Connect with us


      




ನ್ಯಾಯಾಲಯ

ವೈವಾಹಿಕ ಅತ್ಯಾಚಾರ; ನ್ಯಾಯಮೂರ್ತಿಗಳ ಭಿನ್ನ ನಿಲುವು

Kumara Raitha

Published

on

ಬೆಂಗಳೂರು: ಮೇ ೧೧ (ಯು.ಎನ್.‌ಐ.) ಪತಿ ತನ್ನ ಪತ್ನಿಯೊಂದಿಗಿನ ಬಲವಂತದ ಸಂಬೋಗಕ್ಕೆ ವಿನಾಯತಿ ನೀಡುವ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 375 ನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌ ಭಿನ್ನ ನಿಲುವಿನ ತೀರ್ಪು ನೀಡಿದೆ.

ವೈವಾಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ನ್ಯಾಯಮೂರ್ತಿಗಳಾದ  ರಾಜೀವ್ ಶಕ್ಧೆರ್ ಮತ್ತು ಜಸ್ಟಿಸ್ ಹರಿ ಶಂಕರ್ ಅವರ ತೀರ್ಪಿನಲ್ಲಿ ಭಿನ್ನತೆಯಿದೆ. ವೈವಾಹಿಕ ಅತ್ಯಾಚಾರ ಕಾನೂನಿನಲ್ಲಿ ವಿನಾಯಿತಿಯು ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಎಂದು ತಾನು ನಂಬಿದ್ದೇನೆ ಎಂದು ನ್ಯಾಯಮೂರ್ತಿಹರಿ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಸುದೀರ್ಘ ವಿಚಾರಣೆಯ ನಂತರ ಅತ್ಯಾಚಾರ ಕಾನೂನಿನಡಿಯಲ್ಲಿ ಗಂಡಂದಿರಿಗೆ ನೀಡಲಾದ ವಿನಾಯಿತಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು  ತೀರ್ಪು ಕಾಯ್ದಿರಿಸಲಾಗಿತ್ತು. ವೈವಾಹಿಕ ಅತ್ಯಾಚಾರದ ಅಪರಾಧೀಕರಣದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಲು ದೆಹಲಿ ಹೈಕೋರ್ಟ್, ಕೇಂದ್ರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿತು.

ನ್ಯಾಯಮೂರ್ತಿಗಳ ತೀರ್ಪಿನಲ್ಲಿ ಭಿನ್ನತೆಯಿರುವುದರ ಕಾರಣ ವೈವಾಹಿಕ ಅತ್ಯಾಚಾರ ಸಂಬಂಧಿಸಿದ ಪ್ರಕರಣ ದೆಹಲಿ ಹೈಕೋರ್ಟಿನ ತ್ರಿ ಸದಸ್ಯ ಪೀಠಕ್ಕೆ ವರ್ಗಾವಣೆಯಾಗಬಹುದು  ಅಥವಾ  ಸುಪ್ರೀಮ್‌ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ.

Share