಯ ವೆಬಿನಾರ್‌ ನಲ್ಲಿ ಪಾಲ್ಗೊಂಡು ತಮ್ಮ ಸಲಹೆಗಳನ್ನು ನೀಡಿದರು. ವೆಬಿನಾರ್‌ ನಲ್ಲಿ ಕೇಂದ್ರ ಆಯುಷ್‌ ಮಂತ್ರಾಯಲದ ಸಚಿವರಾದ ಶ್ರೀ ಸರ್ಬಾನಂದ ಸೋನಾವಾಲ್ ಅವರು ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳೊಂದಿಗೆ ಚರ್ಚಿಸಿದರು. ಈ ವೆಬಿನಾರ್‌ ನಲ್ಲಿ ಡಾ.ಎಚ್ ಆರ್ ನಾಗೇಂದ್ರ ಗುರೂಜೀ, ಡಾ.ಈಶ್ವರ ಬಸವರೆಡ್ಡಿ ಸೇರಿದಂತೆ ಪ್ರಮುಖ ಯೋಗ ಕೇಂದ್ರಗಳ ಮುಖ್ಯಸ್ಥರುಗಳು ಪಾಲ್ಗೊಂಡಿದ್ದರು.

ವೆಬಿನಾರ್‌ ನಂತರ ಸ್ವಾಮೀಜಿಗಳು ಮಾತನಾಡಿ, ಮಕರ ಸಂಕ್ರಾಂತಿಗೂ ಸೂರ್ಯ ನಮಸ್ಕಾರಕ್ಕೂ ಅವಿನಾಭಾವ ಸಂಬಂಧವಿದೆ. ಪ್ರತಿ ಸೌರಮಾನ ಮಾಸದಲ್ಲಿ ಸಂಕ್ರಾಂತಿ ಬಂದರೂ ಸೂರ್ಯ ಭಗವಂತ ದಕ್ಷಿಣಾಯಣ ಪಥದಿಂದ ಉತ್ತರಾಯಣ ಪಥಕ್ಕೆ ಸಂಚರಿಸುವ ಕಾರಣ ಮಕರ ಸಂಕ್ರಾಂತಿಗೆ ಅತ್ಯಂತ ಹೆಚ್ಚಿನ ಪ್ರಾಶಸ್ತ್ಯವಿದೆ. ಅಜಾಧಿ ಕಾ ಅಮೃತಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಪೇಕ್ಷೇಯಂತೆ ದೇಶಾದ್ಯಂತ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ರಾಜ್ಯದ ಜನರೆಲ್ಲರೂ ತಾವಿರುವ ಸ್ಥಳದಿಂದಲೇ 13 ಸುತ್ತು ಸೂರ್ಯನಮಸ್ಕಾರ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸ್ವಾಮೀಜಿಗಳು ಕರೆ ನೀಡಿದರು.

Share