Published
6 months agoon
ಕೇಪ್ ಟೌನ್ : ಜನವರಿ 02 (ಯು.ಎನ್.ಐ.) ದಕ್ಷಿಣ ಆಫ್ರಿಕಾದ ಕೇಪ್ ಟೌನ್ನಲ್ಲಿರುವ ಸಂಸತ್ತಿನ ಉಭಯ ಸದನಗಳ ಕಟ್ಟಡದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯ ಕಾಲಮಾನದ ಪ್ರಕಾರ, ಬೆಳಿಗ್ಗೆ 5 ಗಂಟೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು.
ಪಾರ್ಲಿಮೆಂಟ್ ಕಟ್ಟಡದಿಂದ ಕಪ್ಪು ಹೊಗೆ ಬರುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಅಗ್ನಿ ಅವಘಡದಿಂದ ಕಟ್ಟಡಕ್ಕೆ ಹಾನಿಯಾಗುವ ಆತಂಕ ಎದುರಾಗಿದ್ದು, ಸದ್ಯಕ್ಕೆ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಸಂಸತ್ತಿನ ಮೇಲ್ಛಾವಣಿಯಿಂದ ಜ್ವಾಲೆಗಳು ಹೊರಬರುತ್ತಿದ್ದರೆ, ಮೈಲುಗಳಷ್ಟು ದೂರದಿಂದಲೂ ದಟ್ಟ ಕಪ್ಪು ಹೊಗೆಯನ್ನು ಕಾಣಬಹುದಾಗಿದೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ದೃಢಪಟ್ಟಿಲ್ಲ ಮತ್ತು ಕಟ್ಟಡದೊಳಗೆ ಯಾರಾದ್ರೂ ಇದ್ದರೆ ಅನ್ನೋ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಕೇಪ್ ಟೌನ್ ನಗರದ ಅಗ್ನಿಶಾಮಕ ವಕ್ತಾರ ಜೆರ್ಮೈನ್ ಕಾರ್ಲೆಸ್, ಛಾವಣಿಯ ಮೇಲಿನ ಬಿಟುಮೆನ್ (ನುಣಪಾಗಿ ಕಾಣಲು ಬಳಸಿರುವ ಪೆಟ್ರೋಲಿಯಂ) ಸಹ ಕರಗುತ್ತಿರುವುದು ಶಾಖದ ಮಟ್ಟವನ್ನು ತಿಳಿಸುತ್ತದೆ. ಕೆಲವು ಗೋಡೆಗಳಲ್ಲಿ ಬಿರುಕು ಉಂಟಾಗಿದ್ದು, ಕಟ್ಟಡದ ಕೆಲವು ಭಾಗ ಕುಸಿತ ಉಂಟಾಗಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳದಲ್ಲಿ 36 ಅಗ್ನಿಶಾಮಕ ಸಿಬ್ಬಂದಿ ಇದ್ದು, ಬೆಂಕಿಯನ್ನು ನಂದಿಸಲು ಹರಸಾಹಸಪಡುತ್ತಿದ್ದಾರೆ. ಬೆಳಗ್ಗೆ 5 ಗಂಟೆಗೆ ಅಲಾರಾಂ ಮೊಳಗಿದಾಗ ದುರ್ಘಟನೆ ಬೆಳಕಿಗೆ ಬಂದಿದೆ. ಕೇಪ್ ಟೌನ್ನಲ್ಲಿರುವ ಸಂಸತ್ತು ಮೂಲ ಮತ್ತು ಹಳೆಯ ಕಟ್ಟಡವನ್ನು ಒಳಗೊಂಡಂತೆ ಮೂರು ವಿಭಾಗಗಳನ್ನು ಮಾಡಲಾಗಿದೆ. ಅತ್ಯಂತ ಪುರಾತನ ಕಟ್ಟಡ ಇದಾಗಿದ್ದು, 1884 ರಲ್ಲಿ ಪೂರ್ಣಗೊಂಡಿದೆ.
#BREAKING Another Video:
– Fire at South African parliament in Cape Town#BreakingNews #capetown #Southafrica pic.twitter.com/bypyl8cb3J
— The HbK (@The5HbK) January 2, 2022
46 ವಲಸಿಗರ ಮೃತದೇಹ ಪತ್ತೆ; ಮಾನವ ಕಳ್ಳಸಾಗಣಿಕೆ ಶಂಕೆ
ಸ್ಕೂಟರ್ ನಲ್ಲಿ ಹೋಗ್ತಿದ್ದಾಗ ತಲೆ ಮೇಲೆ ಬಿದ್ದ ತೆಂಗಿನಕಾಯಿ; ಹೆಲ್ಮೆಟ್ ನಿಂದ ಉಳಿದ ಜೀವ
ಶ್ರೀಲಂಕಾ ಬಿಕ್ಕಟ್ಟು: ಶಾಲಾ ಕಾಲೇಜುಗಳು ಬಂದ್, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ
ದಕ್ಷಿಣ ಆಫ್ರಿಕಾದ ನೈಟ್ಕ್ಲಬ್ನಲ್ಲಿ 17 ಮಂದಿ ಶವವಾಗಿ ಪತ್ತೆ!
ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿಗೆ ಆಗಮಿಸಿದ ಪ್ರಧಾನಿ ಮೋದಿ
ಶ್ರೀಲಂಕಾಕ್ಕೆ ನೆರವು ನೀಡಲು ರಷ್ಯಾ ಸಿದ್ಧ: ಸಿರಿಸೇನಾ