Published
6 months agoon
ನವದೆಹಲಿ: ನ. 8 (ಯುಎನ್ಐ) ಸ್ಪೈಸ್ ಜೆಟ್ ಸೋಮವಾರ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಪ್ರಯಾಣಿಕರು ಟಿಕೆಟ್ ದರವನ್ನು ಮೂರು ಅಥವಾ 12 ತಿಂಗಳ ಕಂತುಗಳಲ್ಲಿ ಪಾವತಿಸಬಹುದಾಗಿದೆ.
ಈ ಯೋಜನೆಯಡಿ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ (ಬಡ್ಡಿ) ಮೂರು ತಿಂಗಳ ಇಎಂಐ ಅಡಿ ಹಣವನ್ನು ಪಾವತಿಸಬಹುದು ಎಂದು ಏರ್ಲೈನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇಎಂಐ ಯೋಜನೆಯನ್ನು ಪಡೆಯಲು ಪ್ರಯಾಣಿಕರು ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಅಥವಾ ವಿಐಡಿಯಂತಹ ವಿವರಗಳನ್ನು ಒದಗಿಸಬೇಕು. ಅಲ್ಲದೇ ಒಂದು-ಬಾರಿ ಬಳಸಬಹುದಾದ ಪಾಸ್ವರ್ಡ್ನೊಂದಿಗೆ ಪರಿಶೀಲಿಸಬೇಕು ಎಂದು ಅದು ಹೇಳಿದೆ.
ಗ್ರಾಹಕರು ತಮ್ಮ UPI ಐಡಿಯನ್ನು ಒದಗಿಸುವ ಮೂಲಕ ಮೊದಲ ಇಎಂಐನನ್ನು ಪಾವತಿಸಬೇಕಾಗುತ್ತದೆ. ನಂತರದ ಇಎಂಐನನ್ನು ಅದೇ UPI ID ಯಿಂದ ಕಡಿತಗೊಳಿಸಲಾಗುತ್ತದೆ.
ಇಎಂಐ ಯೋಜನೆಯನ್ನು ಪಡೆಯಲು ಪ್ರಯಾಣಿಕರು ಯಾವುದೇ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಒದಗಿಸಬೇಕಾಗಿಲ್ಲ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.