Connect with us


      




ಕ್ರೀಡೆ

BWF ವಿಶ್ವ ಚಾಂಪಿಯನ್‌ಶಿಪ್ ; ಕಿಡಂಬಿ ಶ್ರೀಕಾಂತ್ ಪರಾಭವ

Published

on

ಹುಯೆಲ್ವಾ (ಸ್ಪೇನ್), ಡಿ 19(ಯುಎನ್‌ ಐ) – ವಿಶ್ವ ಚಾಂಪಿಯನ್‌ಶಿಪ್ ಟೈಟಲ್‌ ಮುಡಿಗೇರಿಸಿಕೊಳ್ಳುವ ಸುವರ್ಣಾವಕಾಶವನ್ನು ಭಾರತದ ಕಿಡಂಬಿ ಶ್ರೀಕಾಂತ್ ಅವರು ಸ್ವಲ್ಪದರಲ್ಲಿ ಕಳೆದುಕೊಂಡಿದ್ದಾರೆ. ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ 22ನೇ ಶ್ರೇಯಾಂಕದ ಆಟಗಾರ ಸಿಂಗಾಪುರದ ಲೊ ಕಿಯೊನ್ ಯೊ ಎದುರು 15-21, 20-22 ನೇರ ಸೆಟ್ ಗಳಿಂದ ಕಿಡಂಬಿ ಪರಾಭವಗೊಂಡರು. 42 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 15ನೇ ಶ್ರೇಯಾಂಕದ ಶ್ರೀಕಾಂತ್ ಭಾರಿ ಹೋರಾಟ ನಡೆಸಿದರಾದರೂ ನಿರ್ಣಾಯಕ ಕ್ಷಣಗಳಲ್ಲಿ ಎದುರಾಳಿ ಮೇಲುಗೈ ಸಾಧಿಸಿದರು. ಇದರಿಂದ ಶ್ರೀಕಾಂತ್ ರಜತ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ವೃತ್ತಿ ಜೀವನದ ಮೊದಲ ಪ್ರಶಸ್ತಿಯನ್ನು ಕಿಯೋನ್ ಗೆದ್ದುಕೊಂಡರು. ಈ ಸಾಧನೆ ಮಾಡಿದ ಮೊದಲ ಸಿಂಗಾಪುರದ ಶಟ್ಲರ್ ಎಂಬ ಇತಿಹಾಸ ನಿರ್ಮಿಸಿದರು.

ಆದರೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದಿಂದ ಚಿನ್ನ ಗೆದ್ದ ಏಕೈಕ ಭಾರತೀಯ ಆಟಗಾರ್ತಿ ಪಿವಿ ಸಿಂಧು. ಈ ಟೂರ್ನಿಯಲ್ಲಿ ಸತತ ಎರಡು ಬಾರಿ ಬೆಳ್ಳಿ ಗೆದ್ದಿರುವ ಸಿಂಧು, 2019ರಲ್ಲಿ ವಿಜೇತೆಯಾಗಿ ಇತಿಹಾಸ ನಿರ್ಮಿಸಿದ್ದರು.

ಕ್ರೀಡೆ

ಧಾವನ್‌ ದಾಖಲೆ ಮುರಿದು ಸಂಚಲನ ಸೃಷ್ಟಿಸಿದ ರಾಜ್ ಬಾವಾ..

Published

on

By

ಉಗಾಂಡ ಜ 23(ಯುಎನ್‌ ಐ) ಅಂಡರ್ 19 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ವಿಜಯ ಯಾತ್ರೆ ಮುಂದುವರಿದಿದೆ. ಉಗಾಂಡದೊಂದಿಗೆ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಯುವ ಭಾರತ ತಂಡ 326 ರನ್‌ಗಳಿಂದ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿತು. ಮತ್ತೊಂದೆಡೆ 406 ರನ್ ಗಳ ಬೃಹತ್ ಗುರಿಯ ಬೆನ್ನಟ್ಟಿದ ಉಗಾಂಡ ಕೇವಲ 79 ರನ್ ಗಳಿಗೆ ಆಲೌಟ್ ಆಯಿತು. ಈ ಗೆಲುವಿನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ ಮನ್‌ ರಾಜ್ ಬಾವಾ (ಔಟಾಗದೆ 162), ಆರಂಭಿಕ ಆಟಗಾರ ಅಂಗ್‌ ಕೃಷ್ಣ ರಘುವಂಶಿ (144) ಪ್ರಮುಖ ಪಾತ್ರ ವಹಿಸಿದರು.

ಆದರೆ, 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ರಾಜ್ ಬಾವಾ ಸೃಷ್ಟಿಸಿದ್ದಾರೆ. ಇದುವರೆಗೆ ಶಿಖರ್ ಧವನ್ (155) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ರಾಜ್ ಬಾವಾ ಮುರಿದಿದ್ದಾರೆ. ಅದೇ ರೀತಿ ಈ ಬಾರಿಯ ವಿಶ್ವಕಪ್ ನಲ್ಲಿ ರಾಜ್ ಬಾವಾ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ನಲ್ಲಿ ಅದ್ಬುತವಾಗಿ ಮಿಂಚಿದ್ದರು. ಈ ಆಲ್ ರೌಂಡರ್ ಅಂಡರ್-19 ಏಷ್ಯನ್ ಕಪ್ ಭಾರತ ಗೆಲ್ಲುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿತ್ತು.

Continue Reading

ಕ್ರೀಡೆ

SA vs IND: ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯ.. ವಿರಾಟ್ ಕೊಹ್ಲಿ ದೂರ!

Published

on

By

ಕೇಪ್ ಟೌನ್, ಜ 23(ಯುಎನ್‌ ಐ) ಕೇಪ್‌ ಟೌನ್‌ ನಲ್ಲಿಂದು ದಕ್ಷಿಣ ಆಫ್ರಿಕಾ – ಭಾರತ ನಡುವಣ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಈಗಾಗಲೇ ಎರಡು ಏಕ ದಿನ ಪಂದ್ಯಗಳಲ್ಲಿ ಸೋತಿರುವ ಭಾರತ ಸರಣಿ ಕಳೆದುಕೊಂಡಿದೆ. ಎರಡೂ ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ಕೆ .ಎಲ್ .ರಾಹುಲ್ ಸಫಲರಾಗಿಲ್ಲ… ರಾಹುಲ್ ದ್ರಾವಿಡ್ ಕೂಡ ಮುಖ್ಯ ಕೋಚ್ ಆಗಿ ಪ್ರಮುಖ ಆಟಗಾರರೊಂದಿಗಿನ ಮೊದಲ ಪ್ರವಾಸದಲ್ಲಿ ತೃಪ್ತಿಕರ ಫಲಿತಾಂಶ ಪಡೆಯಲಿಲ್ಲ. ಆದರೆ, ಅಂತಿಮ ಪಂದ್ಯದಲ್ಲಿ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಿದೆಯಂತೆ.

ಮೊದಲೆರಡು ಏಕ ದಿನ ಪಂದ್ಯಗಳಲ್ಲಿ ವಿಫಲರಾಗಿದ್ದ ಭುವನೇಶ್ವರ್ ಕುಮಾರ್ ಅಂತಿಮ ಪಂದ್ಯದಲ್ಲಿ ಸ್ಥಾನ ತಪ್ಪಲಿದ್ದು, ಅವರ ಸ್ಥಾನಕ್ಕೆ ದೀಪಕ್ ಚಹಾರ್ ಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿದುಬಂದಿದೆ. ಅದೇ ರೀತಿ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆತನ ಸ್ಥಾನದಲ್ಲಿ ಸೂರ್ಯಕುಮಾರ್‌ ಯಾದವ್‌ ಗೆ ಅವಕಾಶ ನೀಡುವ ಆಲೋಚನೆ ತಂಡದಲ್ಲಿದೆ. ಮೊದಲೆರಡು ಏಕ ದಿನ ಪಂದ್ಯಗಳಲ್ಲಿ ವೈಫಲ್ಯ ಕಂಡಿರುವ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಅವಕಾಶ ಕೈತಪ್ಪುವ ಸಾಧ್ಯತೆ ಇದೆ. ಒಂದು ವೇಳೆ ಶ್ರೇಯಸ್‌ ಅಯ್ಯರ್‌ ಹೊರಗುಳಿದರೆ ಅವರ ಸ್ಥಾನಕ್ಕೆ ರುತುರಾಜ್‌ ಗಾಯಕ್‌ವಾಡ್‌ ಕಣಕ್ಕಿಳಿಯಲಿದ್ದಾರೆ.

Continue Reading

ಕ್ರೀಡೆ

ಐಪಿಎಲ್ 2022ರ 15ನೇ ಆವೃತ್ತಿ: ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭ

Published

on

ನವದೆಹಲಿ: ಜನೆವರಿ 22 (ಯು.ಎನ್.ಐ.) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರ 15ನೇ ಆವೃತ್ತಿಯು ಮಾರ್ಚ್ ಕೊನೆಯ ವಾರದಿಂದ ಪ್ರಾರಂಭವಾಗಿ ಮೇ ಕೊನೆಯ ವಾರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಹೇಳಿದರು.

ಐಪಿಎಲ್) 2022ರ ಲೀಗ್ ಅನ್ನು ಭಾರತದಲ್ಲಿ ಆಯೋಜಿಸಲು ಹೆಚ್ಚಿನ ಫ್ರಾಂಚೈಸಿ ಮಾಲೀಕರು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಶನಿವಾರ ಹೇಳಿದ್ದಾರೆ. ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಕಳೆದ ಎರಡು ಆವೃತ್ತಿಗಳನ್ನು ಅನ್ಯ ದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಈ ಬಾರಿಯಾದರೂ ಪಂದ್ಯಗಳನ್ನು ತವರಿನಲ್ಲಿ ಆಡುವ ಕುರಿತು ಆಲೋಚಿಸಿ ಮಂಡಳಿಯು ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಶಾ ಹೇಳಿದರು.

ಫ್ರಾಂಚೈಸಿ ಮಾಲೀಕರು ಮತ್ತು ಐಪಿಎಲ್ ಆಡಳಿತ ಮಂಡಳಿ ಸದಸ್ಯರೊಂದಿಗೆ ವರ್ಚುವಲ್ ಸಭೆ ನಡೆಸಿದ ನಂತರ ಮಾತನಾಡಿದ ಜಯ್ ಶಾ, ಐಪಿಎಲ್ 2022 ಮಾರ್ಚ್ ಕೊನೆಯ ವಾರದಿಂದ ಪ್ರಾರಂಭವಾಗಲಿದೆ ಮತ್ತು ಮೇ ಕೊನೆಯ ವಾರದವರೆಗೆ ನಡೆಯಲಿದೆ. ಐಪಿಎಲ್ 2022ರಲ್ಲಿ 10 ತಂಡಗಳು ಆಡಲಿವೆ. ಏಕೆಂದರೆ ಲಕ್ನೋ ಮತ್ತು ಅಹಮದಾಬಾದ್‌ನಿಂದ ಎರಡು ಹೊಸ ತಂಡಗಳು ಪಂದ್ಯಾವಳಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಹೇಳಿದರು.

ಐಪಿಎಲ್ 2022 ರ ಮೆಗಾ ಹರಾಜು ಕೂಡ ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ, ಹರಾಜಿನ ಮೊದಲು ಮಂಡಳಿಯು ಎಲ್ಲೆಲ್ಲಿ ನಡೆಯಲಿದೆ ಎಂದು ಸ್ಥಳಗಳ ಬಗ್ಗೆ ಮೊದಲೇ ತಿಳಿಸಲಾಗುತ್ತದೆ ಎಂದು ಹೇಳಿದರು.

Continue Reading
Advertisement
ಅಂಕಣ49 mins ago

ಎಳವೆಯಿಂದ ರಂಗಭೂಮಿ

ನಾದಾಂಕಣ – ಡಾ. ನಾ. ದಾಮೋದರ ಶೆಟ್ಟಿ ಭಾರತೀಯ ಹಾಗೂ ಗ್ರೀಕ್‌ ರಂಗಭೂಮಿಗೆ ಬಹುದೊಡ್ಡ ಪರಂಪರೆಇದೆ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಯುರೋಪಿನ ರಂಗಭೂಮಿಯಾಗಲೀ ರಷ್ಯಾ, ಅಮೇರಿಕಾ...

ದೇಶ50 mins ago

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು,...

ಹಣಕಾಸು2 hours ago

ಕೆಲಸ ಬದಲಾಯಿಸಿದ್ದೀರಾ? ಚಿಂತೆ ಬಿಡಿ.. ನಿಮ್ಮ ನೆರವಿಗೆ ಇದೆ ಇಪಿಎಫ್ಒ!

ಬೆಂಗಳೂರು: ಜನೆವರಿ 23 (ಯು.ಎನ್.ಐ.) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ...

ದೇಶ2 hours ago

ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ… ದೇಶಾದ್ಯಂತ ಪರಾಕ್ರಮ ದಿನವಾಗಿ ಆಚರಣೆ

ನವದೆಹಲಿ, ಜ ೨೩( ಯುಎನ್ ಐ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ನೇ ಜನ್ಮಜಯಂತಿ ಇಂದು. ದೇಶಾದ್ಯಂತ ಪರಾಕ್ರಮ ದಿನವಾಗಿ ನೇತಾಜಿ...

ಕರ್ನಾಟಕ2 hours ago

ಇಡೀ ವರ್ಷ ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆಗೆ ತೀರ್ಮಾನ: ಸಿಎಂ

ಬೆಂಗಳೂರು : ಜನೆವರಿ 23 (ಯು.ಎನ್.ಐ.) ರಾಜ್ಯ ಸರ್ಕಾರದ ವತಿಯಿಂದ ವರ್ಷವಿಡೀ ನೇತಾಜಿ ಸುಭಾಷ್ ಚಂದ್ರಬೋಸ್ ರವರ 125ನೇ ಜನ್ಮ ದಿನಾಚರಣೆಯನ್ನ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ...

ಅಂಕಣ2 hours ago

ಸ್ವಾತಂತ್ರ್ಯಕ್ಕಿಂತ ದೊಡ್ಡದು ಇನ್ಯಾವುದಿದೆ ?

‌ಅಂಕಣ: ದಿಟನುಡಿ -೩ ಕಳೆದ ವಾರ ನನ್ನ ಕೈರೋಪ್ರಾಕ್ಟರ್ ರೇ ಬಳಿ ಹೋಗಿದ್ದೆ. ಏಕೋ ಗೊತ್ತಿಲ್ಲ ಕೆಲ ದಿನಗಳ ಹಿಂದೆ ಸೊಂಟ ಹಿಡಿದಿತ್ತು. ಏಳಲು, ಕೂರಲು, ನಿಲ್ಲಲು...

ದೇಶ2 hours ago

ಪಂಜಾಬ್ ಚುನಾವಣೆ: ಕೆಂಪು ಕೋಟೆ ಹಿಂಸಾಚಾರದ ಆರೋಪಿಗೆ ರೈತ ಸಂಘಟನೆಯಿಂದ ಟಿಕೆಟ್!

ಚಂಡೀಗಢ: ಜನೆವರಿ 23 (ಯು.ಎನ್.ಐ.) ರೈತರ ಸಂಘಟನೆ ಯುನೈಟೆಡ್ ಸಮಾಜ ಮೋರ್ಚಾ ಪಂಜಾಬ್ ವಿಧಾನಸಭಾ ಚುನಾವಣೆಗೆ 35 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ...

ಕರ್ನಾಟಕ3 hours ago

ನ್ಯಾಯಮೂರ್ತಿ ಕೆ ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಬೆಂಗಳೂರು: ಜನವರಿ 23 (ಯು.ಎನ್.ಐ.)  ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ನ್ಯಾಯಮೂರ್ತಿ ಮಂಜುನಾಥ್ ಅವರು...

ಅಂಕಣ3 hours ago

ಸ್ವಾತಂತ್ರ್ಯ ಕೇವಲ ಮನುಷ್ಯನ ಹಕ್ಕೆ?

ಅ‌ಂಕಣ- ಖಚಿತ ನೋಟ ಹೆಸರಾಂತ ಪ್ರಾಣಿಹಕ್ಕುಗಳ ಪ್ರತಿಪಾದಕ, ಪೀಟರ್ ಸಿಂಗರ್ ಹೇಳುವಂತೆ, ಮನುಷ್ಯ ತನ್ನ ಇತಿಹಾಸದಲ್ಲಿ ಮಾಡಿರುವ ಜಾತಿ ಮತ್ತು ಲಿಂಗ ಆಧಾರಿತ ಶೋಷಣೆಯ ಬಗ್ಗೆ ಇಂದು...

ವಿದೇಶ3 hours ago

ಅಫ್ಘಾನಿಸ್ತಾನ ಬಾಂಬ್ ಸ್ಫೋಟ: 7 ಮಂದಿ ಸಾವು

ಹೆರಾತ್: ಜನೆವರಿ 23 (ಯು.ಎನ್.ಐ.) ಅಫ್ಘಾನಿಸ್ತಾನದ ಪಶ್ಚಿಮ ನಗರವಾಗಿರುವ ಹೆರಾತ್‌ನಲ್ಲಿ ಮಿನಿ ವ್ಯಾನ್‌ ಒಳಗೆ ಇಟ್ಟಿದ್ದ ಬಾಂಬ್ ಸ್ಫೋಟಗೊಂಡು 7 ಮಂದಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರೂ...

ಟ್ರೆಂಡಿಂಗ್

Share