Connect with us


      
ಕರ್ನಾಟಕ

‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾ ವೀಕ್ಷಿಸಲು ಶಾಸಕರಿಗೆ ಸಭಾಧ್ಯಕ್ಷರ ಆಹ್ವಾನ

Iranna Anchatageri

Published

on

ವಿಧಾನಸಭೆ/ಬೆಂಗಳೂರು: ಮಾರ್ಚ್ 14 (ಯು.ಎನ್.ಐ.) ಕಾಶ್ಮೀರ ಪಂಡಿತರ ಮೇಲಿನ ದೌರ್ಜನ್ಯದ ನೈಜ ಕಥಾಹಂದರವನ್ನು ಹೊಂದಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ವೀಕ್ಷಣೆಗೆ ವಿಧಾನಸಭಾ ಶಾಸಕರಿಗೆ ಹಾಗೂ ಸಚಿವರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ವಿಧಾನಸಭಾ ಸಚಿವಾಲಯದಿಂದ ಸಿನೆಮಾ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸದನದಲ್ಲಿ ಸಭಾಧ್ಯಕ್ಷ ಕಾಗೇರಿ ಪ್ರಕಟಿಸಿದರು. ಮಂತ್ರಿ ಮಾಲ್ ನಲ್ಲಿ ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಿಸಲು ಮಂಗಳವಾರ ಸಂಜೆ 6.45 ಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶಾಸಕರು, ಸಚಿವರು ಹಾಗೂ ವಿರೋಧ ಪಕ್ಷಗಳ ಸದಸ್ಯರು ಚಿತ್ರ ನೋಡಲು ಆಗಮಿಸಬೇಕೆಂದು ಸ್ಪೀಕರ್ ಮನವಿ ಮಾಡಿದರು.  ಇದೇ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,  ಕಾಶ್ಮೀರ ಫೈಲ್ಸ್ ಸಿನೆಮಾಕ್ಕೆ ರಾಜ್ಯದಲ್ಲಿ ಸರ್ಕಾರ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.

Share